ದೇವ ಸಂಪ್ರೀತಿಗೆ ಬಲಿ ನೀಡಿದ ದಿನ ಬಕ್ರೀದ್‌

| Published : Jun 18 2024, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ: ಬಕ್ರೀದ್ ಹಬ್ಬದ ಅಂಗವಾಗಿ ಪಟ್ಟಣದ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ: ಬಕ್ರೀದ್ ಹಬ್ಬದ ಅಂಗವಾಗಿ ಪಟ್ಟಣದ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.ಈ ಸಂದರ್ಭದಲ್ಲಿ ಡಾ.ಮಿನಹಾಜುದ್ದೀನ ಖಾಜಿ ಮಾತನಾಡಿ, ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವು ಪ್ರವಾದಿಗಳು ತಮ್ಮ ಪುತ್ರ ಇಸ್ಮಾಯಿಲ್‌ರನ್ನು ದೇವ ಸಂಪ್ರೀತಿಗಾಗಿ ಬಲಿ ನೀಡಲು ಮುಂದಾದ ಅವಿಸ್ಮರಣೀಯ ಘಟನೆಯನ್ನು ಸ್ಮರಿಸುವ ದಿನವಾಗಿದೆ. ನಾವೆಲ್ಲರೂ ದೇವನಲ್ಲಿ ಅಚಲವಾದ ವಿಶ್ವಾಸವನ್ನಿಟ್ಟು ಧರ್ಮದ ಆಚರಣೆ ಮತ್ತು ನಿಯಮಗಳನ್ನು ಪರಿಪಾಲಿಸಿ ಧರ್ಮವಂತರಾಗಬೇಕು. ಅಲ್ಲಾಹನಿಗೆ ಪ್ರಾಮಾಣಿಕ ಗುಣ ಅತ್ಯಂತ ಪ್ರಿಯವಾದದ್ದು. ಅದನ್ನು ಬೆಳೆಸಿಕೊಂಡರೆ ಪುಣ್ಯ ಪ್ರಾಪ್ತವಾಗುತ್ತದೆ ಎಂದರು.ಅನ್ಯಾಯ ಮಾರ್ಗ ತುಳಿಯಬಾರದು ಶ್ರಮವಹಿಸಿ ದುಡಿದ ಹಣದಿಂದ ದೊರಕುವ ಸಂತೃಪ್ತಿ ಪಾಪದ ದುಡ್ಡಿನಿಂದ ಎಂದೂ ದೊರಕುವುದಿಲ್ಲ. ಬಡವರ ಕಷ್ಟಗಳಿಗೆ ಸ್ಪಂದಿಸಬೇಕು. ಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸಿದರೆ ದೇವರು ಸಂತುಷ್ಟನಾಗುತ್ತಾನೆ. ಪ್ರವಾದಿ ಮೊಹಮ್ಮದರ ಆದರ್ಶಗಳನ್ನು ಅನುಸರಿಸಿ, ದುಶ್ಚಟಗಳಿಂದ ದೂರವಿದ್ದು, ಇತರ ಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.ಧಾರ್ಮಿಕ ಮುಖಂಡ ಸೈಯ್ಯದ್ ಶಕೀಲ ಅಹಮದ ಖಾಜಿ, ಹಫೀಜ ಇಬ್ರಾಹಿಂ ಮುಲ್ಲಾ, ಖಾಜಾಹುಸೇನ ಡೋಣಿ, ಅಬ್ದುಲ್ ರೆಹಮಾನ ಎಕೀನ್‌, ಗನಿಸಾಬ ಲಾಹೋರಿ, ಅಲ್ಲಾಭಕ್ಷ ನಮಾಜಕಟ್ಟಿ, ಸಿಕಂದರ ವಠಾರ, ಅಬ್ದುಲ್ ರಜಾಕ್ ಮನಗೂಳಿ, ಸೈಯದ್ ಫಸಿಯುದ್ದೀನ ಖಾಜಿ, ಮೆಹಬೂಬ್‌ ಚೋರಗಸ್ತಿ, ಇಬ್ರಾಹಿಂ ಮನ್ಸೂರ, ಹಸನಸಾಬ ಮನಗೂಳಿ, ಅಬ್ದುಲ್ ರೆಹಮಾನ ನಮಾಜಕಟ್ಟಿ, ದಾದಾಪೀರ ಚೌದ್ರಿ, ಶಂಸುದ್ದೀನ ನಾಲಬಂದ, ಕೆ.ಐ.ಸಗರ, ಎಂ.ಎ.ಮೇತ್ರಿ, ರೋಶನ ಡೋಣಿ, ಅಬ್ದುಲ್ ಸತ್ತಾರ ಅವಟಿ, ಫಯಾಜ ಖಾಜಿ, ಮುಜಾಹೀದ ನಮಾಜಕಟ್ಟಿ, ತನ್ವೀರ್‌ ಮನಗೂಳಿ, ನಬಿ ಹುಣಶ್ಯಾಳ, ಶಫೀಕ ಇನಾಂದಾರ ಮುಂತಾದವರು ಇದ್ದರು.