ಮೊದಲ ಬಾರಿಗೆ ಬಂಜಾರ ಸಾಹಿತ್ಯ ಪರಿಷತ್‌ ಆರಂಭ

| Published : Jun 23 2025, 11:47 PM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಅಲೆಮಾರಿ ಸಮುದಾಯಗಳಲ್ಲಿ ಮತ್ತು ಬುಡಕಟ್ಟು ಪಂಗಡಗಳಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಂಜಾರ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿದೆ. ಬಂಜಾರ ಸಮುದಾಯ, ಬಂಜಾರರ ಇತಿಹಾಸ ರೋಚಕವಾಗಿದ್ದು, ಇಂದು ಸಾಹಿತ್ಯ ಪರಿಷತ್‌ನಿಂದ ಅವುಗಳನ್ನು ದಾಖಲಿಸುವ ಕೆಲಸ ಆಗಬೇಕು ಎಂದು ಹಿರಿಯ ಸಾಹಿತಿ ಪಿ.ಕೆ.ಖಂಡೋಬಾ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಲೆಮಾರಿ ಸಮುದಾಯಗಳಲ್ಲಿ ಮತ್ತು ಬುಡಕಟ್ಟು ಪಂಗಡಗಳಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಂಜಾರ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿದೆ. ಬಂಜಾರ ಸಮುದಾಯ, ಬಂಜಾರರ ಇತಿಹಾಸ ರೋಚಕವಾಗಿದ್ದು, ಇಂದು ಸಾಹಿತ್ಯ ಪರಿಷತ್‌ನಿಂದ ಅವುಗಳನ್ನು ದಾಖಲಿಸುವ ಕೆಲಸ ಆಗಬೇಕು ಎಂದು ಹಿರಿಯ ಸಾಹಿತಿ ಪಿ.ಕೆ.ಖಂಡೋಬಾ ಹೇಳಿದರು.ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಹುಬ್ಬಳ್ಳಿ, ವಿಜಯಪುರ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು. ಇಂದಿರಾನಗರ ಮಂದೆವಾಲದ ಸುಭಾಷಚಂದ್ರ ಮಹಾರಾಜರು ಸಾಹಿತಿಗಳಿಗೆ ಆಶೀರ್ವಚನ ನೀಡಿದರು.

ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಸಾಹಿತಿಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸಿಮೀತವಾಗದೆ ಬಂಜಾರರ ಸಮುದಾಯದಲ್ಲಿ ಇರುವ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ತಮ್ಮ ಲೇಖನಿಯಿಂದ ಬರೆದು ಸರ್ಕಾರಗಳ ಗಮನಕ್ಕೆ ತರಬೇಕು.ಈ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.ಮಾಜಿ ಶಾಸಕ ಮನೋಹರ ಐನಾಪುರ ಅವರು ಸಂತೋಷ ನಾಯಕ ರಚಿಸಿದ ಮುನಿ ಸುಭಾಷಚಂದ್ರ ಮಹಾರಾಜ ಅವರ ಜೀವನ ಚರಿತೆ ಹಾಗೂ ಸಂತೋಷ ರಾಠೋಡ ರಚಿಸಿದ ಮಾರೊ ಗೋರ್ ಕಟಮಾಳೋ ಮತ್ತು ವಸಂತ ಚವ್ಹಾಣ ಅವರು ರಚಿಸಿದ ಏಕವೇನ ಚಾಲನು ಈ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

ಇದೇ ಕಾರ್ಯಕ್ರಮದಲ್ಲಿ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಶ್ರೀಕಾಂತ ಜಾಧವ ಪದಾಧಿಕಾರಿಗಳಿಗೆ ಪದಗ್ರಹಣ ಪ್ರಮಾಣ ಪತ್ರ ವಿತರಿಸಿ, ಪ್ರಮಾಣವಚನವನ್ನು ಬೋಧಿಸಿದರು.

ಸಾಹಿತಿ ಇಂದುಮತಿ ಲಮಾಣಿ, ಆರ್‌.ಬಿ.ನಾಯಕ, ಛತ್ರಪ್ಪ ತಂಬೂರಿ, ಜಿಲ್ಲಾ ಬಂಜಾರಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂತೋಷ ನಾಯಕ, ಮುಖಂಡರಾದ ರಾಜಪಾಲ ಚವ್ಹಾಣ, ಸಂಜೀವ ರಾಠೋಡ, ರಾಜು ಜಾಧವ, ಪಿ.ಟಿ.ನಾಯಕ, ರುಕ್ಮಿಣಿ ಚವ್ಹಾಣ, ಶಾರದಾ ಲಮಾಣಿ, ಡಾ.ಸುರೇಖಾ ರಾಠೋಡ, ಚಂದು ಜಾಧವ, ಡಾ.ಬಾಬು ಲಮಾಣಿ, ವಸಂತ ಚವಾಣ, ಸಂತೋಷ ರಾಠೋಡ ಮತ್ತು ಸಮುದಾಯದ ಮುಖಂಡರು, ಹಿರಿಯರು ಉಪಸ್ಥಿತರಿದ್ದರು.

ಜಯರಾಮ ಚವ್ಹಾಣ ನಿರೂಪಿಸಿದರು. ತಾರಾನಾಥ ಸ್ವಾಗತಿಸಿದರು. ಕಲಾಶ್ರೀ ಚವ್ಹಾಣ ವಂದಿಸಿದರು.

---

ಕೋಟ್‌ಸಾಹಿತ್ಯೀಕವಾಗಿ ನಮ್ಮ ಬಂಜಾರ ಸಮುದಾಯ ಮುನ್ನೆಲೆಗೆ ಬರಬೇಕಾಗಿದೆ. ಸಮುದಾಯದಲ್ಲಿ ಸಾಹಿತ್ಯ ಕುರಿತು ಜಾಗೃತಿ ಮೂಡಿಸಬೇಕಾಗಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹಿರಿಯ ಸಾಹಿತಿಗಳ ಮತ್ತು ಮುಖಂಡರ ಮಾರ್ಗದರ್ಶನ ಪಡೆದು ನಾವೇಲ್ಲ ಮುಂದೆ ಸಾಗಬೇಕು.ಬಾಬುರಾಜೇಂದ್ರ ನಾಯಕ, ತುಳಸಿಗಿರೀಶ ಫೌಂಡೇಷನ್‌ ಅಧ್ಯಕ್ಷರು