ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅ.3ರಿಂದ 13ರ ವರೆಗೆ ಜರುಗಲಿದೆ.ಪ್ರತಿ ದಿನ ಬೆಳಗ್ಗೆ 9 ರಿಂದ ಚಂಡಿಕಾಯಾಗ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5.30ರಿಂದ 9ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ರಿಂದ ವಿಶೇಷ ಪೂಜೆ, ರಂಗ ಪೂಜೆ, ಸುಹಾಸಿನಿ ಪೂಜೆ ಜರುಗಲಿದೆ.
ಅ.3ರಂದು ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಶಾಸಕ ಉಮಾನಾಥ್ ಕೋಟ್ಯಾನ್, ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ, ಮಾನಂಪಾಡಿಯ ಆಡಳಿತ ಮೊಕ್ತೇಸರ ಪುರಂದರ ಡಿ. ಶೆಟ್ಟಿಗಾರ್ ಮತ್ತು ಉದ್ಯಮಿ ಶರತ್ ಎನ್. ಸಾಲ್ಯಾನ್ ಮುಂಬೈ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಂಜೆ 5.30ರಿಂದ 9 ರ ವರೆಗೆ ನಾಟ್ಯಾರಾಧನೆ ಕಲಾ ಕೇಂದ್ರ ಊರ್ವ ಮಂಗಳೂರು.ತಂಡದಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ ವೈವಿಧ್ಯ ನಡೆಯಲಿದೆ.ಅ.4ರಂದು ಶುಕ್ರವಾರ ಭಜನಾ ಕಾರ್ಯಕ್ರಮ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದ ಮೂಲ್ಕಿ ವತಿಯಿಂದ 5.30 ರಿಂದ 7ರ ವರೆಗೆ ಮತ್ತು ಭರತನಾಟ್ಯವಿದೂಷಿ ಶ್ರೀಮತಿ ರಮ್ಯಾಚ೦ದ್ರ ನಟನಂ ಭರತನಾಟ್ಯ ತರಬೇತಿ ಕೇಂದ್ರದ ತಂಡದಿಂದ 7 ರಿಂದ 9ರ ತನಕ ನೃತ್ಯ ಕಾರ್ಯಕ್ರಮ ನಡೆಯಲಿದೆ. 5ರಂದು ನೃತ್ಯ ವಿದೂಷಿ ಭಾರತಿ ಸುರೇಶ್ ‘ಶಾರದ ನಾಟ್ಯಾಲಯ’ದ ವಿದ್ಯಾರ್ಥಿಗಳಿಂದ ಭರತನಾಟ್ಯ, ನೃತ್ಯ ಗುರು ವಿದೂಷಿ ರೇಷ್ಮಾ ನಿರ್ಮಲ್ ಭಟ್ ಮತ್ತು ಶಿಷ್ಯ ವೃಂದದವರಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. 6ರಂದು ಯಕ್ಷಗಾನ ತಾಳಮದ್ದಳೆ ಪ್ರಸಂಗ ‘ಶ್ರೀ ರಾಮ ನಿರ್ಯಾಣ’ವು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ತಾಳಮದ್ದಳೆ ಬಳಗದ ಪ್ರಸಿದ್ಧ ಅರ್ಥದಾರಿಗಳಿಂದ (ಸಂಜೆ 4 ರಿಂದ ರಾತ್ರಿ 8ರ ವರೆಗೆ) ಮತ್ತು ಶ್ರೀ ಶ್ರೀಖರ ನಾರಾಯಣ ಕಾರ್ಕಳ ಹಾಗೂ ಇವರ ಬಳಗದವರಿಂದ ( 8 ರಿಂದ ರಾತ್ರಿ 9.30ರ ವರೆಗೆ) ವೇಣು ವಾದನ ನಡೆಯಲಿದೆ.
ಅ.7ರಂದು ಕದ್ರಿ ಮಹಿಳಾ ಯಕ್ಷ ಕೂಟ ಕದ್ರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಬಳಗದಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ - ಜಾಂಬವತಿ ಕಲ್ಯಾಣ ಸಂಜೆ5 .30ರಿಂದ ನಡೆಯಲಿದೆ. ಅನ್ನಪೂರ್ಣ ರಿತೀಶ್ ಬಳಗದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. 8ರಂದು ಶರತ್ ಹಳೆಯಂಗಡಿ ಬಳಗದಿಂದ ಶಾಸ್ತ್ರೀಯ ಗೀಟಾರ್ ವಾದನ ಸಂಜೆ 5.30ರಿಂದ 8 ರ ವರೆಗೆ ಹಾಗೂ ಸ್ಕಂದ ಮಾತಾ ನಾಟ್ಯಾಲಯ ವಿದೂಷಿ ಸುನೀತ ಉಪಾಧ್ಯಾಯ ಹಾಗೂ ಇವರ ತ೦ಡದವರಿಂದ (7.30 ರಿಂದ 9ರ ವರೆಗೆ) ಭರತನಾಟ್ಯ ನಡೆಯಲಿದೆ. ಅ.9ರಂದು ತರಂಗಿಣಿ ಸಂಗೀತ ಶಾಲೆ ಉಮೇಶ್ ನಾಯಕ್ ಅವರ ಬಳಗಿಂದ ಕೊಳಲು ವಾದನ 5.30ರಿಂದ 8 ರವೆಗೆ ಹಾಗೂ ಸಂಸ್ಕೃತಿ ಆರ್ಟ್ಸ್ ಹೊಸಬೆಟ್ಟು ಬಳಗದಿಂದ ಭರತಾನ್ಯ ರಾತ್ರಿ 8ರಿಂದ ನಡೆಯಲಿದೆ. ಅ.1ರಂದು ತಡಂಬೈಲ್ ಸುರತ್ಕಲ್ ಶ್ರೀದುರ್ಗಾಂಬ ಮಹಿಳಾ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ- ಸುದರ್ಶನ ವಿಜಯ ಮಧ್ಯಾಹ್ನ 2 ರಿಂದ ಸಂಜೆ 4.3 ರ ವರೆಗೆ ಮತ್ತು ಕಲಾವತಿ ಪ್ರೇಮಾನಾಥ್ ಮತ್ತು ಆದರ್ಶ್ ಎಸ್.ಜೆ. ಶಿಷ್ಯರಿಂದ ಭಕ್ತಿಗಾನ ವೈಭವ ಸಂಜೆ 5.30ರಿಂದ ಹಾಗೂ ಚಂದ್ರಕಲಾ ಆಚಾರ್ ನೇತೃತ್ವದ ಶಾಂತಿ ಕಲಾ ಕೇಂದ್ರದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.11ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದದಿಂದ ಭಜನಾ ಕಾರ್ಯಕ್ರಮ, ನೃತ್ಯ ನಿರ್ದೇಶಕಿ ರೋಹಿಣಿ ಉದಯ್ ಅವರ ಶ್ರೀದೇವಿ ಕಲಾಕೇ೦ದ್ರ ಪುತ್ತೂರು ಬಳಗದಿಂದ ನೃತ್ಯರಂಜನಿ ನಾಟ್ಯ ಕಾರ್ಯಕ್ರಮ ನಡೆಯಲಿದೆ. 12ರಂದು ಕುಂಬ್ಳೆ ನಾಟ್ಯ ವಿದ್ಯಾನಿಲಯದ ವಿದೂಷಿ ಡಾ. ವಿದ್ಯಾಲಕ್ಷ್ಮೀ ಕುಂಬ್ಳೆ ಅವರಿಂದ ಭರತನಾಟ್ಯ ಕಾರ್ಯಕ್ರಮ, ಶಿವಪ್ರಣಾಮ್ ಸ್ಕೂಲ್ ಆಫ್ ಡ್ಯಾನ್ಸ್ ತಂಡದಿಂದ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ.13ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ತಾಳಮದ್ದಳೆ ಬಳಗದ ಅರ್ಥದಾರಿಗಳಿಂದ ಮಧ್ಯಾಹ್ನ 2 ರಿಂದ 4.30ರ ವರೆಗೆ ಯಕ್ಷಗಾನ ತಾಳಮದ್ದಳೆ ಮತ್ತು ರಾಧಿಕ ಶೆಟ್ಟಿ ಶಿಷ್ಯೆಯರಿಂದ ಸಂಜೆ 5ರಿಂದ 6 ಗಂಟೆ ವರೆಗೆ ಭರತನಾಟ್, ಎಂ.ಎಸ್. ಗಿರಿಧರ್ ಹಾಗೂ ವಸುಧಾ ಗಿರಿಧರ್ ಬೆ೦ಗಳೂರು ಇವರಿಂದ ಸಂಜೆ 6 ರಿಂದ 7 ಗಂಟೆಯ ವರೆಗೆ ದಾಸ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ್ ಶೆಟ್ಟಿ, ಆಡಳಿತ ಮೊಕ್ತೇಸರ ದುಗ್ಗಣ್ಣ ಸಾವಂತರು ಮತ್ತು ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.