ಸಾರಾಂಶ
ನಮ್ಮ ಕರ್ನಾಟಕ ಸೇನೆಯ ನೂತನ ಜಿಲ್ಲಾಧ್ಯಕ್ಷರಾಗಿ ಸುರೇಶ್ ನಾಯಕ ಅವರನ್ನು ರಾಜ್ಯಾಧ್ಯಕ್ಷ ಎಂ.ಬಸವರಾಜು ಪಡುಕೋಟೆ ಅವರು ನೇಮಕ ಮಾಡಿದ್ದಾರೆ ಎಂದು ಸೇನೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಉಸ್ಮಾನ್ ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಮ್ಮ ಕರ್ನಾಟಕ ಸೇನೆಯ ನೂತನ ಜಿಲ್ಲಾಧ್ಯಕ್ಷರಾಗಿ ಸುರೇಶ್ ನಾಯಕ ಅವರನ್ನು ರಾಜ್ಯಾಧ್ಯಕ್ಷ ಎಂ.ಬಸವರಾಜು ಪಡುಕೋಟೆ ಅವರು ನೇಮಕ ಮಾಡಿದ್ದಾರೆ ಎಂದು ಸೇನೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಉಸ್ಮಾನ್ ಹೇಳಿದರು. ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಕನ್ನಡಕ್ಕಾಗಿ ಹೋರಾಟ ಮಾಡಿಕೊಂಡು ಬಂದಿರುವ ಸುರೇಶ್ ಅವರನ್ನು ಜಿಲ್ಲಾಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಿರುವುದು ತುಂಬಾ ಸಂತಸ ಎಂದರು. ಸೇನೆಯ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಮಾತನಾಡಿ, ನಮ್ಮ ಕರ್ನಾಟಕ ಸೇನೆಯ ಗುಂಡ್ಲುಪೇಟೆ ತಾಲೂಕು ಘಟಕ, ಹೋಬಳಿ, ಗ್ರಾಮ ಘಟಕವನ್ನು ಅ.6 ರಂದು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕಳೆದ 15 ವರ್ಷಗಳಿಂದ ನಾಡು, ನುಡಿಗಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಅನೇಕ ಕನ್ನಡಪರ ಹೋರಾಟ, ಹೊಗೇನಕಲ್ ಹೋರಾಟ ಮಾಡಲಾಗಿದೆ ಎಂದರು.2007ರಿಂದಲೂ ನಾಡು, ನುಡಿ, ಜಲಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಹೊಸದಾಗಿ ನಮ್ಮ ಕರ್ನಾಟಕ ಸೇನೆ ಉದ್ಘಾಟನೆ ಮಾಡಿದ್ದು, ಸೇನೆಯ ರಾಜ್ಯಾದ್ಯಕ್ಷ ಎಂ.ಬಸವರಾಜ್ ಪಡುಕೋಟೆ ಅವರು ತಮ್ಮನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ್ದು. ಆದೇಶಪತ್ರವನ್ನು ನೀಡಿದ್ದಾರೆ. ನಮ್ಮ ಕರ್ನಾಟಕ ಸೇನೆಯು ಕೂಡ ನೆಲ, ಜ್ಜಲ, ಗಡಿ, ಭಾಷೆ, ಶೋಷಿತ ವರ್ಗಗಳ ಜನರ ಧ್ವನಿಯಾಗಿ ನಿರಂತರ ಹೋರಾಟ ಮಾಡುತ್ತಿದೆ ಎಂದರು.
ಅ.6ರಂದು, ಗುಂಡ್ಲುಪೇಟೆ ತಾಲೂಕಿನಾದ್ಯಂತ ಬೇಗೂರು, ಹಂಗಳ, ತೆರಕಣಾಂಬಿ ಹೋಬಳಿಯೂರು ಗ್ರಾಮ ಘಟಕ ಪ್ರಾರಂಭ ಮಾಡುತ್ತಿದ್ದೇವೆ. ಪತ್ರಕರ್ತರ ವೇದಿಕೆ, ಕಾನೂನು ವೇದಿಕೆ ಕೂಲಿಕಾರ್ಮಿಕರ ಸಂಘ ಪ್ರಾರಂಭವಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಪ್ರಧಾನ ಮಹಮ್ಮದ್ ಉಸ್ಮಾನ್, ಜಿಲ್ಲಾ ಉಪಾಧ್ಯಕ್ಷ ನಾಗರಾಜು. ಜಗದೀಶ್, ಶ್ರೀನಿವಾಸ ನಟರಾಜ್ ಗೌಡ, ಅಬ್ದುಲ್‌ಮಾಲಿಕ್, ಪ್ರವೀಣ್ ಹಾಜರಿದ್ದರು.