ಸಾರಾಂಶ
ಬೇಲೂರು: ತಾಲೂಕಿನಲ್ಲಿ ಹಮ್ಮಿಕೊಂಡ ವಿವಿಧ ಜನಪರ ಕಾರ್ಯಕ್ರಮಗಳಿಂದಾಗಿ ಲಯನ್ಸ್ ಕ್ಲಬ್ ತೃತೀಯ ಸ್ಥಾನ ಪಡೆದಿದೆ ಎಂದು ಬೇಲೂರು ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಡಾ.ಚಂದ್ರಮೌಳಿ ಹೇಳಿದರು. ಪಟ್ಟಣದ ಲಯನ್ಸ್ ಭವನದಲ್ಲಿ ಹಮ್ಮಿಕೊಂಡ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಉಚಿತ ಆರೋಗ್ಯ ಶಿಬಿರ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಇನ್ನೂ ಮುಂತಾದ ರೋಗಿಗಳ ಬಗ್ಗೆ ಉಚಿತ ತಪಾಸಣೆ ಕಾರ್ಯಕ್ರಮ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಆರೋಗ್ಯ ಶಿಬಿರ ನಡೆಸಲಾಗುತ್ತದೆ. ಶಾಲಾ ಕಾಲೇಜಿನಲ್ಲಿ ಮತ್ತು ಸಮುದಾಯದ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದ ಅವರು ಇದರ ಜೊತೆಯಲ್ಲಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.ಈ ಸಂದರ್ಭದಲ್ಲಿ ಬೇಲೂರು ಲಯನ್ಸ್ ಕ್ಲಬ್ ಪ್ರಭಾರಿ ಅಧ್ಯಕ್ಷ ಮುಕ್ತಿಯಾರ್ ಅಹಮದ್, ಖಜಾಂಚಿ ಸಂತೋಷ, ಮಾಜಿ ಅಧ್ಯಕ್ಷರಾದ ಎಂ.ಪಿ.ಪೂವಯ್ಯ, ಬಿ.ಸಿ.ಉಮೇಶ್, ವೈ.ಬಿ.ಸುರೇಶ್ ಪದಾಧಿಕಾರಿಗಳಾದ ಹೆಬ್ಬಾಳು ಪುಟ್ಟಸ್ವಾಮಿ, ಹೆಬ್ಬಾಳು ಹಾಲಪ್ಪ. ಸ್ವರ್ಣ ಶ್ರೀನಿವಾಸ, ಹೇಮಾಂತ್, ತೌಫಿಕ್, ಕುಮಾರ್, ವಿನೋಧ ಪ್ರಭಾಕರ್, ಗೀತಾ ಪುಟ್ಟಸ್ವಾಮಿ, ಕಾವ್ಯ ಪೂವಯ್ಯ ಹಾಜರಿದ್ದರು.