ಹೊಸ ಮನೆಗೆ 58 ಯುನಿಟಷ್ಟೇ ಗೃಹಜ್ಯೋತಿ ವಿದ್ಯುತ್‌ - 1 ವರ್ಷದ ನಂತರ ಸರಾಸರಿ ಬದಲಾವಣೆ ಇಲ್ಲ

| Published : Jan 23 2025, 11:08 AM IST

Electricity will be cheaper in Bihar

ಸಾರಾಂಶ

ವಿದ್ಯುತ್‌ ಹೊಸ ಸಂಪರ್ಕಗಳಿಗೆ ಗೃಹಜ್ಯೋತಿ ಯೋಜನೆಯಡಿ 58 ಯುನಿಟ್‌ ಉಚಿತ್‌ ವಿದ್ಯುತ್‌ ನೀಡುತ್ತಿದ್ದು, ಒಂದು ವರ್ಷದ ನಂತರ ಹೊಸ ಸರಾಸರಿ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

 ವಿಜಯಪುರ : ವಿದ್ಯುತ್‌ ಹೊಸ ಸಂಪರ್ಕಗಳಿಗೆ ಗೃಹಜ್ಯೋತಿ ಯೋಜನೆಯಡಿ 58 ಯುನಿಟ್‌ ಉಚಿತ್‌ ವಿದ್ಯುತ್‌ ನೀಡುತ್ತಿದ್ದು, ಒಂದು ವರ್ಷದ ನಂತರ ಹೊಸ ಸರಾಸರಿ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೊಸ ಕಟ್ಟಡಗಳಿಗೆ 58 ಯುನಿಟ್‌ ಉಚಿತ ನೀಡುತ್ತಿದ್ದೀರಿ. ಒಂದು ವರ್ಷದ ನಂತರ ಪರಿಷ್ಕರಣೆಯಾಗಬೇಕಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪ್ರಕಾರ 58 ಯುನಿಟ್‌ ಉಚಿತ ವಿದ್ಯುತ್‌ ಕೊಡುತ್ತಿರುವುದೇ ಜಾಸ್ತಿ ಆಯಿತು. ಹೊಸ ಗ್ರಾಹಕರಿಗೆ ಸರಾಸರಿ ಇರುವುದೇ 50 ಯುನಿಟ್‌. ಇದನ್ನು ಒಂದು ವರ್ಷದ ನಂತರ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ. ಪರಿಷ್ಕರಿಸಬೇಕಿದ್ದರೆ ಸಂಪುಟ ಸಭೆಯಲ್ಲಿ ಚರ್ಚಿಸಬೇಕಾಗುತ್ತದೆ. ಸರಾಸರಿ ಹೆಚ್ಚು ಮಾಡಿದರೆ ಎಲ್ಲರೂ ಕೇಳಲು ಪ್ರಾರಂಭಿಸುತ್ತಾರೆ. ಹೀಗಾಗಿ ಸರಾಸರಿ ಹೆಚ್ಚಳ ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 2.62 ಕೋಟಿ ಗೃಹಜ್ಯೋತಿ ಗ್ರಾಹಕರಿದ್ದಾರೆ. ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಶಕ್ತಿ ಕೊಡಲಿಕ್ಕೆ ಯೋಜನೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಫ್ರೀ ಕೊಡುತ್ತೇವೆ ಅಂತ ಹೇಳಲಾಗುವುದಿಲ್ಲ. ಈಗಾಗಲೇ ವಾರ್ಷಿಕ ಸರಾಸರಿ 200 ಯುನಿಟ್‌ವರೆಗೆ ಸರಾಸರಿ ನಿಗದಿ ಮಾಡಿ ಅದರಲ್ಲಿಯೂ ಶೇ.10ರಷ್ಟನ್ನು ಹೆಚ್ಚುವರಿಯಾಗಿ ಉಚಿತ ವಿದ್ಯುತ್‌ ಕೊಡುತ್ತಿದ್ದೇವೆ. ಈ ಬಗ್ಗೆ ಎಲ್ಲೂ ದೂರು ಬಂದಿಲ್ಲ. ಎಲ್ಲರೂ ಸಂತೋಷವಾಗಿದ್ದಾರೆ. ಆ ಸಮಯ ಬಂದಾಗ ನೋಡೋಣ ಎಂದರು.