ಕಳೆದೊಂದು ತಿಂಗಳಿನಿಂದ ಟೊಮೆಟೋ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ನಗರದ ಹಾಪ್ ಕಾಮ್ಸ್‌ಗಳಲ್ಲಿ ಉತ್ತಮ ದರ್ಜೆಯ ಟೊಮೆಟೋ ಕೇಜಿಗೆ ₹80 ಇದೆ. ಹೊರಗೆ ತಳ್ಳುವ ಗಾಡಿಯಲ್ಲಿ ಕೇಜಿ ಟೊಮೆಟೋ ₹90ಕ್ಕೆ ಮಾರಾಟ ಮಾಡಲಾಗುತ್ತಿದೆ.

 ಚಿಕ್ಕಬಳ್ಳಾಪುರ : ಕಳೆದೊಂದು ತಿಂಗಳಿನಿಂದ ಟೊಮೆಟೋ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ನಗರದ ಹಾಪ್ ಕಾಮ್ಸ್‌ಗಳಲ್ಲಿ ಉತ್ತಮ ದರ್ಜೆಯ ಟೊಮೆಟೋ ಕೇಜಿಗೆ ₹80 ಇದೆ. ಹೊರಗೆ ತಳ್ಳುವ ಗಾಡಿಯಲ್ಲಿ ಕೇಜಿ ಟೊಮೆಟೋ ₹90ಕ್ಕೆ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಗೆ ಹೋಗುವ ಟೊಮೆಟೋ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗುತ್ತಿದೆ.

ಪ್ರತಿದಿನ ಮಾರುಕಟ್ಟೆಗೆ 800 ರಿಂದ 1000 ಬಾಕ್ಸ್ ಟೊಮೆಟೋ

ಪ್ರತಿದಿನ ಮಾರುಕಟ್ಟೆಗೆ 800 ರಿಂದ 1000 ಬಾಕ್ಸ್ ಟೊಮೆಟೋ ಬರುತ್ತಿವೆ, ಉತ್ತಮ ಟೊಮೆಟೋ ಎಂದೇ ಹೆಸರು ಪಡೆದಿರುವ ಸಾಹು ಎಂಬ ಹೈಬ್ರೀಡ್ ಟೊಮೆಟೋ ಬಾಕ್ಸ್ ಒಂದಕ್ಕೆ ₹800 ರಿಂದ ₹1000 ವರೆಗೂ ಮಾರಾಟವಾಗುತ್ತಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿ ಎಪಿಎಂಸಿಯಲ್ಲಿ 14 ಕೇಜಿ ಟೊಮೆಟೋ ಬೆಲೆ ₹600 ರಿಂದ ₹800 ವರೆಗೆ ಮಾರಾಟವಾಗುತ್ತಿದೆ, ಗೋಲಿ ಗಾತ್ರದ ಟೊಮೆಟೋ 14 ಕೇಜಿ ಬಾಕ್ಸ್ ಒಂದಕ್ಕೆ ₹350 ರಿಂದ ₹400 ವರೆಗೂ ಮಾರಾಟವಾಗಿದೆ. ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯ ಸದ್ಯದ ಟೊಮೆಟೋ ದರ 14 ಕೇಜಿ ಬಾಕ್ಸ್ ಒಂದಕ್ಕೆ 500 ರಿಂದ 750 ವರೆಗೂ ಹರಾಜಾಗಿದೆ. ಟೊಮೆಟೋ ಬೆಲೆ ಕಳೆದ ಒಂದು ತಿಂಗಳ ಹಿಂದೆ ಕೇಜಿಗೆ ಕೇವಲ ₹15-20ಕ್ಕೆ ಮಾರಾಟವಾಗುತ್ತಿತ್ತು.

ಕ್ರಮೇಣ ಬೆಲೆ ಏರುತ್ತಾ ಸಾಗಿದ ಬೆಲೆ

ಆದರೆ ಕ್ರಮೇಣ ಬೆಲೆ ಏರುತ್ತಾ ಸಾಗಿ ಈಗ ₹50 ರಿಂದ 90 ವರೆಗೆ ಮಾರಾಟ ಕಂಡಿದ್ದು, ಟೊಮೆಟೋ ಬೆಳೆ ಕೈಗೆ ಬಂದಿರುವ ರೈತರಲ್ಲಿ ಮುಖದಲ್ಲಿ ಮಂದಹಾಸ ಮೂಡಿದೆ.