ಕನ್ನಡಪ್ರಭ ವಾರ್ತೆ ಕಲಾದಗಿರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್ ಅವರು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿನ ಸ್ವಯಂಸೇವಕ ಡಾ.ಪ್ರವೀಣ ಅವರ ಮನೆಗೆ ಭೇಟಿ ನೀಡಿ ತುಸು ಹೊತ್ತು ತಂಗಿದರು.
ಕನ್ನಡಪ್ರಭ ವಾರ್ತೆ ಕಲಾದಗಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್ ಅವರು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿನ ಸ್ವಯಂಸೇವಕ ಡಾ.ಪ್ರವೀಣ ಅವರ ಮನೆಗೆ ಭೇಟಿ ನೀಡಿ ತುಸು ಹೊತ್ತು ತಂಗಿದರು.ಬೆಳಗಾವಿಯಿಂದ ಗದ್ದನಕೇರಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದ ಮೋಹನ್ ಭಾಗವತ್ ಅವರು ಮಾರ್ಗ ಮಧ್ಯೆ ಕಲಾದಗಿ ಗ್ರಾಮದ ಹೆಸ್ಕಾಂ ಹತ್ತಿರ ಡಾ.ಪ್ರವೀಣ ಭಜಂತ್ರಿಯವರ ಮನೆಗೆ ಭೇಟಿ ನೀಡಿ ತುಸು ಹೊತ್ತು ವಿಶ್ರಾಂತಿ, ಮನೆಯ ಕುಟುಂಬ ಸದಸ್ಯರೊಡನೆ ಕುಶಲೋಪರಿ ಮಾತು, ಸ್ವಯಂಸೇವಕ ಯುವಕರೊಡನೆ ಪರಿಚಯ ಮಾತು ಮಾತನಾಡಿ, ಮುಂದೆ ವಿಜಯಪುರಕ್ಕೆ ತೆರಳಿದರು. ಕಲಾದಗಿಯಲ್ಲಿ 20 ನಿಮಿಷ ಕಾಲ ಕಳೆದರು.
ಸೂಕ್ತ ಬಂದೋಬಸ್ತ್: ಆರ್.ಎಸ್.ಎಸ್ ಸರ ಸಂಘಚಾಲಕ ಮೋಹನ್ ಭಾಗವತ್ ಅವರು ಭೇಟಿ ಹಿನ್ನೆಲೆ ಕಲಾದಗಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.