ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ನಾರಿ-ಸ್ಕಿಲ್ಸ್ ಕಾರ್ಯಕ್ರಮದ ಪ್ರಥಮ ಜಂಟಿ ಪ್ರಗತಿ ಪರಿಶೀಲನೆ ಅಂಗವಾಗಿ ಗ್ರಾಮೀಣ ಪ್ರದೇಶದ ಅತ್ಯಂತ ದುರ್ಬಲ ಕುಟುಂಬಗಳಿಗೆ ಆರ್ಥಿಕ ಸಹಾಯ ಹಾಗೂ ಕೌಶಲ್ಯ ತರಬೇತಿ ನೀಡಿ ಸ್ವಾವಲಂಬನೆ ಸಾಧಿಸಲು ಜೀವನೋಪಾಯ ಚಟುವಟಿಕೆಗಳ ಮೂಲಕ ಆರ್ಥಿಕ ಸಬಲೀಕರಣಕ್ಕಾಗಿ ಮೋಡ್ಸ್ ಗೋಲ್ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಚರಣಸಿಂಗ್ ನೇತೃತ್ವದ ಕೇಂದ್ರ ತಂಡ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ನಾರಿ-ಸ್ಕಿಲ್ಸ್ ಕಾರ್ಯಕ್ರಮದ ಪ್ರಥಮ ಜಂಟಿ ಪ್ರಗತಿ ಪರಿಶೀಲನೆ ಅಂಗವಾಗಿ ಗ್ರಾಮೀಣ ಪ್ರದೇಶದ ಅತ್ಯಂತ ದುರ್ಬಲ ಕುಟುಂಬಗಳಿಗೆ ಆರ್ಥಿಕ ಸಹಾಯ ಹಾಗೂ ಕೌಶಲ್ಯ ತರಬೇತಿ ನೀಡಿ ಸ್ವಾವಲಂಬನೆ ಸಾಧಿಸಲು ಜೀವನೋಪಾಯ ಚಟುವಟಿಕೆಗಳ ಮೂಲಕ ಆರ್ಥಿಕ ಸಬಲೀಕರಣಕ್ಕಾಗಿ ಮೋಡ್ಸ್ ಗೋಲ್ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಚರಣಸಿಂಗ್ ನೇತೃತ್ವದ ಕೇಂದ್ರ ತಂಡ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿತು. ಕೇಂದ್ರದ ತಂಡ ಮೊದಲು ಕೆರೂರಿನ ಬೃಂದಾವನ ಸಭಾಭವನದಲ್ಲಿ ಸಭೆ ಮಾಡಿ ನಾರಿ-ಸ್ಕಿಲ್ಸ್ ಕಾರ್ಯಕ್ರಮದ ಅನುಷ್ಠಾನ ಕುರಿತು ಜಿಪಂ ಸಿಇಒ ಗಜಾನನ ಬಾಲೆ ಅವರೊಂದಿಗೆ ಚರ್ಚೆ ನಡೆಸಿದರು. ನಂತರ 5 ಜನ ಸದಸ್ಯರ 3 ತಂಡಗಳಾಗಿ ವಿಂಗಡಿಸಿ, ಬಾದಾಮಿ ತಾಲೂಕಿನ ಅನವಾಲ, ಕುಳಗೇರಿ ಕ್ರಾಸ್ ಹಾಗೂ ಆಲೂರ ಎಸ್ಕೆ ಗ್ರಾ.ಪಂ.ಗಳಿಗೆ ಭೇಟಿ ನೀಡಲಾಯಿತು.3 ಗ್ರಾ.ಪಂ.ಗಳಲ್ಲಿ ನಾರಿ ಸ್ಕಿಲ್ಸ್ ಯೋಜನೆಯ ಅನುಷ್ಠಾನ ಕುರಿತು ಗ್ರಾ.ಪಂ. ಸಮಿತಿ ಸದಸ್ಯರ ಜತೆ ಎಸ್.ಎಚ್.ಜಿ, ಜಿಪಿಎಲ್ಎಫ್ ಮಹಿಳೆಯರ ಜತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆಯಲ್ಲಿ ಕಾರ್ಯಕ್ರಮ ಅನುಷ್ಠಾನ, ಸವಾಲುಗಳು ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಯಿತು. ನಂತರ ಮಹಿಳಾ ಸ್ವ-ಸಹಾಯ ಸಂಘಗಳ ಉತ್ಪನ್ನಗಳ ಘಟಕಗಳಿಗೆ ಭೇಟಿ ನೀಡಿದರು. ಯೋಜನೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕುರಿತು ಚರ್ಚಿಸಿದರು. ಫಲಾನುಭವಿಗಳ ಮನೆಗಳಿಗೆ ಭೇಟಿ ಮಾಡಿ ಯೋಜನೆ ಕುರಿತು ಚರ್ಚಿಸಿದರು.
ಕ್ಷೇತ್ರ ಭೇಟಿ ವೇಳೆ ಜಿ.ಪಂ ಸಿಇಒ ಗಜಾನನ ಬಾಲೆ, ಜಿ.ಪಂ ಮುಖ್ಯ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ ಉಕ್ಕಲಿ, ತಾ.ಪಂ ಇಓ ಸತೀಶ ಮಾಕೊಂಡ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ವಿವಿಧ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಎಲ್.ಆರ್.ಎಲ್.ಎಂ ನಾರಿ ಸ್ಕಿಲ್ಸ್ ಸಿಬ್ಬಂದಿ ಇದ್ದರು. ಬಾಗಲಕೋಟೆ ಜಿಲ್ಲೆಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು ವಿವಿಧ ಉತ್ಪನ್ನಗಳಾದ ರೋಟಿ ತಯಾರಿಕೆ, ಇಳಕಲ್ಲ ಸಾರಿ, ಗುಳೇದಗುಡ್ಡ ಖನ ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸಿ ಉತ್ತಮ ರೀತಿಯಲ್ಲಿ ಬ್ಯಾಂಡಿಂಗ್ ಪ್ಯಾಕಿಂಗ್ ಮಾಡಿ ಮಾರಾಟ ಮಾಡಲಾಗುತ್ತಿರುವುದನ್ನು ಶ್ಲಾಘಿಸಿದರು.