ಬ್ರಹ್ಮ ಚೈತನ್ಯ ಮಂಡಳಿ ಸದಸ್ಯರಾದ ಬಿ. ಎನ್. ಚೈತನ್ಯ ಕುಮಾರ್ ಅವರು ಭಗವದ್ಗೀತೆಯನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿದ ಅಪರೂಪದ ಸಾಧನೆಗಾಗಿ ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳಿಂದ ಇತ್ತೀಚೆಗೆ ಸನ್ಮಾನವನ್ನು ಪಡೆದ ಹಿನ್ನೆಲೆಯಲ್ಲಿ, ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಸಂಘದ ಪದಾಧಿಕಾರಿಗಳು ಮತ್ತು ಗಣ್ಯರು ಚೈತನ್ಯ ಕುಮಾರ್ ಅವರನ್ನು ಗೌರವಿಸಿ ಅವರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಾಧನೆಯನ್ನು ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಬ್ರಹ್ಮ ಚೈತನ್ಯ ಮಂಡಳಿ ಸದಸ್ಯರಾದ ಬಿ. ಎನ್. ಚೈತನ್ಯ ಕುಮಾರ್ ಅವರು ಭಗವದ್ಗೀತೆಯನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿದ ಅಪರೂಪದ ಸಾಧನೆಗಾಗಿ ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳಿಂದ ಇತ್ತೀಚೆಗೆ ಸನ್ಮಾನವನ್ನು ಪಡೆದ ಹಿನ್ನೆಲೆಯಲ್ಲಿ, ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.ಶ್ರೀ ಬ್ರಹ್ಮ ಚೈತನ್ಯರ ಆರಾಧನಾ ದಿನದಂದು ನಗರದ ಸೀತಾರಾಮ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ, ಸಂಘದ ಪದಾಧಿಕಾರಿಗಳು ಮತ್ತು ಗಣ್ಯರು ಚೈತನ್ಯ ಕುಮಾರ್ ಅವರನ್ನು ಗೌರವಿಸಿ ಅವರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಾಧನೆಯನ್ನು ಶ್ಲಾಘಿಸಿದರು.ಈ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಸಂಘದ ನಿರ್ದೇಶಕರಾದ ಟಿ.ಆರ್. ನಾಗರಾಜ್, ಕೆ. ಅಶೋಕ್ ಕುಮಾರ್ ನಾಡಿಗ್, ಸತೀಶ್ ನಾಡಿಗ್, ಡಿ.ಎಸ್. ರಾಮಸ್ವಾಮಿ, ಖಜಾಂಚಿ ಎಚ್. ಎನ್. ಮೋಹನ್, ಶ್ರೀ ಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆಯ ಸತೀಶ್, ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಹರೀಶ್ ಹಾಗೂ ಉಪಾಧ್ಯಕ್ಷ ಎಚ್.ವಿ. ಗೋಪಾಲ್ ಉಪಸ್ಥಿತರಿದ್ದು, ಚೈತನ್ಯ ಕುಮಾರ್ ಅವರ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.ಸಮಾರಂಭದಲ್ಲಿ ಭಗವದ್ಗೀತೆಯ ಮಹತ್ವ ಮತ್ತು ಇಂತಹ ಅಧ್ಯಯನಗಳು ಯುವ ಪೀಳಿಗೆಗೆ ಮಾರ್ಗದರ್ಶನವಾಗುತ್ತವೆ ಎಂಬ ಅಭಿಪ್ರಾಯವನ್ನು ಗಣ್ಯರು ವ್ಯಕ್ತಪಡಿಸಿದರು.