ಕಾರು-ಟ್ಯಾಂಕರ್ ಡಿಕ್ಕಿ: ವ್ಯಕ್ತಿ ಸಾವು
KannadaprabhaNewsNetwork | Published : Oct 07 2023, 02:18 AM IST
ಕಾರು-ಟ್ಯಾಂಕರ್ ಡಿಕ್ಕಿ: ವ್ಯಕ್ತಿ ಸಾವು
ಸಾರಾಂಶ
ಕಾರು-ಟ್ಯಾಂಕರ್ ಡಿಕ್ಕಿ: ವ್ಯಕ್ತಿ ಸಾವು
ಬೀರೂರು: ಪಟ್ಟಣದ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮತ್ತು ಅಡಿಕೆ ಬೆಳೆಗಾರರ ಸಂಘದ ಸದಸ್ಯ ಅರೇಕಲ್ ಆರ್.ಸುರೇಶ್(65) ರಾಷ್ಟ್ರೀಯ ಹೆದ್ದಾರಿ 206ರ ಚಟ್ನಹಳ್ಳಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಿವಮೊಗ್ಗದ ಆಸ್ಪತ್ರೆಯಲ್ಲಿ ಸಂಬಂಧಿಯೊಬ್ಬರನ್ನು ನೋಡಲು ಕಾರಿನಲ್ಲಿ ತೆರಳುವಾಗ ಚಟ್ನಹಳ್ಳಿ ಬಳಿ ಎದುರಿನಿಂದ ಬಂದ ಪೆಟ್ರೋಲ್ ಟ್ಯಾಂಕರ್‌ಗೆ ಡಿಕ್ಕಿ ಸಂಭವಿಸಿ ತೀವ್ರ ಗಾಯಗೊಂಡಿದ್ದ ಇವರನ್ನು ಸ್ಥಳೀಯರು ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ಅರೇಕಲ್ ಸುರೇಶ್ ಮತ್ತು ಮುರುಳಿಯನ್ನು ಕಳುಹಿಸಿಕೊಟ್ಟಿದ್ದು. ಆಸ್ಪತ್ರೆಗೆ ಸಾಗಿಸುವ ವೇಳೆ ಸುರೇಶ್ ಸಾವನ್ನಪ್ಪಿದ್ದಾರೆ. ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಮುರಳಿ ಗಾಯಗೊಂಡಿದ್ದ ಮತ್ತು ಮಂಜುನಾಥ್ ಈ ಇಬ್ಬರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 6 ಬೀರೂರು 1 ಅರೇಕಲ್ ಆರ್.ಸುರೇಶ್.