ಸಾರಾಂಶ
ಹೊಳೆನರಸೀಪುರ ಪಟ್ಟಣದ ಪೇಟೆ ಮುಖ್ಯ ರಸ್ತೆ ಸೇರಿದಂತೆ ಅಂಗಡಿ ಮುಂಗಟ್ಟುಗಳ ಮುಂದೆ ಆಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಸರಣಿಯಾಗಿ ಕಳವು ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಪಟ್ಟಣದಲ್ಲಿನ ಕಳುವು ಪ್ರಕರಣ ಸೇರಿದಂತೆ ಅಪರಿಚಿತರ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ನಗರ ಠಾಣೆ ಪೋಲಿಸರು ಅಂಗಡಿ ಮಾಲೀಕರ ಸಹಕಾರ ಪಡೆದು ಅಂಗಡಿ ಮುಂಗಟ್ಟುಗಳ ಮುಂದೆ ಸಿಸಿ ಕ್ಯಾಮರಾ ಆಳವಡಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಕಳುವು ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಿದ್ದರು. ಆದರೆ ಕಳ್ಳರು ಅಂಗಡಿ ಮುಂಗಟ್ಟುಗಳ ಮುಂದೆ ಅಳವಡಿಸಿರುವ ಕ್ಯಾಮರಾಗಳನ್ನೇ ಕಳುವು ಮಾಡುವ ಮೂಲಕ ಪೊಲೀಸರಿಗೆ ತಲೆನೋವಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಪೇಟೆ ಮುಖ್ಯ ರಸ್ತೆ ಸೇರಿದಂತೆ ಅಂಗಡಿ ಮುಂಗಟ್ಟುಗಳ ಮುಂದೆ ಆಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಸರಣಿಯಾಗಿ ಕಳವು ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.ಪಟ್ಟಣದ ಮುಖ್ಯ ರಸ್ತೆಯಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಾವಿಜನ್ ಸ್ಟೋರ್ಸ್, ವಿಶಾಲ್ ಮಾರ್ಟ್ ಅಂಗಡಿಗಳು ಸೇರಿದಂತೆ ಹಲವು ಅಂಗಡಿಗಳ ಮುಂದೆ ಅಳವಡಿಸಿದ್ದ ಕ್ಯಾಮರಾಗಳ ವೈರ್‌ಗಳನ್ನು ಕಳ್ಳ ಕೈಯಲ್ಲಿ ಎಳೆದು ಕತ್ತರಿಸಿ ಕ್ಯಾಮರದೊಂದಿಗೆ ಪರಾರಿ ಆಗಿದ್ದು, ಸಿಸಿ ಕ್ಯಾಮರಾಗಳ ಕಳವು ಮಾಡಿರುವ ದೃಶ್ಯಗಳು ಸೆರೆಯಾಗಿದೆ.
ಪಟ್ಟಣದಲ್ಲಿನ ಕಳುವು ಪ್ರಕರಣ ಸೇರಿದಂತೆ ಅಪರಿಚಿತರ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ನಗರ ಠಾಣೆ ಪೋಲಿಸರು ಅಂಗಡಿ ಮಾಲೀಕರ ಸಹಕಾರ ಪಡೆದು ಅಂಗಡಿ ಮುಂಗಟ್ಟುಗಳ ಮುಂದೆ ಸಿಸಿ ಕ್ಯಾಮರಾ ಆಳವಡಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಕಳುವು ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಿದ್ದರು. ಆದರೆ ಕಳ್ಳರು ಅಂಗಡಿ ಮುಂಗಟ್ಟುಗಳ ಮುಂದೆ ಅಳವಡಿಸಿರುವ ಕ್ಯಾಮರಾಗಳನ್ನೇ ಕಳುವು ಮಾಡುವ ಮೂಲಕ ಪೊಲೀಸರಿಗೆ ತಲೆನೋವಾಗಿದ್ದಾರೆ.ಸಿಸಿ ಕ್ಯಾಮರಾಗಳ ಕಳವು ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಕಳುವ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಟ್ಟಣದ ವರ್ತಕರು ಆಗ್ರಹ ಪಡಿಸಿದ್ದಾರೆ.