ಸಾರಾಂಶ
ಕಳೆದ ೨೦೧೭ನೇ ಇಸವಿಯಿಂದ ನಿರಂತರವಾಗಿ ನಗರದ ಅರಳೇಪೇಟೆ ರಸ್ತೆಯ ನಿವಾಸಿಗಳಿಂದ ಸೇರಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗುತ್ತಿದೆ. ಸುಮಾರು ಮೂರು ಸಾವಿರ ಜನರು ಪ್ರಸಾದ ಸ್ವೀಕರಿಸಿದ್ದು, ನಾಡಿನ ಜನತೆಗೆ ಒಳ್ಳೆಯದನ್ನು ಮಾಡಲಿ ಎಂದು ಗಣೇಶನನು ಪ್ರಾರ್ಥಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಎಲ್ಲಾರ ಸಹಕಾರದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಇಂತಹ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ಹೇಳಿದರು. ಈ ಪುಣ್ಯ ಕಾರ್‍ಯಕ್ಕೆ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಶ್ರೀ ಗಣೇಶ ಎಲ್ಲಾರಿಗೂ ಒಳ್ಳೆಯದ ಮಾಡಲಿ ಎಂದು ಶುಭಹಾರೈಸಿದರು.
ಹಾಸನ: ಪೆಂಡಾಲ್ ಗಣಪತಿಯ ವಿಸರ್ಜನ ಮೆರವಣಿಗೆ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಗರದ ಅರಳೇಪೇಟೆ ರಸ್ತೆ ನಿವಾಸಿಗಳು ಪ್ರಸಾದ ರೂಪದಲ್ಲಿ ಸಾವಿರಾರು ಜನರಿಗೆ ಅನ್ನದಾನ ನೆರವೇರಿಸಿದರು.
ಇದೇ ವೇಳೆ ಟೈಲರ್ ಅಂಗಡಿ ಮಾಲೀಕರಾದ ವೆಂಕಟೇಶ್ ಮಾತನಾಡಿ, ಕಳೆದ ೨೦೧೭ನೇ ಇಸವಿಯಿಂದ ನಿರಂತರವಾಗಿ ನಗರದ ಅರಳೇಪೇಟೆ ರಸ್ತೆಯ ನಿವಾಸಿಗಳಿಂದ ಸೇರಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗುತ್ತಿದೆ. ಸುಮಾರು ಮೂರು ಸಾವಿರ ಜನರು ಪ್ರಸಾದ ಸ್ವೀಕರಿಸಿದ್ದು, ನಾಡಿನ ಜನತೆಗೆ ಒಳ್ಳೆಯದನ್ನು ಮಾಡಲಿ ಎಂದು ಗಣೇಶನನು ಪ್ರಾರ್ಥಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಎಲ್ಲಾರ ಸಹಕಾರದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಇಂತಹ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ಹೇಳಿದರು. ಈ ಪುಣ್ಯ ಕಾರ್‍ಯಕ್ಕೆ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಶ್ರೀ ಗಣೇಶ ಎಲ್ಲಾರಿಗೂ ಒಳ್ಳೆಯದ ಮಾಡಲಿ ಎಂದು ಶುಭಹಾರೈಸಿದರು.ಇದೇ ವೇಳೆ ನಗರದ ಸಹ್ಯಾದ್ರಿ ವೃತ್ತದ ಬಳಿ ಕಾರು ಚಾಲಕರು ಮತ್ತು ಟೆಂಪೊ ಮಾಲೀಕರು ಕೂಡ ಅನ್ನದಾನ ನೆರವೇರಿಸಿದರೆ ಶ್ರೀ ಬಸವೇಶ್ವರ ದೇವಸ್ಥಾನದ ಬಳಿಯೂ ಕೂಡ ಸಾವಿರಾರು ಜನರಿಗೆ ಪ್ರಸಾದ ರೂಪದಲ್ಲಿ ಅನ್ನದಾನ ಮಾಡಿದರು. ಇದೆ ವೇಳೆ ಅರಳೇಪೇಟೆಯ ನಿವಾಸಿಗಳಾದ ನಾರಾಯಣಗೌಡ, ಚಂದ್ರಶೇಖರ್, ನಾರಾಯಣ್ ಭಗವಾನ್, ಮದನ್ ಕೀರ್ತಿ, ಕುಮಾರ್, ಕೀರ್ತಿ, ವೀಣಾ ನಟರಾಜು, ಬಿ.ಎನ್. ಪುಟ್ಟಮ್ಮ, ಲಕ್ಷ್ಮಿ, ಜ್ಯೋತಿ, ಜಯಂತಿ, ಮಂಜುನಾಥ್, ಮನು, ಶಂಕರ್ ರಾವ್, ಪ್ರವೀಣ್ ಇತರರು ಉಪಸ್ಥಿತರಿದ್ದರು.