ಸೆಂಟ್ರಿಂಗ್‌ ಪ್ಲೇಟ್‌ ಕಳವು: 8 ಮಂದಿ ಆರೋಪಿಗಳ ಬಂಧನ

| Published : Feb 04 2024, 01:30 AM IST

ಸೆಂಟ್ರಿಂಗ್‌ ಪ್ಲೇಟ್‌ ಕಳವು: 8 ಮಂದಿ ಆರೋಪಿಗಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಿರ್ಮಿಸಲು ತಂದಿಟ್ಟಿದ್ದ ಕಬ್ಬಿಣದ ಪ್ಲೇಟ್ ಹಾಗೂ ಸೆಂಟ್ರಿಂಗ್ ಪ್ಲೇಟ್‌ಗಳನ್ನು ಕಳವು ಮಾಡಿದ್ದ 14 ಮಂದಿ ಅರೋಪಿಗಳ ಪೈಕಿ 8 ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭವಾರ್ತೆ ಕೊಳ್ಳೇಗಾಲ

ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಿರ್ಮಿಸಲು ತಂದಿಟ್ಟಿದ್ದ ಕಬ್ಬಿಣದ ಪ್ಲೇಟ್ ಹಾಗೂ ಸೆಂಟ್ರಿಂಗ್ ಪ್ಲೇಟ್‌ಗಳನ್ನು ಕಳವು ಮಾಡಿದ್ದ 14 ಮಂದಿ ಅರೋಪಿಗಳ ಪೈಕಿ 8 ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೈಲ್ವೆ ಮದ್ದೂರು ತಾಲೂಕಿನ ಸುತ್ತಮುತ್ತಲ ಗ್ರಾಮದ ಭರತ್, ಮೋಹನ್ ಕುಮಾರ್, ಉದಯಕುಮಾರ್, ಅಪೂರ್ವ, ಸಮೀ, ಅಕ್ಷಯ್, ಹರ್ಷ, ಹನೀಫ್ ಎನ್ನಲಾಗಿದ್ದು ತಲೆಮರೆಸಿಕೊಂಡಿರುವ ಆರು ಮಂದಿಯ ಪತ್ತೆಗೆ ಕ್ರಮ ಜರುಗಿಸಲಾಗಿದೆ. ಬಂಧಿತರಿಂದ ಅಂದಾಜು 7 ಲಕ್ಷ ರು.ಗಳ ಬೆಲೆಬಾಳುವ ಸುಮಾರು ಒಂದೂವರೆ ಟನ್ ತೂಕದ ಕಳವು ಮಾಡಿದ್ದ ಸೇತುವೆಗೆ ಅಳವಡಿಸುವ 17 ಸ್ಟೀಲ್ ಪ್ಲೇಟ್ ಹಾಗೂ 32 ಸೆಂಟ್ರಿಂಗ್ ಪ್ಲೇಟ್ ಗಳು ಸೇರಿದಂತೆ ಕಳ್ಳತನಕ್ಕೆ ಬಳಸಿದ್ದ ವಾಹನಗಳ ಜಪ್ತಿ ಮಾಡಲಾಗಿದೆ. ಕಳೆದ ಜ.24 ಹಾಗೂ 30 ರಂದು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಕಾವೇರಿ ನದಿಗೆ ನಿರ್ಮಾಣ ಮಾಡಲು ಶೇಖರಿಸಿಟ್ಟಿದ್ದ ಕಬ್ಬಿಣದ ಪ್ಲೇಟ್‌ಗಳು ಹಾಗೂ ಸೆಂಟ್ರಿಂಗ್ ಪ್ಲೇಟ್ ಗಳನ್ನು ಕಳುವು ಮಾಡಲಾಗಿದ್ದ ಹಿನ್ನಲ್ಲೇ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಮೇರೆಗೆ ಪತ್ತೆ ಹಚ್ಚಲಾಗಿದೆ.ಕಾರ್ಯಾಚರಣೆಯಲ್ಲಿ ಸಿಪಿಐ ಶಿವಮಾದಯ್ಯ, ಎಸ್ಐ ಗಣೇಶ್, ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿ ಎಎಸ್ಐ ತಖೀವುಲ್ಲಾ, ಹೆಡ್ ಕ್ಯಾನ್ಸಟೇಬಲ್ ವೆಂಕಟೇಶ್, ಕಿಶೋರ್, ಕಾನ್ಸ ಟೆಬಲ್ ಬಿಳಿಗೌಡ, ಶಿವಕುಮಾರ್, ಗ್ರಾಮಾಂತರ ಠಾಣೆಯ ವೀರೇಂದ್ರ, ಅನಿಲ್ ಕುಮಾರ್, ನವೀನ್ ಕುಮಾರ್, ಸಚಿನ್ ಕುಮಾರ್ ಅಮರೇಶ್ ರೆಡ್ಡಿ, ಸಿಪಿಐ ಕಚೇರಿಯ ಹೆಚ್.ಸಿ ಗುರುಲಿಂಗಶೆಟ್ಟಿ, ರಂಗಸ್ವಾಮಿ, ಪಿಸಿ ಉಮಾಶಂಕರ್, ಶಿವರಾಜ್, ಚಾಲಕ ಸೋಮಶೇಖರ್, ನಂಜುಂಡಸ್ವಾಮಿ, ಚಾ.ನಗರ ಸಿಡಿಆರ್ ವಿಂಗ್ ಹೆಚ್.ಸಿ ವೆಂಕಟೇಶ್, ಶಂಕರರಾಜ್ ಇದ್ದರು. ಬಂಧಿತರನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣದ ಪತ್ತೆಯಲ್ಲಿ ಕಾರ್ಯನ್ಮುಖರಾಗಿದ್ದ ಸಿಬ್ಬಂದಿಗಳಿಗೆ ಚಾ.ನಗರ ಎಸ್ಪಿ ಪದ್ಮಿನಿ ಸಾಹು ಅವರು ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.

3ಸಿಎಚ್‌ಎನ್‌78ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಿರ್ಮಿಸಲು ತಂದಿಟ್ಟಿದ್ದ ಕಬ್ಬಿಣದ ಪ್ಲೇಟ್ ಹಾಗೂ ಸೆಂಟ್ರಿಂಗ್ ಪ್ಲೇಟ್ ಗಳನ್ನು ಕಳವು ಮಾಡಲು ಬಳಸಿದ್ದ ವಾಹನ.