ದಿವ್ಯಶ್ರೀಗೆ ರಾಗಧನ ಪಲ್ಲವಿ ಪ್ರಶಸ್ತಿ ಪ್ರದಾನ

| Published : Feb 04 2024, 01:30 AM IST

ಸಾರಾಂಶ

ಉಡುಪಿಯ ರಾಗ ಧನ ಸಂಸ್ಥೆ ಕೊಡಮಾಡುವ ರಾಗ ಧನ ಪಲ್ಲವಿ ಪ್ರಶಸ್ತಿ-2024ನ್ನು ದಿವ್ಯಶ್ರೀ ಭಟ್ ಅವರಿಗೆ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಖ್ಯಾತ ಜನಪದ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಅವರ ಸ್ಮರಣಾರ್ಥ ಅವರ ಪತಿ ಡಾ. ಯು.ಪಿ. ಉಪಾಧ್ಯಾಯರಿಂದ ಸ್ಥಾಪಿಸಲ್ಪಟ್ಟ, ಉಡುಪಿಯ ರಾಗ ಧನ ಸಂಸ್ಥೆ ಕೊಡಮಾಡುವ ರಾಗ ಧನ ಪಲ್ಲವಿ ಪ್ರಶಸ್ತಿ-2024ನ್ನು ದಿವ್ಯಶ್ರೀ ಭಟ್ ಅವರಿಗೆ ಪ್ರದಾನ ಮಾಡಲಾಯಿತು.

ಮುಖ್ಯ ಅಭ್ಯಾಗತರಾಗಿದ್ದ ಕಲಾಪೋಷಕ ದಿನೇಶ್ ಕೆ. ಅಮ್ಮಣ್ಣಾಯ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಅವರು ಮಾತನಾಡಿ, ಮಕ್ಕಳ ಕಲಾಸಕ್ತಿ ಹಾಗೂ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಪ್ರಧಾನವಾಗಿರುತ್ತದೆ ಎಂದರು.ಪ್ರಶಸ್ತಿ ಆಯ್ಕೆ ಸಮಿತಿಯ ಪ್ರೊ.ಅರವಿಂದ ಹೆಬ್ಬಾರ್ ಮತ್ತು ಸರೋಜಾ ಆರ್. ಆಚಾರ್ಯ, ಸಂಸ್ಥೆಯ ಅಧ್ಯಕ್ಷ ಡಾ.ಶ್ರೀಕಿರಣ್ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಉಮಾಶಂಕರಿ ವೇದಿಕೆಯಲ್ಲಿದ್ದರು.ಸಮಾರಂಭದ ಪ್ರಾರಂಭದಲ್ಲಿ ಸುರೇಖಾ ಭಟ್ ಅವರು ಪ್ರಾರ್ಥಿಸಿದರು. ಸಂಸ್ಥೆಯ ಖಜಾಂಚಿ ಪ್ರೊ.ಕೆ. ಸದಾಶಿವ ರಾವ್ ಸ್ವಾಗತಿಸಿದರು. ಉಪ್ಪಂಗಳ ಶಂಕರಿ ಭಟ್ ಪ್ರಶಸ್ತಿ ಪತ್ರ ವಾಚಿಸಿದರು. ಕೆ.ಆರ್. ರಾಘವೇಂದ್ರ ಆಚಾರ್ಯ ಅವರು ಸಭಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.* ಇಂಜಿನಿಯರ್ - ಚಿತ್ರಕಲಾವಿದೆಪ್ರಶಸ್ತಿ ಪುರಸ್ಕೃತರಾದ ದಿವ್ಯಶ್ರೀ ಭಟ್, ಕರ್ನಾಟಕ ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ ಶಿಷ್ಯವೇತನ, ಸಂಗೀತ ಪರಿಷತ್ತಿನ ದಕ್ಷಿಣ ಭಾರತ ಮಟ್ಟದ ರಾಗಂ ತಾನಂ ಪಲ್ಲವಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಚೆನ್ನೈನ ಇಂಡಿಯನ್ ಫೈನ್ ಆರ್ಟ್ಸ್‌ನಿಂದ ಪುರಂದರದಾಸರ ಹಾಗೂ ಮುತ್ತಯ್ಯ ಭಾಗವತರ ಕೃತಿ ಗಾಯನದಲ್ಲಿ ಪ್ರಥಮ, ಬೆಂಗಳೂರಿನ ಗಾಯನ ಸಮಾಜದವರ ವೀಣೆ ಶೇಷಣ್ಣ ಕೃತಿ ಗಾಯನದಲ್ಲಿ ಪ್ರಥಮ ಹಾಗೂ ಇತರ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ.ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರೆ ಆದ ಅವರು ಚಿತ್ರ ಕಲೆ ಹಾಗೂ ಭರತನಾಟ್ಯದಲ್ಲೂ ಪ್ರಾವೀಣ್ಯತೆ ಪಡೆದಿರುತ್ತಾರೆ. ಅವರು ಸರಿಗಮ ಭಾರತೀಯ ಗುರು ವಿದುಷಿ ಉಮಾಶಂಕರಿ ಹಾಗೂ ಪ್ರಸ್ತುತ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಅವರ ಶಿಷ್ಯೆ. ಎಂ.ಐ.ಟಿ. ಪ್ರೊ.ಡಾ.ಕುಮಾರಶ್ಯಾಮ ಹಾಗೂ ಜಯಶ್ರೀ ದಂಪತಿ ಸುಪುತ್ರಿ.

****