ಕನ್ನಡ ಸಿನಿರಂಗದ ದೊಡ್ಮನೆ ಖ್ಯಾತಿಯ ಅಣ್ಣಾವ್ರ ಕುಟುಂಬದ ಹಿರಿಯ ಕೊಂಡಿಯೊಂದು ಶುಕ್ರವಾರ ಕಳಚಿದೆ. ಡಾ.ರಾಜ್ ಕುಮಾರ್‌ ಅವರ ಅಚ್ಚುಮೆಚ್ಚಿನ ಸಹೋದರಿ ನಾಗಮ್ಮ ವಯೋಸಹಜ ನಿಧನರಾಗಿದ್ದಾರೆ.

ಚಾಮರಾಜನಗರ: ಕನ್ನಡ ಸಿನಿರಂಗದ ದೊಡ್ಮನೆ ಖ್ಯಾತಿಯ ಅಣ್ಣಾವ್ರ ಕುಟುಂಬದ ಹಿರಿಯ ಕೊಂಡಿಯೊಂದು ಶುಕ್ರವಾರ ಕಳಚಿದೆ. ಡಾ.ರಾಜ್ ಕುಮಾರ್‌ ಅವರ ಅಚ್ಚುಮೆಚ್ಚಿನ ಸಹೋದರಿ ನಾಗಮ್ಮ ವಯೋಸಹಜ ನಿಧನರಾಗಿದ್ದಾರೆ.

 ತಮಿಳುನಾಡಿನ ತಾಳವಾಡಿ ತಾಲೂಕಿನ‌ ಗಾಜನೂರಿನಲ್ಲಿ ವಾಸವಿದ್ದ ನಾಗಮ್ಮ (93) ಶುಕ್ರವಾರ ಬೆಳಗ್ಗೆ 11ರ ಸುಮಾರಿಗೆ ದೇಹತ್ಯಾಗ ಮಾಡಿದ್ದಾರೆ. ನಾಗಮ್ಮಗೆ ಐವರು ಪುತ್ರರು, ಮೂವರು ಪುತ್ರಿಯರು ಒಟ್ಟು 8 ಜನ ಮಕ್ಕಳಿದ್ದು ಹಿರಿ ಮಗ ಗೋಪಾಲ್ ಜೊತೆ ಗಾಜನೂರಿನಲ್ಲಿ ವಾಸವಿದ್ದರು. 

ಅಣ್ಣಾವ್ರ ಕುಟುಂಬಕ್ಕಷ್ಟೇ ಅಲ್ಲದೇ ಇಡೀ ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದ ಪುನೀತ್‌ ರಾಜ್‌ಕುಮಾರ್‌ರ ನಿಧನದ ಸುದ್ದಿಯನ್ನು ಕುಟುಂಬಸ್ಥರು ಗೌಪ್ಯವಾಗಿ ಇಟ್ಟಿದ್ದರು. ಕಳೆದ ಮಾರ್ಚ್‌ನಲ್ಲಿ ಅಪ್ಪು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ವೀಡಿಯೋ ವೈರಲ್ಲಾಗಿತ್ತು.

ಮನೆಗೇ ಯಾರೇ ಬಂದರೂ ಅಪ್ಪು ವಿಚಾರ ಮಾತಾನಾಡಬೇಡಿ ಎಂದು ತಾಕೀತು ಮಾಡುತ್ತಿದ್ದರು.