- ಇಂದು ಬೆಂಗಳೂರಿನ ಸಾಹಿತ್ಯ ಪರಿಷತ್‌ನಲ್ಲಿ ಪ್ರದಾನ
-----ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಬಿಸಲೇರಿ ಜಯಣ್ಣ ಮತ್ತು ಸಹೋದರರರು ಬೆಂಗಳೂರಿನಲ್ಲಿ ವೈದ್ಯಕೀಯ ಸಾಹಿತ್ಯ ಪ್ರೋತ್ಸಾಹಕ್ಕಾಗಿ ಸ್ಥಾಪಿಸಿರುವ 2024-25ನೇ ಸಾಲಿನ ದತ್ತಿ ಪ್ರಶಸ್ತಿಯೂ ಈ ಬಾರಿ ಕೊಳ್ಳೇಗಾಲದ ನಿವಾಸಿ ತಡಿ ಮಾಲಂಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಧುಸೂಧನ್ ಅವರಿಗೆ ಸಂದಿದೆ.ಇತ್ತಿಚೆಗೆ ಬೆಂಗಳೂರಿನಲ್ಲಿ ಹಿರಿಯ ವಿದ್ವಾಂಸರು ಡಾ. ಕೆ. ಮರಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಮಧುಸೂಧನ್ ಅವರು ‘ಸ್ವಾಸ್ಥ್ಯಮುಖಿ’ ಕೃತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಡಾ. ಸುಧೀರ್ ನಾಯಕ್ ಅವರು 2025ರ ಜನವರಿಯಲ್ಲಿ ಬಿಡುಗಡೆ ಮಾಡಿದ್ದರು. ಈ ಕೃತಿಯೂ ಸಾರ್ವಜನಿಕ ಆರೋಗ್ಯ ಚರ್ಚೆ ಮತ್ತು ಜ್ಞಾನ ವಿಸ್ತಾರಕ್ಕೆ, ಆರೋಗ್ಯ ಸಲಹೆಗಳಿಗೆ, ಆರೋಗ್ಯ ಇಲಾಖೆಯ ಉಪಯುಕ್ತ ಕಾರ್ಯಕ್ರಮಗಳನ್ನು ಒಳಗೊಂಡ ಮಹತ್ವದ ಕೖತಿ ಎಂಬ ಪ್ರಶಂಸೆಗೆ ಭಾಜನವಾಗಿತ್ತು. ಈ ಹಿನ್ನೆಲೆ ಮಧುಸೂಧನ್ ಅವರ ‘ಸ್ವಾಸ್ಥ್ಯಮುಖಿ’ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ.
ಫೆ.12ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕೖಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಡಾ. ಮಧು 10ಸಾವಿರ ನಗದು ಪುರಸ್ಕಾರ, ಫಲಕ ಸ್ವೀಕರಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಂ.ಗಾಯಿತ್ರಿ ತಿಳಿಸಿದ್ದಾರೆ.