ಮಡಿಕೇರಿ : ಚೆಟ್ಟಳ್ಳಿ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘ ಕ್ಕೆ 50 ವರ್ಷದ ಪಾದಾರ್ಪಣೆ ಹಿನ್ನೆಲೆ ಸಹಕಾರ ಸಪ್ತಹದ ದಿನದಂದು ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಸುವರ್ಣ ಮಹೋತ್ಸವದ ಲೋಗೊ ಬಿಡುಗಡೆ ಮಾಡಲಾಯಿತು.
ಸಹಕಾರ ಧ್ವಜರೋಹಣ ಮಾಡುವ ಮೂಲಕ 73 ನೇ ಸಹಕಾರ ಸಪ್ತಾಹ ಕ್ಕೆ ಚಾಲನೆ ನೀಡಿ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ ದೇಶದಾದ್ಯಂತ ನವಂಬರ್ 14ರಿಂದ ಸಹಕಾರ ಸಪ್ತಾಹ ನಡೆಯುತಿದ್ದು ಇಂದು ಚೆಟ್ಟಳ್ಳಿ ಸಹಕಾರ ಸಂಘ ಸಹಕಾರ ಸಪ್ತಾಹ ಕ್ಕೆ ಚಾಲನೆ ನೀಡಿದೆ ಎಂದರು.ಮುಂದಿನ ವರ್ಷದವರೆಗೆ ಹಲವು ಕಾರ್ಯಕ್ರಮಗಳು ನಡೆಯಲಿದು ಸಮಾರೋಪ ಸಮಾರಂಭದಲ್ಲಿ ಸಂಘದ ಎಲ್ಲಾ ಸದಸ್ಯರ ಕುಟುಂಬದ ಹಿರಿಯರಿಗೆ ಗೌರವಿಸಲಾಗುವುದು ಎಂದರು.ಸುವರ್ಣಮಹೋತ್ಸವ ಸಮಿತಿಗೆ ಸಂಘದ ಮಾಜಿ ಉಪಾಧ್ಯಕ್ಷ ಹೆಚ್.ಎಸ್.ತಿಮ್ಮಪಯ್ಯ,ಕಣಜಾಲು ಪೂವಯ್ಯ, ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ, ಮಾಜಿ ನಿರ್ದೇಶಕ ಪುತ್ತರಿರ ಸೀತಮ್ಮ ಮೊಣ್ಣಪ್ಪ ಹಾಗು ನೂಜಿಬೈಲು ನಾಣಯ್ಯರವರನ್ನು ಆಯ್ಕೆ ಮಾಡಲಾಯಿತು. ಮುಂದಿನ ಕಾರ್ಯಕ್ರಮದ ರೂಪುರೇಖೆಗಳ ಬಗ್ಗೆ ಚರ್ಚಿಸಲಾಯಿತು.ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ವಾಗತಿಸಿ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ವಂದಿಸಿದರು.ಸಂಘದ ಉಪಾಧ್ಯರಾದ ಪೇರಿಯನ ಎಸ್ ಪೂರ್ಣಚ್ಚ,ನಿರ್ದೇಶಕರಾದ ಕೊಂಗೇಟಿರ ವಾಣಿ ಕಾಳಪ್ಪ, , ಅಕ್ಕಾರಿ ದಯಾನಂದ,ಬಟ್ಟೀರ ವೇಣುಗೋಪಾಲ್ (ಶರಿನ್), ಮುಳ್ಳಂಡ ಮಾಯಮ್ಮ ತಮ್ಮಯ್ಯ, ಕರ್ನಯ್ಯನ ಪ್ರಜ್ವಲ್, ಕಾಶಿ ಬಿ.ಎಂ,ಮರದಾಳು ಚೇತನ್, ಗಣೇಶ್ ಪಿ.ಟಿ, ರವಿ.ಜೆ.ಆರ್, ಪರಿಣತ ನಿರ್ದೇಶಕ ಮುಕ್ಕಾಟಿ ಪಳಂಗಪ್ಪ, ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ನಂದಿನಿ ಕೆ.ಎಸ್. ಮತ್ತಿತರರಿದ್ದರು.