ಕನ್ನಡಪ್ರಭ ವಾರ್ತೆ ಬೆಳಗಾವಿ ನಗರದ ಸರ್ಕಾರಿ ಚಿಂತಾಮಣರಾವ ಪ್ರೌಢ ಶಾಲೆಯ ಶತಮಾನೋತ್ಸ ಆಚರಣೆಯ ಸಮಾರೋಪ ಸಮಾರಂಭ ಡಿ.27 ಮತ್ತು 28ರಂದು ಆಯೋಜನೆ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ಸರ್ಕಾರಿ ಚಿಂತಮಣರಾವ ಪ್ರೌಢ ಶಾಲೆಯ ಶತಮಾನೋತ್ಸ ಆಚರಣೆಯ ಸಮಾರೋಪ ಸಮಾರಂಭ ಡಿ.27 ಮತ್ತು 28ರಂದು ಆಯೋಜನೆ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

ನಗರದ ಚಿಂತಾಮಣರಾವ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂತಮಣರಾವ ಪ್ರೌಢಶಾಲೆ ಆವರಣದಲ್ಲಿ ಎರಡು ದಿನಗಳ ಕಾಲ ಭವ್ಯ ಕಾರ್ಯಕ್ರಮ ನಡೆಯಲಿದೆ. ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಅಮೇರಿಕಾದ ಪಾರ್ಲಿಮೆಂಟ್ ಸದಸ್ಯ ಶ್ರೀನಿವಾಸ ಥಾನೇದಾರ, ಸಂಸದ ಜಗದೀಶ ಶೆಟ್ಟರ ಹಾಗೂ ಮೇಯರ್ ಮಂಗೇಶ ಪವಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಿ.27ರಂದು ಬೆಳಗ್ಗೆ 10.30ರಿಂದ ಸಂಜೆ 6ಗಂಟೆವರೆಗೆ ಹಳೆಯ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. 1985ರ ಬ್ಯಾಚ್ ವಿದ್ಯಾರ್ಥಿಗಳೆಲ್ಲರೂ ಸೇರಿ ನಮಗೆ ಕಲಿಸಿದ ಶಿಕ್ಷಕರೊಂದಿಗೆ ಸಮವಸ್ತ್ರ ಸಮೇತ ಶಾಲೆಗೆ ತೆರಳಿ ತರಗತಿಗಳನ್ನು ಕೇಳುವ ಮೂಲಕ ಅಂದಿನ ವಿದ್ಯಾರ್ಥಿ ಜೀವನ ಮರು ಸೃಷ್ಟಿಸಲಿದ್ದೇವೆ ಎಂದರು.ಡಿ.28ರಂದು ಬೆಳಗ್ಗೆ 10.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಶ್ರಿಮಂತ ಚಿಂತಾಮಣರಾವ್ ಪಟವರ್ಧನ್ ಮಹಾರಾಜರ ಪ್ರತಿಮೆಯನ್ನು ಅಮೆರಿಕದ ಪಾರ್ಲಿಮೆಂಟ್ ಸದಸ್ಯ ಶ್ರೀನಿವಾಸ ಥಾನೇದಾರ, ಸಂಸದ ಜಗದೀಶ ಶೆಟ್ಟರ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಂಗ್ಲಿಯ ಮಹಾರಾಜರು ಮತ್ತು ಮಹಾರಾಣಿಯವರು ಅತಿಥಿಗಳಾಗಿ ಆಗಮಿಸುವರು ಎಂದು ವಿವರಿಸಿದರು.ನೋಂದಣಿ ಪ್ರಕ್ರಿಯೆ ಆರಂಭವಿದ್ದು, ಈಗಾಗಲೇ 3000 ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದೇವೆ. ಇನ್ನು ಎರಡು ದಿನಗಳ ಕಾಲ ನೋಂದಣಿ ಪ್ರಕ್ರಿಯೆ ಇರಲಿದ್ದು, ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಬೇಕು. ಹಳೆಯ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮದ ಜೊತೆಗೆ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯಧನ ಮಾಡುವ ನಿಟ್ಟಿನಲ್ಲಿ ಯೋಚಿಸಿದ್ದೇವೆ. ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಮುಂದಾಗಿದ್ದಲ್ಲಿ ದತ್ತಿ ನಿಧಿ ಆರಂಭಿಸುವ ಮೂಲಕ ಸಂಪೂರ್ಣ ಶಾಲೆಯ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶ ಹೊಂದಿದೆ ಎಂದರು

ಸದ್ದಿಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿಗಳಾದ ಪ್ರೀತಿ ಕಾಮತ್, ಶೈಲೇಶ್ ಶೆಟ್ಟಿ, ನಗರ ಸೇವಕರಾದ ಗಿರೀಶ್ ದೊಂಗಡೆ, ಶ್ರೀಶೈಲ್ ಕಾಂಬಳೆ, ತಾಲೂಕ ಪಂಚಾಯಿತಿ ಮಾಜಿ ಸದಸ್ಯ ಭೀಮರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.