ಕನ್ನಡಪ್ರಭ ವಾರ್ತೆ ಬೆಳಗಾವಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ವೀಕ್ಷಿತ್‌ ಭಾರತ ಗ್ಯಾರಂಟಿ ರೋಜಗಾರ್ ಅಜೈವಿಕ ಮಿಷನ್ ಗ್ರಾಮೀಣ (ವಿ.ಜಿ.ಆರ್.ಎ.ಎಮ್.ಜಿ) ಕಾನೂನನ್ನು ರದ್ದುಪಡಿಸುವುದು ಸೇರಿದಂತೆ ಹಲವಾರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಜಾಗೃತ ಮಹಿಳಾ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ನಗರದ ಚನ್ನಮ್ಮ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ವೀಕ್ಷಿತ್‌ ಭಾರತ ಗ್ಯಾರಂಟಿ ರೋಜಗಾರ್ ಅಜೈವಿಕ ಮಿಷನ್ ಗ್ರಾಮೀಣ (ವಿ.ಜಿ.ಆರ್.ಎ.ಎಮ್.ಜಿ) ಕಾನೂನನ್ನು ರದ್ದುಪಡಿಸುವುದು ಸೇರಿದಂತೆ ಹಲವಾರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಜಾಗೃತ ಮಹಿಳಾ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ನಗರದ ಚನ್ನಮ್ಮ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ರವಾನಿಸಲಾಯಿತು‌.ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಕೆಲಕಾಲ ರಸ್ತೆ ತಡೆ ನಡೆಸಿ, ಮಾನವ ಸರ್ಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಅಲ್ಲಿಂದ, ಮೆರವಣಿಗೆ ಮೂಲಕ ಡಿಸಿ ಕಚೇರಿವರೆಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ವೀಕ್ಷಿತ ಭಾರತ ಗ್ಯಾರಂಟಿ ರೋಜಗಾರ್ ಅಜೈವಿಕ ಮಿಷನ್ ಗ್ರಾಮೀಣ ಯೋಜನೆ ಜಾರಿಗೊಳಿಸುವ ಮೂಲಕ ಕಾರ್ಮಿಕ ವಿರೋಧಿ ಕಾನೂನು ರೂಪಿಸಲಾಗುತ್ತಿದೆ. ಇದರಿಂದ ಕಾರ್ಮಿಕರಿಗೆ ಕೆಲಸದ ಖಾತ್ರಿ ಇಲ್ಲದಂತಾಗುತ್ತದೆ. ಹೀಗಾಗಿ, ಈ ಯೋಜನೆ ಕೈಬಿಡಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಮ್.ಜಿ.ಎನ್.ಆರ್.ಇ.ಜಿ.ಎ) ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮುಖಂಡ ವಿಶ್ವೇಶ್ವರಯ್ಯ ಹಿರೇಮಠ ಮಾತನಾಡಿ, ದೇಶದಲ್ಲಿ ನೂತನ ವೀಕ್ಷಿತ್ ಭಾರತ ಗ್ಯಾರಂಟಿ ರೋಜಗಾರ್ ಅಜೈವಿಕ ಮಿಷನ್ ಗ್ರಾಮೀಣ ಯೋಜನೆ ಅನುಷ್ಠಾನವಾದರೆ ಕಾರ್ಮಿಕರ ಉದ್ಯೋಗ ಖಾತ್ರಿ ಹಕ್ಕು ಇಲ್ಲದಂತಾಗುತ್ತದೆ. ಅಲ್ಲದೆ, ಈ ಹಿಂದೆ ಜನರಿಗೆ ಅವಶ್ಯಕವಿರುವ ಕಾಮಗಾರಿಗಳನ್ನು ಗ್ರಾಮ ಸಭೆಯ ಮೂಲಕವೇ ಜನರು ಗುರುತಿಸುತ್ತಿದ್ದರು. ಆದರೆ, ಈ ಯೋಜನೆ ಜಾರಿಯಾಗುವುದರಿಂದ ಕೇಂದ್ರ ಸರ್ಕಾರವೇ ಕಾಮಗಾರಿಗಳನ್ನು ಗುರುತಿಸುವ ಅಧಿಕಾರ ಪಡೆದುಕೊಳ್ಳುತ್ತದೆ. ಜೊತೆಗೆ ಕೆಲಸದ ಹಲವು ದಿನಗಳನ್ನು ಸ್ಥಗಿತಗೊಳಿಸುತ್ತದೆ. ಹೀಗಾಗಿ, ಯೋಜನೆ ಕಾರ್ಮಿಕರಿಗೆ ಮಾರಕವಾಗಿದ್ದು, ಆದ್ದರಿಂದ ತಕ್ಷಣ ವೀಕ್ಷಿತ್ ಭಾರತ ಗ್ಯಾರಂಟಿ ರೋಜಗಾರ್ ಅಜೈವಿಕ ಮಿಷನ್ ಗ್ರಾಮೀಣ ಯೋಜನೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ದಿಲೀಪ್ ಕಾಮತ್, ರಿಷಿಕೇಶ್ ದೇಸಾಯಿ, ಅನಿತಾ, ಸಾಗರಿಕಾ, ವಂದನಾ, ವಿದ್ಯಾ, ಮಹದೇವಿ, ವನಿತಾ, ಸುವರ್ಣಾ, ಗೌರವ್ವ, ಅನ್ನಪೂರ್ಣ, ವೈಶಾಲಿ, ಯಲ್ಲಪ್ಪ, ಸಿದ್ದಪ್ಪ, ನಿಂಗಪ್ಪ, ರಮೇಶ ಸೇರಿದಂತೆ ನೂರಾರು ಕಾರ್ಯಕರ್ತರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

-----