ಚೌಡೇಶ್ವರಿ ಬ್ಲಾಕ್ ಅಂಗನವಾಡಿ: ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಚಾಲನೆ

| Published : Jun 05 2025, 12:46 AM IST

ಚೌಡೇಶ್ವರಿ ಬ್ಲಾಕ್ ಅಂಗನವಾಡಿ: ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಚೌಡೇಶ್ವರಿ ಬ್ಲಾಕ್ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೨೫-೨೬ನೇ ಸಾಲಿನ ಪೂರ್ವ ಪ್ರಾಥಮಿಕ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಬುಧವಾರ ಪ್ರಾರಂಭಿಸಲಾಯಿತು. ಕೇಂದ್ರಕ್ಕೆ ಮಹಿಳಾ ಸಹಕಾರ ಸಂಘ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಚೌಡೇಶ್ವರಿ ಬ್ಲಾಕ್ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೨೫-೨೬ನೇ ಸಾಲಿನ ಪೂರ್ವ ಪ್ರಾಥಮಿಕ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಬುಧವಾರ ಪ್ರಾರಂಭಿಸಲಾಯಿತು.ಕೇಂದ್ರಕ್ಕೆ ಮಹಿಳಾ ಸಹಕಾರ ಸಂಘ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಚಾಲನೆ ನೀಡಿದರು.

ನಂತರ ಮಾತನಾಡಿ, ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳಿಂದಲೇ ವಿದ್ಯಾಭ್ಯಾಸವನ್ನು ಪ್ರಾರಂಭ ಮಾಡುತ್ತಿದ್ದಾರೆ. ಇದರೊಂದಿಗೆ ಸರ್ಕಾರ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಿರುವುದು ಮಕ್ಕಳಿಗೆ ಪ್ರಾರಂಭದ ಶಿಕ್ಷಣ ನೀಡಲು ಅವಕಾಶವಾಗಿದೆ. ಶಿಕ್ಷಣದೊಂದಿಗೆ ಮಕ್ಕಳು ಪೌಷ್ಠಿಕ ಆಹಾರದೊಂದಿಗೆ ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದರು.ತರಗತಿಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೂ, ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಅಂಗನವಾಡಿ ಕೇಂದ್ರಕ್ಕೆ ಇಲಾಖೆಯಿಂದ ಸ್ಮಾರ್ಟ್ ಟಿವಿಯನ್ನು ನೀಡಲಾಯಿತು.ಈ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯ ಶುಭಾಕರ, ಆರೋಗ್ಯ ಕಾರ್ಯಕರ್ತೆ ಬಿ.ಎಂ. ಅನಿತಾ ಮತ್ತು ಲತಾ, ಚೌಡೇಶ್ವರಿ ಯುವಕ ಸಂಘದ ಅಧ್ಯಕ್ಷ ಸುಹಾಸ್, ಟೌನ್ ವ್ಯಾಪ್ತಿಯ ಕಾರ್ಯಕರ್ತೆಯರಾದ ಎಚ್.ಪಿ. ಅಶ್ವಿನಿ, ತಾರಾ ಲೋಬೋ, ಜಗದಾಂಬ, ಉಷಾ, ಸಹಾಯಕಿಯರಾದ ಸಿ.ಆರ್. ಕುಸುಮಾ, ಲತಾ ಇದ್ದರು.