ಮಂಗಳೂರು: ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ (ಸಿಎಫ್‌ಎಲ್) ಮಂಗಳೂರಿನ 36 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ 2026ರಲ್ಲಿ ಅರ್ಹತೆ ಪಡೆದು ಭಾರತೀಯ ತಾಂತ್ರಿಕ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಯುವ Joint Seat Allocation Authority (JoSAA) ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.ಅರ್ಹತೆ ಪಡೆದ 36 ವಿದ್ಯಾರ್ಥಿಗಳಲ್ಲಿ ಮೂವರು, ಸುಮಾರು 1.87 ಲಕ್ಷ ನೋಂದಾಯಿತ ಅಭ್ಯರ್ಥಿಗಳ ಪೈಕಿ ರಾಷ್ಟ್ರದ ಮೊದಲ 1,000 ಶ್ರೇಯಾಂಕಗಳೊಳಗೆ ಸ್ಥಾನ ಪಡೆದಿದ್ದಾರೆ.
ಅವರೆಂದರೆ, ಅಭಿ ಸಣ್ಣಯ್ಯ (558), ರಿಶೋನ್ ಫರ್ನಾಂಡಿಸ್ (621) ಮತ್ತು ಮೃಣಾಲ್ ಡಿ. ಭಟ್ (885). ಇವರೊಂದಿಗೆ ಅರ್ಹತೆ ಪಡೆದ ಇತರ ವಿದ್ಯಾರ್ಥಿಗಳು:ಎ. ಆದಿತ್ಯ ರಾವ್ (1,243), ಲಾರೆನ್ ಎಂ. ಪಟ್ರಾವ್ (1,338), ಸನತ್ ಸಂಜಯ ಶೆಟ್ (3,276), ಇರಾ ಜೈನ್ (3,527), ಅಕ್ಷಿತ್ ರಾಮ್ ಕೆ ( 4,533), ಭುವನ್ ಶೆಟ್ಟಿ (4,621), ಆರ್ಯಾಶ್ರೀ ಹೆರಲೆ (6,560), ಮೋಹಕ್ ಎಸ್. ರಾಜ್ (6,724), ಸನತ್ ರಾವ್ 7,171), ಸ್ವಾಗತ್ ಶೆಟ್ಟಿ (7,949), ರಿಷಭ್ ನಾಯಕ್ 9,507), ಮನ್ವಿತ್ ಎ. ಎಸ್. ( 9,628), ವೈಭವ್ ಕೆಕ್ಕುನ್ನಾಯ ( 11,401), ಶ್ರೇಷ್ಠ ಎನ್. ರಾವ್ (12,510), ನಿರೀಕ್ಷಾ ಎನ್. (14,536), ಪ್ರಿನ್ಸಿಲ್ಲಾ ಕಾರ್ಡೋಜಾ (14,573), ಶರಾಜ್ ಶ್ರೇಯಸ್ (15,947), ಭುವನ್ ಕೃಷ್ಣ (16,084), ಮೀನಾಕ್ಷಿ ಉನ್ನಿಥನ್ (16,135), ಅಭಿಜ್ಞಾ ಯೆಲ್ಲೂರು ( 16,647), ರಿಷಿತ್ ಪಿ. (16,991), ಈಶಾನ್ ಡಿ. (17,530), ಆಸ್ಥಾ ವಿ. ರೈಕರ್ (17,841), ರಿಷಭ್ ಶೆಟ್ಟಿ (17,905), ತೇಜಸ್ ಎಸ್. (18,374), ಎಂ. ಶಿವಾನಿ (19,599), ಜೇಡನ್ ಜಿ. ಡಿಸೋಜಾ (20,084), ಅನುಪ್ರಿಯಾ ಕೆ. (24,464), ದೇವಿಕಾ ಜಯರಾಜ್ ( 26,911), ಪ್ರಣವ್ ಶಿವಕುಮಾರ್ ಶೆಣ್ವಿ ( 27,136), ಜೆನ್ಸನ್ ಜೆ. ವಾಲ್ಡರ್ (28,903), ಸ್ವೀಡಲ್ ಎಂ. ರೆಬೆಲ್ಲೊ (10,090) ಹಾಗೂ ಸುಚಿತ್ ಆರ್. (10,106).
ಈ ವರ್ಷದ ಫಲಿತಾಂಶಗಳ ಪ್ರಮುಖ ವಿಶೇಷತೆ ಎಂದರೆ ಸಾಧನೆ ಕೇವಲ ಅಗ್ರ ಶ್ರೇಣಿಯ ವಿದ್ಯಾರ್ಥಿಗಳಿಗೆ ಸೀಮಿತವಾಗದೆ, ಸಂಪೂರ್ಣ ಬ್ಯಾಚ್‌ಗಳಲ್ಲಿ ಕಂಡುಬಂದಿದೆ.5 ವಿದ್ಯಾರ್ಥಿಗಳು ಮೊದಲ 1,500 ಸ್ಥಾನ ಗಳೊಳಗೆ, 9 ವಿದ್ಯಾರ್ಥಿಗಳು ಮೊದಲ 5,000 ಸ್ಥಾನ ಗಳೊಳಗೆ15 ವಿದ್ಯಾರ್ಥಿಗಳು ಮೊದಲ 10,000 ಗಳೊಳಗೆ ಸ್ಥಾನ ಪಡೆದಿದ್ದಾರೆ.ಈ ಸಾಧನೆ CFALನ JEE Main 2026 ಫಲಿತಾಂಶಗಳಿಗೂ ಪೂರಕವಾಗಿದೆ. ಈ ವರ್ಷದ ಆರಂಭದಲ್ಲಿ 25 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಹೆಚ್ಚು ಹಾಗೂ 52 ವಿದ್ಯಾರ್ಥಿಗಳು 97 ಪರ್ಸೆಂಟೈಲ್‌ಗಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರು.
-------------------