ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ: ನಿರಂಜನಾನಂದ ಸ್ವಾಮಿ

| Published : Aug 31 2024, 01:31 AM IST

ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ: ನಿರಂಜನಾನಂದ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

CM Siddaramaiah can't bear Tejovadhe: Mr. Kaginele

-ನಿರಂಜನಾನಂದ ಪುರಿ ಮಹಾಸ್ವಾಮಿಗಳು ಕನಕ ಗುರುಪೀಠ ಕಾಗಿನೆಲೆ ಅವರಿಗೆ ಕುರಿಮರಿ ಕಾಣಿಕೆ

----

ಕನ್ನಡಪ್ರಭ ವಾರ್ತೆ ವಡಗೇರಾ

ತಂದೆ-ತಾಯಿಗಳು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ಜಗದ್ಗುರು ನಿರಂಜನಾನಂದ ಪುರಿ ಮಹಾಸ್ವಾಮಿ ಕನಕ ಗುರುಪೀಠ ಕಾಗಿನೆಲೆ ಹೇಳಿದರು. ಹಂಚಿನಾಳ ಗ್ರಾಮದಲ್ಲಿ ನಡೆದ ನೂತನ ಬೀರಲಿಂಗೇಶ್ವರ ದೇವಸ್ಥಾನ ಹಾಗೂ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂಢನಂಬಿಕೆ ಆಚರಣೆಗಳಿಗೆ ಬಲಿಯಾಗಬೇಡಿ. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರ ಮಾಡದೇ, ಶಿಕ್ಷಣ ನೀಡಬೇಕೆಂದರು.

ರೇವಣಸಿದ್ಧೇಶ್ವರ ಶಾಂತಮಯ ಸ್ವಾಮಿಗಳು ಸರೂರ ಶಾಖಾಮಠ ಅಗತೀರ್ಥ ಮಾತನಾಡಿ, ಭಂಡಾರದಿಂದ ಭವರೋಗಗಳು ನಿವಾರಣೆಯಾಗುತ್ತವೆ. ಡೊಳ್ಳು, ಕಂಬಳಿ, ಭಂಡಾರಕ್ಕೆ ತನ್ನದೇ ಆದ ಮಹತ್ವವಿದೆ. ಅವುಗಳನ್ನು ಗೌರವದಿಂದ ಕಾಣಬೇಕು. ಬೀರಲಿಂಗ ದೇವರು ಮಹಾನ್ ಪವಾಡ ಪುರುಷರು. ಅವರ ತತ್ವಾದರ್ಶಗಳು ಸರ್ವಕಾಲಿಕ ಶ್ರೇಷ್ಠ ಎಂದು ಹೇಳಿದರು.

ಪೂಜ್ಯರನ್ನು ಗ್ರಾಮಸ್ಥರು, ಮುತೈದೆ ಮಹಿಳೆಯರು ಕುಂಭ, ಕಳಸ, ಡೊಳ್ಳಿನೊಂದಿಗೆ ಸ್ವಾಗತಿಸಿಕೊಂಡರು.

ಸಮಾಜದ ಮುಖಂಡರಾದ ಶರಣಪ್ಪ ಸಲಾದಪುರ, ಡಾ. ಭೀಮಣ್ಣ ಮೇಟಿ ಮಾತನಾಡಿದರು.

ಚೆನ್ನಮಲ್ಲಯ್ಯ ಹಾಲುಮತ ಗುರುಗಳು ಭೋವಿ ಕಾಡಮಗೇರಾ, ಮಸ್ತೇಪ್ಪ ಪೂಜಾರಿ ಬಬಲಾದ, ಸಕ್ರೇಪ್ಪ ಪೂಜಾರಿ ದೇವರಗೂನಾಲ, ದೇವಪ್ಪ ಪೂಜಾರಿ ಹಂಚಿನಾಳ, ಮಾರ್ಥಂಡಪ್ಪ ಪೂಜಾರಿ ಮೈಲಾಪುರ, ಸಾಬಣ್ಣ ಪೂಜಾರಿ ದೇವತ್ಕಲ್, ಯಲ್ಲಾಲಿಂಗ ಪೂಜಾರಿ ಅಗ್ನಿಹಾಳ, ಮುಖಂಡರಾದ ಸಿದ್ದಣ್ಣಗೌಡ ಕಾಡಂನೂರ್, ಹಣಮೇಗೌಡ ಬೀರನಕಲ್, ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ಸಾಬಣ್ಣ ವರಕೇರಿ, ವಿನೋದಗೌಡ ಮಾಲಿ ಪಾಟೀಲ್ ದೋರನಹಳ್ಳಿ, ಶಿವು ಪೂಜಾರಿ, ಮರೆಪ್ಪ ಬಿಳಾರ, ಸಿದ್ದರಾಮ ವಕೀಲ್, ಹಣಮಂತರಾಯಗೌಡ ತೇಕರಾಳ, ದೇವೇಂದ್ರಪ್ಪ ಖಾನಾಪುರ, ಮಲ್ಲಯ್ಯ ಕಸಬಿ, ಮರೇಪ್ಪ ಬಸವಂತಪುರ್, ಬೀರಲಿಂಗ ಮುಂಡರಗಿ, ವಿಜಯ ಇದ್ದರು. ಮೌನೇಶ್ ಪೂಜಾರಿ ನಿರೂಪಿಸಿ, ವಂದಿಸಿದರು.

-----

29ವೈಡಿಆರ್11: ಹಂಚಿನಾಳ ಗ್ರಾಮದಲ್ಲಿ ನೂತನ ಬೀರಲಿಂಗೇಶ್ವರ ದೇವಸ್ಥಾನ ಹಾಗೂ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಕನಕ ಗುರುಪೀಠ ಕಾಗಿನೆಲೆ ಅವರಿಗೆ ಕುರಿಮರಿ ಕಾಣಿಕೆ ನೀಡಲಾಯಿತು.