ಕನ್ನಡಪ್ರಭ ವಾರ್ತೆ ಮಡಿಕೇರಿ
ಹಿಮಾಚಲ ಪ್ರದೇಶದ ಎತ್ತರದ ಕಿನ್ನೌರ್ ನ ತಾಶಿಗಂಗ್ ಮತಗಟ್ಟೆ, ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ದೂರದ ಮಾಲೋಗಾಂವ್ ಮತಗಟ್ಟೆ ಮತ್ತು ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದ ಏಕೈಕ ಮತದಾರನಿಗಾಗಿ ನಿರ್ಮಿಸಲಾದ ಮತಗಟ್ಟೆಗಳ ಮಾದರಿಯಲ್ಲಿ, ಪ್ರತಿ ಕೊಡವ ವಂಶಾವಳಿ ಪೀಠ (‘ಬಲ್ಯಮನೆ’) ಮತ್ತು ಪ್ರತಿ ಕೊಡವ ಆಧ್ಯಾತ್ಮಿಕ ಪೀಠಗಳಿಗೆ (‘ಮಂದ್’) ಪ್ರತ್ಯೇಕ ವಿಶೇಷ ಕೊಡವ ಮತಗಟ್ಟೆಗಳನ್ನು ಸ್ಥಾಪಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಭಾರತದ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಈ ಪ್ರಮುಖ ಬೇಡಿಕೆಯ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.ಕೊಡವ ಜನಾಂಗೀಯ ಲೋಕದ ಅಧಮನೀಯ ಧ್ವನಿ ಮತ್ತು ಸಾಕ್ಷಿಪ್ರಜ್ಞೆಯಾಗಿರುವ ಸಿ.ಎನ್.ಸಿ, ತೀವ್ರ ಕಾಳಜಿಯೊಂದಿಗೆ, ಹಿಮಾಚಲ ಪ್ರದೇಶದ ಎತ್ತರದ ಕಿನ್ನೌರ್ ನ ತಾಶಿಗಂಗ್ ಮತಗಟ್ಟೆ, ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ದೂರದ ಮಾಲೋಗಾಂವ್ ಮತಗಟ್ಟೆ ಮತ್ತು ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದ ಏಕೈಕ ಮತದಾರನಿಗಾಗಿ ಸ್ಥಾಪಿಸಲಾದ ಮತಗಟ್ಟೆಗಳ ಮಾದರಿಯಲ್ಲಿಯೇ, ನಮ್ಮ ಪಾರಂಪರಿಕ ವಂಶಾವಳಿ ಪೀಠಗಳಲ್ಲಿ (‘ಬಲ್ಯಮನೆ’) ಮತ್ತು ಆಧ್ಯಾತ್ಮಿಕ ಪೀಠಗಳಲ್ಲಿ (‘ಮಂದ್’) ವಿಶೇಷ ಚುನಾವಣಾ ಮತಗಟ್ಟೆಗಳನ್ನು ಸ್ಥಾಪಿಸಬೇಕು.ಕೊಡವ ಭೂಪ್ರದೇಶವು ಪಶ್ಚಿಮ ಘಟ್ಟಗಳ, ಎತ್ತರದ ಗಿರಿಕಂದರಗಳ ಮತ್ತು ಪರ್ವತಮಯ ಭೂಪ್ರದೇಶದಿಂದ ಕೂಡಿದೆ. ಷಫಾಲಜಿ (ಮತದಾನ ವಿಶ್ಲೇಷಣೆ) ಜ್ಞಾನದ ಕೊರತೆಯಿರುವ ಕೊಡವರಿಗೆ, ಪ್ರತ್ಯೇಕ ಮತಗಟ್ಟೆಗಳನ್ನು ಒದಗಿಸುವ ಮೂಲಕ ಶೇಕಡಾ 100ರಷ್ಟು ಮತದಾನದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯಸಾಧ್ಯವಾದ ವಿಧಾನದ ಅಗತ್ಯವಿದೆ. ಇದರಿಂದ ನಮ್ಮ ಬೃಹತ್ ಪ್ರಜಾಪ್ರಭುತ್ವದ ಸಾರ್ವತ್ರಿಕ ಮತದಾನದ ಹಕ್ಕನ್ನು ಬಲಪಡಿಸಲು ಮತ್ತು ವಿಶ್ವದ ಅತಿ ದೊಡ್ಡ ಜನಾಂಗೀಯ ವೈವಿಧ್ಯಮಯ ರಾಷ್ಟ್ರವನ್ನು ಸಮೃದ್ಧಗೊಳಿಸಲು ಸಾಧ್ಯವಾಗುತ್ತದೆ.ಭಾರತ ಸರ್ಕಾರದ ಕಲ್ಪನೆಯ ‘ಒಂದು ಚುನಾವಣೆ, ಒಂದು ಮತ’ ದೃಷ್ಟಿಕೋನದತ್ತ ಒಂದು ಹೆಜ್ಜೆ ಮುಂದಿಟ್ಟು, ಯಶಸ್ವಿಯಾಗಿ ಪೂರ್ಣಗೊಳಿಸುತ್ತಿರುವ ಮತದಾನ ಹಕ್ಕಿನ ವಿಶೇಷ ಪರಿಷ್ಕರಣೆ ಎಸ್‌ಐಆರ್ ಯೋಜನಾಯಾತ್ರೆ ಹಿನ್ನೆಲೆಯಲ್ಲಿ ಕೊಡವರು ಈ ನ್ಯಾಯಸಮ್ಮತ ಸಾಂವಿಧಾನಿಕ ಬೇಡಿಕೆಯನ್ನು ಚುನಾವಣಾ ಆಯೋಗದ ಮುಂದೆ ಇಡುತ್ತಿದ್ದೇವೆ ಎಂದು ಎನ್.ಯು.ನಾಚಪ್ಪ ಸ್ಪಷ್ಟಪಡಿಸಿದ್ದಾರೆ.ಪ್ರತ್ಯೇಕ ವಿಶೇಷ ಕೊಡವ ಮತಗಟ್ಟೆ ಸ್ಥಾಪಿಸಲು ಸಿಎನ್‌ಸಿ ಒತ್ತಾಯ
ಹಿಮಾಚಲ ಪ್ರದೇಶದ ಎತ್ತರದ ಕಿನ್ನೌರ್ ನ ತಾಶಿಗಂಗ್ ಮತಗಟ್ಟೆ, ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ದೂರದ ಮಾಲೋಗಾಂವ್ ಮತಗಟ್ಟೆ ಮತ್ತು ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದ ಏಕೈಕ ಮತದಾರನಿಗಾಗಿ ನಿರ್ಮಿಸಲಾದ ಮತಗಟ್ಟೆಗಳ ಮಾದರಿಯಲ್ಲಿ, ಪ್ರತಿ ಕೊಡವ ವಂಶಾವಳಿ ಪೀಠ (‘ಬಲ್ಯಮನೆ’) ಮತ್ತು ಪ್ರತಿ ಕೊಡವ ಆಧ್ಯಾತ್ಮಿಕ ಪೀಠಗಳಿಗೆ (‘ಮಂದ್’) ಪ್ರತ್ಯೇಕ ವಿಶೇಷ ಕೊಡವ ಮತಗಟ್ಟೆಗಳನ್ನು ಸ್ಥಾಪಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಭಾರತದ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.