ಶಿಗ್ಗಾಂವಿ: ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಕಾಶಿ ಶಾಖಾಮಠವಾದ ಮುರುಘೇಂದ್ರ ಮಠದಲ್ಲಿ ಲಿಂ. ವೀರಭದ್ರಯ್ಯ ಮಹಾಸ್ವಾಮಿಗಳ ೩೨ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜು. ೧೬ರಂದು ನಡೆಯಲಿದೆ.

ಹಿರೇಮಣಕಟ್ಟಿಯ ಮುರುಘೇಂದ್ರಮಠದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಬೆಂಡಿಗೇರಿಯ ಹಿರೇಮಠದ ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಜು. ೧೬ರಂದು ಪ್ರಾತಃಕಾಲ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಗುರು ವೀರಭದ್ರಯ್ಯ ಮಹಾಸ್ವಾಮಿಗಳವರ ಕತೃ ಗದ್ದುಗೆಗೆ- ಮಹಾರುದ್ರಾಭಿಷೇಕ-ಶಿವಸ್ತೋತ್ರ ಶತನಾಮಾವಳಿ ಮಹಾ-ಮಂಗಳಾರತಿ ಮತ್ತು ಮಧ್ಯಾಹ್ನ ೧೨ ಗಂಟೆಗೆ ಮಹಾ-ಪ್ರಸಾದ ವಿನಿಯೋಗ ಜರುಗಲಿದೆ.

ಅಂದೇ ಸಾಯಂಕಾಲ 6 ಗಂಟೆಗೆ ಶಿವಾನುಭವ ಗೋಷ್ಠಿ ಜರುಗಲಿದೆ. ಸಾನಿಧ್ಯವನ್ನು ಹಿರೇಮಣಕಟ್ಟಿ-ತೀರ್ಥದ ಮುರುಘಂದ್ರಮಠದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಹಿರೇಬೆಂಡಿಗೇರಿಯ ಹಿರೇಮಠದ ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಸಿದ್ಧಲಿಂಗಯ್ಯ ಶಾಸ್ತ್ರಿಗಳು ಫ. ಹಿರೇಮಠ, ಜಗದ್ಗುರು ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಸಂಗೀತ ಯೋಗ ಪಾಠಶಾಲೆ ಬಿಸನಳ್ಳಿ ವಟುಗಳಿಂದ ವೇದಘೋಷ ಜರುಗುವದು.

ವಿಶೇಷ ಆಹ್ವಾನಿತರಾಗಿ ಸಂಸದ ಬಸವರಾಜ ಎಸ್. ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಿಗ್ಗಾಂವಿ ಶಾಸಕ ಯಾಸೀರ ಅಹ್ಮದಖಾನ ಪಠಾಣ, ಹೆಸ್ಕಾಂ ಅಧ್ಯಕ್ಷ ಸೈಯದ ಅಜೀಮಪೀರ ಎಸ್. ಖಾದ್ರಿ, ಮಡ್ಲಿ ಕ್ರಾಸ್ ನ ಅಂಬುಜಾ ಎಕ್ಸಪೋರ್ಟನ ರಾಜೇಂದ್ರ ಹೊಸಮಠ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಬನ್ನೂರ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ಬ. ದುಂಡಿಗೌಡ್ರ , ಕೆಎಂಎಫ್ ನಿರ್ದೇಶಕ ತಿಪ್ಪಣ್ಣ ಮ. ಸಾತಣ್ಣವರ, ಗೌರವಾಧ್ಯಕ್ಷ ಕೇದಾರಪ್ಪ ಬಗಾಡೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಚನಬಸಗೌಡ ಯ. ಕಟ್ಟಿಗೌಡ್ರ, ಬೆಳಗಲಿ ಶಿಲ್ಪ ಕಲಾವಿದ ಮಾನಪ್ಪ ಬಡಿಗೇರ, ಈಶ್ವರಗೌಡ್ರ, ಶಂ. ಪಾಟೀಲ, ಶ್ಯಾಡಂಬಿ ಲ್ಯಾಂಡಲಾರ್ಡ್‌ ವರುಣಗೌಡ ಪಾಟೀಲ, ಬಸವರಾಜ. ಫ. ಧರ್ಮಣ್ಣವರ, ನರಹರಿ ಕಟ್ಟಿ, ಫಕ್ಕೀರಯ್ಯ. ಶೇ. ಕುಂಬಾರಗೇರಿಮಠ, ರುದ್ರಯ್ಯ ಬ. ಕುಂಬಾರಗೇರಿಮಠ, ಕೆಎಂಎಫ್‌ ನಿರ್ದೇಶಕ ಶಶಿಧರ ಯಲಿಗಾರ, ಗಣ್ಯ ವ್ಯಾಪಾಸ್ಥರು ಮಂಜುನಾಥ ಸಂ. ಮೊರಬದ & ಸಹೋದರರು, ಕೃಷ್ಣಾ ದೇಮಣ್ಣ ಗೌಡಾ ,ಶಂಭಾಜಿ ಚವ್ಹಾಣ, ಕೃಷ್ಣಾ ನಾರಾಯಣ ಪಾಟೀಲ, ನೀಲಕಂಠಗೌಡ ವಿ. ಪಾಟೀಲ, ಮಂಜುನಾಥ ಹರ್ಲಾಪೂರ, ಪತ್ರಕರ್ತ ಬಿ.ಎಸ್.ಹಿರೇಮಠ, ಬೈಲಪ್ಪ ಚ. ಕೊಟ್ರಪ್ಪನವರ, ಬಸವರಾಜ ಮಾ. ಪವಾರ ಉಪಸ್ಥಿತರಿರುವರು.