ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ 16 ಸರ್ಟಿಫಿಕೇಟ್ ಕೋರ್ಸ್ ಗಳ ಆರಂಭ

| Published : Mar 10 2024, 01:30 AM IST

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ 16 ಸರ್ಟಿಫಿಕೇಟ್ ಕೋರ್ಸ್ ಗಳ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಸದರಿ ಕೋರ್ಸ್ ಗಳು ಉದ್ಯೋಗ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿವೆ. ಕೋವಿಡ್ ನಂತರದಲ್ಲಿ ಶೈಕ್ಷಣಿಕ ವಲಯದಲ್ಲಿ ಮಹತ್ತರ ಬದಲಾವಣೆ ಆಗಿದೆ. ತಂತ್ರಜ್ಞಾನ ದ ಮೂಲಕ ಜ್ಞಾನಾರ್ಜನೆ ಪಡೆಯುವಂತಾಗಿದೆ. ಹಾಗಾಗಿ ಆಧುನಿಕ ತಂತ್ರಜ್ಞಾನದ ಬಳಕೆ ಆರಂಭವಾಗಿದೆ‌. ಆದರೆ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ಆಗತ್ಯತೆ ಹೆಚ್ಚಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 16 ವಿವಿಧ ವಿಷಯಗಳ ಸರ್ಟಿಫಿಕೇಟ್ ಕೋರ್ಸ್ ಗಳನ್ನು ನಿರ್ದೇಶಕರಾದ ಡಾ. ಅಪ್ಪಾಜಿ ಗೌಡ ಉದ್ಘಾಟಿಸಿದರು.

ಕನ್ನಡ, ಇಂಗ್ಲಿಷ್, ಭೌತಶಾಸ್ತ್ರ ರಸಾಯನಶಾಸ್ತ್ರ, ಗಣಕ ವಿಜ್ಞಾನ, ಗಣಿತ ಶಾಸ್ತ್ರ, ಗೃಹ ವಿಜ್ಞಾನ, ರೇಷ್ಮೆ ಕೃಷಿ, ಹಿಂದಿ ಸೇರಿದಂತೆ 16 ಸರ್ಟಿಫಿಕೇಟ್ ಕೋರ್ಸ್ ಗಳನ್ನು ಆರಂಭಿಸಿತು.

ನಂತರ ಅವರು ಮಾತನಾಡಿ, ಸದರಿ ಕೋರ್ಸ್ ಗಳು ಉದ್ಯೋಗ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿವೆ ಎಂದು ವ್ಯಕ್ತಪಡಿಸಿದರು.

ಕೋವಿಡ್ ನಂತರದಲ್ಲಿ ಶೈಕ್ಷಣಿಕ ವಲಯದಲ್ಲಿ ಮಹತ್ತರ ಬದಲಾವಣೆ ಆಗಿದೆ. ತಂತ್ರಜ್ಞಾನ ದ ಮೂಲಕ ಜ್ಞಾನಾರ್ಜನೆ ಪಡೆಯುವಂತಾಗಿದೆ. ಹಾಗಾಗಿ ಆಧುನಿಕ ತಂತ್ರಜ್ಞಾನದ ಬಳಕೆ ಆರಂಭವಾಗಿದೆ‌. ಆದರೆ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ಆಗತ್ಯತೆ ಹೆಚ್ಚಾಗಿದೆ ಎಂದರು.

ಆನ್ ಲೈನ್ ಮತ್ತು ಆನ್ ಲೈನ್ ಮೂಲಕ ನಡೆಯುವ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಹಾಗಾಗಿ ಸರ್ಕಾರದಿಂದ ದೊರೆಯುವ ಸಕಲ ಉಚಿತ ತರಬೇತಿಗಳು ಹಾಗು ಅನುಕೂಲಗಳನ್ನು ಸದುಪಯೋಗ ಪಡೆಯುವಂತೆ ಕಿವಿಮಾತು ಹೇಳಿದರು.

ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಯನ್ನು ರೂಪಿಸಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸುವಂತೆ ಕರೆ ನೀಡಿದರು.

ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಎ.ಎಂ.ಎಚ್‌. ವಿಜಯಲಕ್ಷ್ಮಿ ಮಾತನಾಡಿ, ಯುವ ಜನಾಂಗ ಅದರಲ್ಲೂ ಹೆಣ್ಣುಮಕ್ಕಳ ಸಮಗ್ರ ಅಭಿವೃದ್ಧಿಗೆ ಇಂತಹ ಕೋರ್ಸ್ ಗಳು ಉಪಯುಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಗರೀಕರಣ, ಔದ್ಯೋಗಿಕರಣ ಕಾಲಮಾನದಲ್ಲಿ ವೃತ್ತಿಗೆ ಸಂಬಂದಿಸಿದಂತೆ ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವುದಕ್ಕೆ ಮತ್ತು ಕೌಶಲಗಳನ್ನು ವೃದ್ಧಿ ಮಾಡಿಕೊಳ್ಳಲು ಈ ಕೋರ್ಸ್ ಗಳು ಸಹಕಾರಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಎಂ. ಅಬ್ದುಲ್ ರಹಿಮಾನ್ ಮಾತನಾಡಿ, ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದ ಅಗತ್ಯ ಮತ್ತು ಕಾರಣಗಳನ್ನು ವಿವರಿಸಿದರು.

ಶೈಕ್ಷಣಿಕ ವಿಭಾಗದ ನಿರ್ದೇಶಕರಾದ ಡಾ. ಅಪ್ಪಾಜಿಗೌಡ ಅವರನ್ನು ಸನ್ಮಾನಿಸಿತು.

ಡಾ. ಕೆಂಡಗಣ್ಣೇಗೌಡ ಪರಿಚಯಿಸಿದರು, ಶೈಕ್ಷಣಿಕ ಡೀನ್ ಡಾ. ಶ್ರೀಪಾದ್ ಸ್ವಾಗತಿಸಿದರು. ಮಮತಾ ನಿರೂಪಿಸಿದರು. ಐ.ಕ್ಯು.ಎ.ಸಿ ಸಹಸಂಚಾಲಕಿ ವನಿತಾ ವಂದಿಸಿದರು‌.

ಸಹಾಯಕ ನಿರ್ದೇಶಕರಾದ ಎಚ್.ಎಂ. ಮಂಜುನಾಥ್, ಎ.ಬಿ. ನಾಗೇಂದ್ರ ಪ್ರಸಾದ್, ನ್ಯಾಕ್ ವಿಶೇಷ ಅಧಿಕಾರಿ ಅರುಣ್ ಕುಮಾರ್, ವ್ಯವಸ್ಥಾಪಕರಾದ

ವೆಂಕಟೇಶ್, ಪರೀಕ್ಷಾ ವಿಭಾಗದ ನಿಯಂತ್ರಕರಾದ ಡಾ. ತೋಯಜಾಕ್ಷ, ಐ.ಕ್ಯು.ಎ.ಸಿ ಸಂಚಾಲಕರಾದ ನಂದಕುಮಾರ್, ಪತ್ರಾಂಕಿತ ವ್ಯವಸ್ಥಾಪಕರಾದ ಆರ್‌. ಮೀನಾಕ್ಷಿ, ಎಲ್ಲ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕತೇರರು, ವಿದ್ಯಾರ್ಥಿಗಳು ಇದ್ದರು‌.