ಶಾಸಕ ಶಾಮನೂರು ಶಿವಶಂಕರಪ್ಪಗೆ ಅಭಿನಂದನೆಗಳ ಮಹಾಪೂರ

| Published : Jun 17 2024, 01:37 AM IST

ಶಾಸಕ ಶಾಮನೂರು ಶಿವಶಂಕರಪ್ಪಗೆ ಅಭಿನಂದನೆಗಳ ಮಹಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭೆ ಕ್ಷೇತ್ರವನ್ನು ಗೆದ್ದು ಕೊಟ್ಟ ಕಿರಿಯ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆ ಎನಿಸಿದ ಸಂಭ್ರಮ ಕಂಡ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಈಗ ತಾವು 94ನೇ ಸಂವತ್ಸರಕ್ಕೆ ಕಾಲಿಟ್ಟ ಮಹಾಸಂಭ್ರಮ.

- ಬೆಳಗ್ಗೆಯಿಂದಲೇ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೊಂದಿಗೆ ಸಂಭ್ರಮಾಚರಣೆ । ಶುಭ ಕೋರಲು ದಿನವಿಡೀ ಜನಸಾಗರ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭೆ ಕ್ಷೇತ್ರವನ್ನು ಗೆದ್ದು ಕೊಟ್ಟ ಕಿರಿಯ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆ ಎನಿಸಿದ ಸಂಭ್ರಮ ಕಂಡ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಈಗ ತಾವು 94ನೇ ಸಂವತ್ಸರಕ್ಕೆ ಕಾಲಿಟ್ಟ ಮಹಾಸಂಭ್ರಮ.

93 ವರ್ಷ ಪೂರೈಸಿರುವ ಹಿರಿಯ ಕಾಂಗ್ರೆಸ್‌ ಮುಖಂಡರೂ ಆಗಿರುವ ಶಿವಶಂಕರಪ್ಪ ಅವರು 94ನೇ ಜನ್ಮದಿನವನ್ನು ಕುಟುಂಬ ಸಮೇತರಾಗಿ, ಸಂಸ್ಥೆ ಸಿಬ್ಬಂದಿ ಜೊತೆ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಸಂಘ-ಸಂಸ್ಥೆಗಳ ಜೊತೆ ಆಚರಿಸಿಕೊಂಡರು.

ಹಬ್ಬದ ಸಂಭ್ರಮ:

ನಗರದ ಎಂಸಿಸಿ ಬಿ ಬ್ಲಾಕ್‌ನ ತಮ್ಮ ನಿವಾಸ "ಶಿವಪಾರ್ವತಿ "ಯಲ್ಲಿ ಬೆಳಗ್ಗೆಯಿಂದಲೇ ಹುಟ್ಟುಹಬ್ಬ ನಿಮಿತ್ತ ನಡೆದ ಧಾರ್ಮಿಕ ಕಾರ್ಯಗಳಲ್ಲಿ ಶಾಸಕರು ಭಾಗಿಯಾದರು. ದಾವಣಗೆರೆ ದಕ್ಷಿಣ ಶಾಸಕ, ಕಾಂಗ್ರೆಸ್ಸಿನ ಹಿರಿಯ ನಾಯಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಶುಭಾಶಯ ಕೋರಲು ಅಭಿಮಾನಿಗಳ ಮಹಾಪೂರವೇ ಹರಿದುಬಂದಿತು. 93 ವಸಂತಗಳನ್ನು ಅರ್ಥಪೂರ್ಣವಾಗಿ ಪೂರೈಸಿ, ಇದೀಗ 94ನೇ ವರ್ಷಕ್ಕೆ ಕಾಲಿಟ್ಟಿರುವ ಅವರ ಮನೆಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.

ಬೆಳಗ್ಗೆಯೇ ಮನೆಯಲ್ಲಿ ಪೂಜೆ, ಲಿಂಗಪೂಜೆ ನಂತರ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಹೀಗೆ ಇಡೀ ಕುಟುಂಬ ಸಮೇತರಾಗಿ ಎಲ್ಲರ ಸಮ್ಮುಖ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿದರು. ಕಿರಿಯ ಪುತ್ರ, ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ, ಮೊಮ್ಮಗ ಸಮರ್ಥ ಎಂ. ಶಾಮನೂರು ವಿದೇಶದಲ್ಲಿರುವ ಕಾರಣ ವಾಟ್ಸಪ್ ವೀಡಿಯೋ ಕಾಲ್‌ನಲ್ಲೇ ಶಾಮನೂರು ಜನ್ಮದಿನದ ಸಂಭ್ರಮದಲ್ಲಿ ಭಾಗಿಯಾದರು.

ಮಕ್ಕಳಾದ ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್.ಬಕ್ಕೇಶ, ಎಸ್.ಎಸ್.ಗಣೇಶ, ಸುಧಾ ರಾಜೇಂದ್ರ ಪಾಟೀಲ, ಮಂಜುಳಾ ಶಿವಶಂಕರ, ಶೈಲಜಾ ಭಟ್ಟಾಚಾರ್ಯ, ಮೀನಾ ಪಾಟೀಲ್, ಸೊಸೆಯಂದಿರಾದ ಪ್ರೀತಿ ಬಕ್ಕೇಶ, ರೇಖಾ ಗಣೇಶ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ತಮ್ಮದೇ ಜನ್ಮದಿನ ಎಂಬಂತೆ ಶಾಮನೂರು ಜನ್ಮದಿನದ ಕೇಕ್ ಕತ್ತರಿಸಿ, ಆಚರಣೆಗೆ ಮತ್ತಷ್ಟು ರಂಗು ತಂದರು. ಎಸ್‌.ಎಸ್‌. ಮಲ್ಲಿಕಾರ್ಜುನ, ಸಮರ್ಥ ದೂರವಾಣಿಯಲ್ಲೇ ಶುಭಾರೈಸಿದರು.

94 ಕೆಜಿ ತೂಕದ ಕೇಕ್‌:

ಅನಂತರ ರಾಜ್ಯ, ರಾಷ್ಟ್ರಮಟ್ಟದ ವಿವಿಧ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಶಾಮನೂರು ಜನ್ಮದಿನಕ್ಕೆ ಶುಭ ಹಾರೈಸಿ, ದೇವರು ಆಯುರಾರೋಗ್ಯ ಕರುಣಿಸಲೆಂದು ಪ್ರಾರ್ಥಿಸಿದರು. ಅನಂತರ ಮನೆ ಅಂಗಳದಲ್ಲಿ ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದ ಜನರು ಬೊಕ್ಕೆ, ಪುಸ್ತಕ, ಹೂಗುಚ್ಛ, ದೇವರ ಫೋಟೋ, ವಿಗ್ರಹಗಳನ್ನು ತಂದು, ಶಾಮನೂರು ಅವರಿಗೆ ಜನ್ಮದಿನ ಶುಭ ಕೋರಿದರು. ಪಾಲಿಕೆ ಮಾಜಿ ಸದಸ್ಯ ಎಸ್.ಬಸಪ್ಪ 94 ಕೆಜಿ ತೂಕದ ಕೇಕ್ ಶಾಮನೂರುರಿಂದಲೇ ಕತ್ತರಿಸಿ, ಶುಭ ಕೋರಿ, ಅಭಿಮಾನ ಮೆರೆದರು.

ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್. ಬಸವಂತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಎಸ್.ಮಲ್ಲಿಕಾರ್ಜುನ, ಬ್ಲಾಕ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಹಿಳಾ ಅಧ್ಯಕ್ಷೆ ಅನಿತಾ ಬಾಯಿ ಮಾಲತೇಶ್, ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಪಾಲಿಕೆ, ಜಿಪಂ, ತಾಪಂ ಮಾಜಿ ಸದಸ್ಯರು, ಮುಖಂಡರು, ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ತಂಡೋಪತಂಡವಾಗಿ ಆಗಮಿಸಿ, ಶುಭ ಕೋರಿದರು.

ಅಭಾವೀಮ ರಾಷ್ಟ್ರೀಯ ಉಪಾಧ್ಯಕ್ಷರು, ಹಿರಿಯ ಕೈಗಾರಿಕೋದ್ಯಮಿಗಳಾದ ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ರೇಣುಕಾ ಪ್ರಸನ್ನ, ಗುರುಮೂರ್ತಿ, ಮಹಾಸಭಾದ ಪದಾಧಿಕಾರಿಗಳು, ಸಮಾಜ ಬಾಂಧವರು ಆಗಮಿಸಿ ಶುಭಾಶಯ ತಿಳಿಸಿದರು. ಆಂಧ್ರದ ಯಲ್ಲೂರು ಸಂಸದ ಮಹೇಶಕುಮಾರ ಯಾದವ್, ಹುಮಾನಬಾದ್‍ನ ಕಾಂಗ್ರೆಸ್ ಮುಖಂಡ ಅಭಿಷೇಕ್, ಅರಸೀಕೆರೆ ಕೊಟ್ರೇಶ, ಶಿರ್ಶಿ ವೀರಶೈವ ಸಮಾಜದ ಮುಖಂಡರು ಶುಭ ಕೋರಿದರು. ಎಸ್‌ಪಿ ಉಮಾ ಪ್ರಶಾಂತ್, ಎಎಸ್‌ಪಿ ವಿಜಯಕುಮಾರ ಸಂತೋಷ್, ಜಿ.ಮಂಜುನಾಥ, ಡಿವೈಎಸ್ಪಿಗಳಾದ ಮಲ್ಲೇಶ್ ದೊಡ್ಡಮನಿ, ಬಸವರಾಜ್, ಇನ್‌ಸ್ಪೆಕ್ಟರ್‌ಗಳಾದ ಕಿರಣಕುಮಾರ, ಇಮ್ರಾನ್ ಬೇಗ್, ಮಲ್ಲಮ್ಮ ಚೌಬೆ, ಬಾಲಚಂದ್ರ ನಾಯ್ಕ, ಸುನೀಲ ಇತರರು ಸಿಬ್ಬಂದಿಗಳೊಡನೆ ಆಗಮಿಸಿ ಶಾಸಕರಿಗೆ ಜನ್ಮದಿನದ ಶುಭಕಾಮನೆ ಹೇಳಿದರು.

ಕೃತಜ್ಞತೆ ಅರ್ಪಿಸಿದ ಡಾ.ಪ್ರಭಾ:

ಅಪರ ಡಿಸಿ ಲೊಕೇಶ್, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಎಸಿ ದುರ್ಗಾಶ್ರೀ, ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ, ಡಿಡಿಪಿಐ ಕೊಟ್ರೇಶ್, ಲೊಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನರೇಂದ್ರಬಾಬು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಶುಭ ಹಾರೈಸಿದರು. ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ರಮಾನಂದ, ಖಜಾಂಚಿ ನಿರಂಜನ್, ಆಡಳಿತ ಮಂಡಳಿ ಸದಸ್ಯರು, ಸಂಸ್ಥೆ ವಿವಿಧ ಶಾಲಾ- ಕಾಲೇಜು ಮುಖ್ಯಸ್ಥರು ಸಿಬ್ಬಂದಿ ಸಹ ಶಾಸಕರ ಜನ್ಮದಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಅನಂತರ ಶಾಮನೂರು ಕಿರಿ ಸೊಸೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

- - - -(ಫೋಟೋ ಇದೆ):