ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸದಾ ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತರುವ ಮಹತ್ತರ ಕೆಲಸ ಮಾಡುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ದೌರ್ಜನ್ಯ ಪ್ರಕರಣದಡಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ ಮಂಜೂರಾದ ನಿವೇಶನದ ಹಕ್ಕುಪತ್ರಗಳನ್ನು ಶನಿವಾರ ಇಲ್ಲಿನ ತಾಲೂಕು ಕಚೇರಿಯ ಸಭಾಂಗಣದಲ್ಲಿ ವಿತರಿಸಿ ಅವರು ಮಾತನಾಡಿದರು.
ತಾಲೂಕಿನ ದೊಡ್ಡಚೆಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಿ.ಸರ್ವೇ ನಂ. 50ರಲ್ಲಿ ರಚಿಸಿರುವ ನಿವೇಶನಗಳನ್ನು ದೊಡ್ಡಬೀರನಹಳ್ಳಿ ಗ್ರಾಮದ 31 ಫಲಾನುಭವಿಗಳಿಗೆ ಹಕ್ಕುಪತ್ರಗಳು ಮಂಜೂರಾಗಿವೆ.ಬಡವರು, ನಿರ್ಗತಿಕರು, ಸೌಲಭ್ಯಗಳನ್ನು ಪಡೆಯದೇ ಇರುವವರು ಮತ್ತು ಯಾವುದೇ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ಥರಾಗಿರುವವರಿಗೆ ಸರ್ಕಾರ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿವೇಶನ ಮಂಜೂರು ಮಾಡಲಾಗುತ್ತಿರುವುದು ನೊಂದಿರುವ ಸಮುದಾಯದ ಜನರಿಗೆ ಆಸರೆಯಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಮುನಿವೆಂಕಟಪ್ಪ, ಪರಶುರಾಂಪುರ ರಾಜಸ್ವ ನಿರೀಕ್ಷಕರಾದ ಎಸ್.ಆರ್. ರಾಜೇಶ್, ಶೀರಸ್ತೇದಾರರಾದ ಗಿರೀಶ್, ಮುಖಂಡರಾದ ಎಸ್.ಡಿ.ಜಯಣ್ಣ, ತಿಪ್ಪೇಸ್ವಾಮಿ, ಗಿರಿಯಪ್ಪ, ಶಿವಲಿಂಗಪ್ಪ, ಮಹಾಲಿಂಗಪ್ಪ, ಮಂಜುನಾಥ್, ತಿಪ್ಪೇಸ್ವಾಮಿ, ಮುಖಂಡರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.