ಕನ್ನಡಪ್ರಭ ವಾರ್ತೆ ಗುರುಮಠಕಲ್
ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗದೇ ಇರುವುದಿರಿಂದ ಹಳ್ಳಿಗಳಲ್ಲಿ ಮೂಲಸೌಕರ್ಯಗಳು ಸೇರಿದಂತೆ ಯಾವುದೇ ಅಭಿವೃದ್ಧಿಗೆ ಸಹಕರಿಸಲಾಗುತ್ತಿದ್ದು, ಈ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅಸಮಾಧಾನ ವ್ಯಕ್ತಪಡಿಸಿದರು.ಗುರಮಠಕಲ್ ಕ್ಷೇತ್ರದ ಗೋಪಾಳಪುರ ಗ್ರಾಮದಲ್ಲಿ ಕೆಕೆಆರ್‌ಡಿ ವತಿಯಿಂದ ಶಾಲಾ ತರಗತಿ ನಿರ್ಮಾಣ, ಚಿನ್ನಾಕಾರ ಗ್ರಾಮದಲ್ಲಿ ಕೆಕೆಆರ್‌ಡಿಬಿ ವತಿಯಿಂದ 2 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಬೆಟ್ಡದಳ್ಳಿ ಗ್ರಾಮದಲ್ಲಿ 15 ಲಕ್ಷ ರು. ವೆಚ್ಛದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಧರ್ಮಪುರ ತಾಂಡಾದಲ್ಲಿ 40 ಲಕ್ಷ ರೂ.ಗಳ ವೆಚ್ಚದಲ್ಲಿ ಸರ್ಕಾರಿ ಶಾಲೆಗೆ 2 ಕೋಣೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಗೋಪಾಳಪುರ ಗ್ರಾಮ:ಜನರ ಕುಂದು ಕೊರತೆ ಆಲಿಸಿದ ಶಾಸಕರು, ಪ್ರತಿ ವರ್ಷ ನಮಗೆ ಸರ್ಕಾರದಿಂದ ಬರುವ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಿಸಬೇಕಾದರೆ ಸ್ವಲ್ಪ ಸಮಯ ಹಿಡಿಯುತ್ತದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಗ್ರಾಮಕ್ಕೆ 10 ಲಕ್ಷ ರೂ.ಬಿಡುಗಡೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನವಾಬುರ್ಜ್-ಗೋಪಾಳಪುರ ರಸ್ತೆ ಸುಧಾರಣೆಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಅನುದಾನ ಬರಬೇಕಾದರೆ ಮೊದಲು ಟ್ರಸ್ಟ್ ಇರಬೇಕು. ಅಂದಾಗ ಮಾತ್ರ ಹಣ ಬಿಡುಗಡೆ ಮಾಡಿಸಬಹುದು ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾದರೆ ನಮ್ಮ ಕ್ಷೇತ್ರದಲ್ಲಿ ಶಿಕ್ಷಕರ ಸಮಸ್ಯೆ ನೀಗಲಿದೆ. 2015-16 ರಲ್ಲಿ ಕೆರೆಗಳ ಹೂಳೆತ್ತಲು ಬಂದಿದ್ದ ಸುಮಾರು 5 ಕೋಟಿ ರೂ.ಗಳ ಅಧಿಕಾರಿ, ಜನಪ್ರತಿನಿಧಿಗಳು ಅನಾಮತ್ತಾಗಿ ಎತ್ತಿ ಹಾಕಿದ ಕಾರಣ ಮತ್ತೆ ಸರ್ಕಾರದಿಂದ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ಎಇಇ ಶರಣಬಸವ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ, ಉಪ ತಹಸೀಲ್ದಾರ ಬಸವರಾಜ ಸಜ್ಜನ್, ಬಿಇಒ ಈರಪ್ಪ ಕನ್ನಳ್ಳಿ, ಸಿಡಿಪಿಒ ಶರಣಬಸವ, ಪಿಡಿಒ ಮಲ್ಲಿಕಾರ್ಜುನ ಸಜ್ಜನ್, ಅನುರಾಧ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಅಜಯರಡ್ಡಿ ಎಲ್ಹೇರಿ, ಮಹೇಂದ್ರರಡ್ಡಿ ಕಂದಕೂರ, ಈಶ್ವರ ನಾಯಕ, ಮಲ್ಲಿಕಾರ್ಜುನ ಅರುಣಿ, ಆನಂದ ವಡವಟ, ನರಸಿಂಹಲು ಚಿಂತಗುಂಟಾ, ಆನಂದ ಶಿಳ್ಳೆ, ನಾರಾಯಣ ಕೊಂಕಲ್, ಭೀಮರಾಯ ಕೊಂಕಲ್, ಶರಣಗೌಡ ಗುಂಜನೂರ, ಮೋದಿನ್‌ಸಾಬ ಗುಂಜನೂರ, ಬಸವರಾಜ ಹಳ್ಳಿ, ಬುಗ್ಗಾರಡ್ಡಿ ಧರ್ಮಾಪೂರ, ಚಿನ್ನಾಕರ ಗ್ರಾಮದ ಶರಣಗೌಡ ಚಂದಾನೂರ, ಶರಣಗೌಡ ಚಿನ್ನಾಕಾರ, ಸಿದ್ದಪ್ಪಗೌಡ ಹಳಿಮನಿ, ವಿಜಯರಡ್ಡಿ, ಪ್ರವೀಣ, ಗೋಪಾಳಪುರ ಗ್ರಾಮದ ಅನಂತರಡ್ಡಿ, ಆನಂದ, ಹಣಮರಡ್ಡಿ, ಮಹಾದೇವಪ್ಪ, ಸೂಗಪ್ಪ ಸಾಹು ಗಣಪೂರ, ಮಲ್ಲಣ್ಣ ಗಣಪೂರ, ಜಗದೀಶ್ ಬುರ್ಜ್ ತಾಂಡ,ಬೆಟ್ಟದಳ್ಳಿ ತಾಂಡಾದ ಶಂಕರ ರಾಠೋಡ, ಗೋಪಾಲ ರಾಠೋಡ, ಪತ್ತು ರಾಠೋಡ, ರಾಜು ಬೆಟ್ಟದಳ್ಳಿ ತಾಂಡ, ಧಮಾಪೂರ ತಾಂಡಾದ ಸುರೇಶ ಚಿನ್ನಾರಾಠೋಡ, ಡಿ.ಕೆ.ರವಿ ಇತರರು ಇದ್ದರು.