ಕಾನೂನು ಸುವ್ಯವಸ್ಥೆ ಕಾಪಾಡಲು ಸಂವಿಧಾನ ಮುಖ್ಯ

| Published : Nov 27 2024, 01:05 AM IST

ಕಾನೂನು ಸುವ್ಯವಸ್ಥೆ ಕಾಪಾಡಲು ಸಂವಿಧಾನ ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಸಂವಿಧಾನವೆಂಬುದು ದೇಶದ ಕಾನೂನು ಸುವ್ಯವಸ್ಥೆ ಮತ್ತು ಒಂದು ಚೌಕಟ್ಟಿನಲ್ಲಿ ಸಾಗುವ ದಾರಿಯ ದಿಕ್ಸೂಚಿ, ಪ್ರತಿಯೊಬ್ಬರಿಗೂ ಜೀವನದಲ್ಲೂ ಸಂವಿಧಾನದ ಪಾತ್ರ ಬಹಳ ಮುಖ್ಯ ಎಂದು 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಮಾರ್ ಅವರು ಹೇಳಿದರು.

ಕನಕಪುರ: ಸಂವಿಧಾನವೆಂಬುದು ದೇಶದ ಕಾನೂನು ಸುವ್ಯವಸ್ಥೆ ಮತ್ತು ಒಂದು ಚೌಕಟ್ಟಿನಲ್ಲಿ ಸಾಗುವ ದಾರಿಯ ದಿಕ್ಸೂಚಿ, ಪ್ರತಿಯೊಬ್ಬರಿಗೂ ಜೀವನದಲ್ಲೂ ಸಂವಿಧಾನದ ಪಾತ್ರ ಬಹಳ ಮುಖ್ಯ ಎಂದು 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಮಾರ್ ಅವರು ಹೇಳಿದರು.

ರೂರಲ್ ಪದವಿ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗ, ಎನ್ಸಿಸಿ, ಎನ್ನೆಸ್ಸೆಸ್‌, ಸ್ಕೌಟ್ಸ್ ಮತ್ತು ಗೈಡ್ಸ್, ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆ.ಸಿ.ಗೋಪಾಲಗೌಡ ಮಾತನಾಡಿ, ಯಾವ ಬಾಲಕನನ್ನು ಓದುವ ಅವಕಾಶದಿಂದ ವಂಚಿತ ಮಾಡಿದರೋ ಮುಂದೆ ಅದೇ ವ್ಯಕ್ತಿ ಅಂಬೇಡ್ಕರ್ ಇಡೀ ಭಾರತ ದೇಶ ಯಾವ ದಿಕ್ಕಿನಲ್ಲಿ ಸಾಗಬೇಕಿದೆ ಎಂದು ತಿಳಿಸುವ ಮಹಾ ಗ್ರಂಥ ಭಾರತ ದೇಶದ ಸಂವಿಧಾನವನ್ನೇ ಬರೆದರು. ಪ್ರಸ್ತುತ ಭಾರತ ದೇಶದ ಸಂವಿಧಾನ ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ಉತ್ತಮ ಬದುಕುವ ಜ್ಞಾನ ದೊರಕಿಸಿಕೊಡುತ್ತದೆ. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಸಂವಿಧಾನದ ಅರಿವು ಮೂಡಿಸುವುದೇ ಸಂವಿಧಾನ ದಿನಾಚರಣೆಯ ಉದ್ದೇಶ ಎಂದರು.

ಗ್ರಾಮ ವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮಾತನಾಡಿ, ಸರ್ಕಾರದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗ ಇತ್ತೀಚಿನ ದಿನಗಳಲ್ಲಿ ತಮ್ಮ ದಿಕ್ಕನ್ನು ಬಿಟ್ಟು ಬೇರೆ ಕಡೆ ಸಾಗುತ್ತಿವೆ. ಅದರಲ್ಲಿ ಇಂದಿಗೂ ತನ್ನದೇ ಆದ ಮೌಲ್ಯವನ್ನು ಉಳಿಸಿಕೊಂಡು ಬಂದಿರುವುದು ನ್ಯಾಯಾಂಗ. ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲೆ ಉತ್ತಮ ಅಭಿಪ್ರಾಯಗಳಿವೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎ.ನಾಗೇಶ್‌, 1ನೆ ಅಪಾರ ಸಿವಿಲ್ ನ್ಯಾಯಾಧೀಶೆ ರಾಧಾ ಎಸ್, 2 ನೇ ಅಪರ ಸಿವಿಲ್ ನ್ಯಾಯಾಧೀಶೆ ಸವಿತಾ, 3ನೇ ಅಪರ ಸಿವಿಲ್ ನ್ಯಾಯಾಧೀಶೆ ಪಾರ್ವತಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಚೆನ್ನೇಗೌಡ, ವಕೀಲರಾದ ಸಿದ್ಧಾರ್ಥ, ಅಭಿಷೇಕ್, ಕಾಮೇಶ್, ಸಂಸ್ಥೆಯ ಕಾರ್ಯದರ್ಶಿ ಪುಟ್ಟಸ್ವಾಮಿ, ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ, ಉಪ ಪ್ರಾಂಶುಪಾಲ ದೇವರಾಜು, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ, ಪತ್ರಿಕೋದ್ಯಮ ವಿಭಾಗದ ಮೋಹನ್ ಕುಮಾರ್, ಉಪನ್ಯಾಸಕರಾದ ವಾಣಿ, ವಿಜಯೇಂದ್ರ, ಜಗದೀಶ್ , ವಿದ್ಯಾರ್ಥಿಗಳು ಹಾಜರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರದ ರೂರಲ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಮಾರ್ ಅವರು ಚಾಲನೆ ನೀಡಿದರು. ನ್ಯಾಯಾಧೀಶರು, ವಕೀಲರು, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.