ಕಾನೂನು ಅರಿವು ಮೂಡಿಸುವುದೇ ಸಂವಿಧಾನ ದಿನದ ಉದ್ದೇಶ

| Published : Nov 27 2024, 01:05 AM IST

ಸಾರಾಂಶ

ಸಂವಿಧಾನ ಬಗ್ಗೆ ಅರಿವು, ಅರಿವು ಮೂಡಿಸುವುದೇ ಸಂವಿಧಾನ, ಸಂವಿಧಾನ ದಿನದ ಉದ್ದೇಶ, ನ್ಯಾ.ನಾಗೇಶ ಮೊಗೇರ

ಕನ್ನಡಪ್ರಭ ವಾರ್ತೆ ಸಿಂದಗಿ

ಭಾರತೀಯ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಅರಿವು ಮೂಡಿಸುವುದೇ ಸಂವಿಧಾನ ದಿನಾಚರಣೆಯ ಉದ್ದೇಶವಾಗಿದೆ ಎಂದು ಸಿಂದಗಿಯ ಹಿರಿಯ ಸಿವ್ಹಿಲ್ ನ್ಯಾಯಾಧೀಶ ನಾಗೇಶ ಮೊಗೇರ ಹೇಳಿದರು.ಪಟ್ಟಣದ ಎಚ್.ಜಿ.ಕಾಲೇಜಿನಲ್ಲಿ ಮಂಗಳವಾರ ಸಿಂದಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಎಚ್.ಜಿ.ಪದವಿಪೂರ್ವ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿಕೊಂಡ ಭಾರತೀಯ ಸಂವಿಧಾನ ದಿನದ ಕುರಿತಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಯುವಜನರಿಗೆ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ ಅವರು ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಹಕ್ಕುಗಳು ಹಾಗೂ ಕಾನೂನುಗಳನ್ನು ವಿವರಿಸುವ ಕಾನೂನು ದಾಖಲೆ ತಯಾರಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದಾರೆ. ಅಂಬೇಡ್ಕರ್ ಸೇರಿದಂತೆ ಮಹಾನ್ ವ್ಯಕ್ತಿಗಳ ಶ್ರಮವನ್ನು ಈ ದಿನದಂದು ನಾವೆಲ್ಲ ಸ್ಮರಿಸಬೇಕಿದೆ ಎಂದರು.ಹೆಚ್ಚುವರಿ ಸಿವಿಲ್ ನ್ಯಾ. ಎ.ಎ.ಮುಲ್ಲಾ, ಹೆಚ್ಚುವರಿ ಸಿವಿಲ್ ನ್ಯಾ.ಹರೀಶ ಜಾಧವ ಅವರು ಮಾತನಾಡಿ, ಭಾರತ ಸಂವಿಧಾನ ದಿನವು ಅಪಾರ ಐತಿಹಾಸಿಕ ಹಾಗೂ ಸಾಂಕೇತಿಕ ಮಹತ್ವವನ್ನು ಹೊಂದಿದೆ. ಇದು ಭಾರತೀಯ ಸಂವಿಧಾನ ಅಂಗೀಕಾರವನ್ನು ಗುರುತಿಸುತ್ತದೆ. ಇದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶ ಇತಿಹಾಸದಲ್ಲಿ ಘಟಿಸಿದ ಮಹತ್ವದ ಹಾಗೂ ಅದ್ಭುತ ಕ್ಷಣವಾಗಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರಂತಹ ಮಹಾನ್‌ ವ್ಯಕ್ತಿಗಳ ನೇತೃತ್ವದ ಸಂವಿಧಾನ ರಚನಾ ಸಮಿತಿ ಸಭೆಯ ಸದಸ್ಯರ ಅವಿರತ ಪ್ರಯತ್ನಗಳನ್ನು ಈ ದಿನ ನೆನಪಿಸುತ್ತದೆ. ಯುವ ಜನಾಂಗ ಸಂವಿಧಾನದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡುವ ಮೂಲಕ ಸಂವಿಧಾನಕ್ಕೆ ಗೌರವ ಕೊಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂವಿಧಾನದ ಕುರಿತು ನೀಡಿದ ಎಫ್.ಎ.ಹಾಲಪ್ಪನವರ ಉಪನ್ಯಾಸ ನೀಡಿದರು. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನ. ಇಡೀ ಭಾರತವನ್ನ ಅತ್ಯಂತ ಸಮಗ್ರವಾಗಿ ನಿರ್ವಹಿಸುವ ಶಕ್ತಿ ನಮ್ಮ ಸಂವಿಧಾನಕ್ಕೆ ಇದೆ. ಸಮಾನತೆ ಸ್ವಾತಂತ್ರ್ಯ ಭ್ರಾತೃತ್ವಗಳನ್ನು ಎತ್ತಿ ಹಿಡಿಯುವ ಮೂಲಕ ಈ ರಾಷ್ಟ್ರವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿ ಮಾಡುವಲ್ಲಿ ನಮ್ಮ ಸಂವಿಧಾನದ ಮಾತ್ರ ಅತ್ಯಂತ ಹಿರಿಯದಾಗಿದೆ ಎಂದರು. ಈ ವೇಳೆ ಸಿಂದಗಿ ವಕೀಲ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ, ಸಹಾಯಕ ಸರ್ಕಾರಿ ವಕೀಲ ಆನಂದ ರಾಠೋಡ ಮಾತನಾಡಿದರು. ಈ ವೇಳೆ ನ್ಯಾಯಾಧೀಶರನ್ನು ಸಂಸ್ಥೆ ಮತ್ತು ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಸರ್ಕಾರಿ ವಕೀಲ ಬಿ.ಜಿ.ನೆಲ್ಲಗಿ, ಪ್ರಾಚಾರ್ಯ ಎ.ಆರ್ ಹೆಗ್ಗನದೊಡ್ಡಿ ಇದ್ದರು.ಉಪನ್ಯಾಸಕಿ ಮುಕ್ತಾಯಕ್ಕಾ ಕತ್ತಿ ಸಂವಿಧಾನದ ಪೀಠಿಕೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಡಾ.ಅರವಿಂದ ಮನಗೂಳಿ, ಬಿ.ಎಸ್.ಬಿರಾದಾರ, ಎಸ್. ಎ.ಪಾಟೀಲ, ಆರ್.ಬಿ.ಹೊಸಮನಿ, ಎಂ.ಎನ್.ಅಜ್ಜಪ್ಪ, ಎ.ಬಿ.ಪಾಟೀಲ, ಜ್ಯೋತಿ ಚನ್ನುರ, ಎಂ.ಸಿ.ಕತ್ತಿ ಸೇರಿದಂತೆ ಇತರರು ಇದ್ದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ, ವಂದಿಸಿದರು.ಕನ್ನಡಪ್ರಭ ವಾರ್ತೆ ಸಿಂದಗಿಭಾರತೀಯ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಅರಿವು ಮೂಡಿಸುವುದೇ ಸಂವಿಧಾನ ದಿನಾಚರಣೆಯ ಉದ್ದೇಶವಾಗಿದೆ ಎಂದು ಸಿಂದಗಿಯ ಹಿರಿಯ ಸಿವ್ಹಿಲ್ ನ್ಯಾಯಾಧೀಶ ನಾಗೇಶ ಮೊಗೇರ ಹೇಳಿದರು.