ಆಡಳಿತ ವ್ಯವಸ್ಥಗೆ ಒಂದು ಹೊಸ ಚೌಕಟ್ಟನ್ನು ಕಟ್ಟಲು ಸಂವಿಧಾನ ರಚನೆ-ಡಾ. ಸುರೇಶ

| Published : Nov 27 2024, 01:06 AM IST

ಆಡಳಿತ ವ್ಯವಸ್ಥಗೆ ಒಂದು ಹೊಸ ಚೌಕಟ್ಟನ್ನು ಕಟ್ಟಲು ಸಂವಿಧಾನ ರಚನೆ-ಡಾ. ಸುರೇಶ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ವಿವಿಧತೆಯಲ್ಲಿ ಏಕತೆ ಸಾಧಿಸಿರುವ ರಾಷ್ಟ್ರ. ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆದ ನಂತರ ಭಾರತದ ಆಡಳಿತ ವ್ಯವಸ್ಥಗೆ ಒಂದು ಹೊಸ ಚೌಕಟ್ಟನ್ನು ಕಟ್ಟಲು ಸಂವಿಧಾನದ ರಚನೆಗೆ ಮುನ್ನಡಿ ಬರೆದು ಡಾ.ಬಿ.ಆರ್. ಅಂಬೇಡ್ಕರ್‌ರವರ ನೇತೃತ್ವದಲ್ಲಿ ಬೃಹತ ಸಂವಿಧಾನವನ್ನು ರಚಿಸಿ ಅಂಗೀರಕರಿಸಲಾಯಿತು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶಟ್ಟಿ ಹೇಳಿದರು.

ಹಾವೇರಿ: ಭಾರತ ವಿವಿಧತೆಯಲ್ಲಿ ಏಕತೆ ಸಾಧಿಸಿರುವ ರಾಷ್ಟ್ರ. ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆದ ನಂತರ ಭಾರತದ ಆಡಳಿತ ವ್ಯವಸ್ಥಗೆ ಒಂದು ಹೊಸ ಚೌಕಟ್ಟನ್ನು ಕಟ್ಟಲು ಸಂವಿಧಾನದ ರಚನೆಗೆ ಮುನ್ನಡಿ ಬರೆದು ಡಾ.ಬಿ.ಆರ್. ಅಂಬೇಡ್ಕರ್‌ರವರ ನೇತೃತ್ವದಲ್ಲಿ ಬೃಹತ ಸಂವಿಧಾನವನ್ನು ರಚಿಸಿ ಅಂಗೀರಕರಿಸಲಾಯಿತು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶಟ್ಟಿ ಹೇಳಿದರು. ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಪ್ರಜಾಸತ್ತಾತ್ಮಕ, ಆಡಳಿತಾತ್ಮಕ, ಜಾತ್ಯತೀತ, ನವೀನತೆಯನ್ನು ಸಾರುವ ಹಾಗೂ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಮೂಲಕ ದೇಶವನ್ನು ಸುಭದ್ರಗೊಳಿಸಿರುವ ಸಂವಿಧಾನವನ್ನು ಓದಿ ಅದರ ಮಹತ್ವ ಅರಿಯಬೇಕಾದದ್ದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು. ಜಾತಿ ಧರ್ಮಗಳನ್ನು ಒಗ್ಗೂಡಿಸಿ, ಸಾಮಾಜಿಕ ಅಸಮಾನತೆಯನ್ನು ದೂರಾಗಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವ ಆಶಯವನ್ನು ಹೊತ್ತ ಸಂವಿಧಾನವು ದೇಶದ ಬುಡಕಟ್ಟು ಸಮುದಾಯಗಳು, ಶೋಷಿತ ಹಾಗೂ ನೊಂದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಸಹಕಾರಿಯಾಗಿದೆ. ಇಂತಹ ಸಂವಿಧಾನವನ್ನು ಅಂಗೀಕಾರ ಮಾಡಿದ ಈ ದಿನವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸುವ ಮೂಲಕ ಸಂವಿಧಾನದ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು. ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಕುಲಸಚಿವರಾದ (ಮೌಲ್ಯಮಾಪನ) ಡಾ. ವಿಜಯಲಕ್ಷ್ಮೀ ತಿರ್ಲಾಪುರ ಇವರು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಸಂವಿಧಾನದ ಪೀಠಿಕೆಯನ್ನು ಓದಿಸಿದರು. ಕಾರ್ಯಕ್ರಮದಲ್ಲಿ ಡಾ. ಕವಿತಾ ನಾಯ್ಕ, ಡಾ. ರವೀಂದ್ರಕುಮಾರ ಬಣಕಾರ, ಡಾ. ಸಂತೋಷ ಆಲದಕಟ್ಟಿ, ಡಾ.ನೂರೂಲಾ, ಡಾ. ಪುಟ್ಟಸ್ವಾಮಿ ಎಚ್.ಬಿ, ಡಾ. ವಿಜಯಕುಮಾರ ಕೆಲ್ಲೂರ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.