ಸಾರಾಂಶ
ಮೊಳಕಾಲ್ಮೂರು ಗುತ್ತಿಗೆದಾರರ ಸಂಘದ ತಾಲೂಕು ಘಟಕದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಆರ್.ಮಂಜುನಾಥ್ ಅಭಿಮತ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು ಕೇಂದ್ರ ಸರ್ಕಾರ ಕೆಲ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತ ಮಾಡಿರುವುದು ಸಂಕಷ್ಟದಲ್ಲಿದ್ದ ಗುತ್ತಿಗೆದಾರರಿಗೆ ತುಸು ನೆಮ್ಮದಿ ನೀಡಿದಂತಾಗಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು.
ಪಟ್ಟಣದ ಗುತ್ತಿಗೆದಾರ ಸಂಘದ ಕಚೇರಿಯಲ್ಲಿ ನಡೆದ ಗುತ್ತಿಗೆದಾರರ ಸಂಘದ ತಾಲೂಕು ಘಟಕದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.ವರ್ಷಗಳಿಂದ ಗುತ್ತಿಗೆದಾರರಿಗೆ ಸರ್ಕಾರದಿಂದ ಬಾಕಿ ಹಣ ಪಾವತಿ ಮಾಡಿಲ್ಲ. ಹಲವು ಬಾರಿ ಈ ಕುರಿತು ಸರ್ಕಾರದ ಬಳಿ ಮನವಿ ಮಾಡಿದ್ದೇವೆ. ಆದ್ಯತೆ ಮೇರೆಗೆ ಹಣ ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ. ಶೀಘ್ರವೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರನ್ನು ಭೇಟಿ ಮಾಡಿ ಈ ಕುರಿತು ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದರು.ಗುತ್ತಿಗೆದಾರರು ಪರಸ್ಪರ ಪೈಪೋಟಿ ಮಾಡುವುದು ಬಿಡಬೇಕು. ಪ್ರತಿಷ್ಠೆಗೆ ಬಿದ್ದು ಕಡಿಮೆ ದರಕ್ಕೆ ಬಿಡ್ ಮಾಡಿ ನಷ್ಟಕ್ಕೀಡಾಗುತ್ತಿರುವುದು ಹೆಚ್ಚಿದೆ. ಪ್ರತಿಯೊಬ್ಬರು ಹೊಂದಾಣಿಕೆ ಮಾಡಿಕೊಂಡು ಕೆಲಸವನ್ನು ಹಂಚಿ ಮಾಡುವುದರಿಂದ ಎಲ್ಲರೂ ಬಾಳಬಹುದು. ಈ ಕುರಿತು ಗುತ್ತಿಗೆದಾರರು ಆಲೋಚಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಲ್ಲೇಶ್, ತಾಲೂಕು ಘಟಕದ ಅಧ್ಯಕ್ಷ ಬಿ.ಎನ್.ಗೋವಿಂದಪ್ಪ, ತಾಲೂಕು ಘಟಕದ ಗೌರವಾಧ್ಯಕ್ಷ ಎಸ್.ಖಾದರ್, ಉಪಾಧ್ಯಕ್ಷ ಕೆ. ಬಸವರಾಜ್, ಪಿ.ವಿ.ಅಶೋಕ, ಕಾರ್ಯದರ್ಶಿ ಕೆ.ಸಿ.ಶ್ರೀನಿವಾಸ ಸಹ ಕಾರ್ಯದರ್ಶಿ ಕೆ.ಬಸಣ ಖಜಾಂಚಿ ಬಿ.ಎಲ್. ತಿಪ್ಪೇಸ್ವಾಮಿ ನಿರ್ದೇಶಕರಾದ ಕೆ. ತಿಪ್ಪೇಸ್ವಾಮಿ ಬಡೋಬನಾಯಕ, ಎಚ್.ರಾಜ ಎಸ್.ಎಂ. ನಾಗರಾಜ್, ಸಿ. ಭಕ್ತಪ್ರಹಾ ದ್, ಪಿ. ಪರಮೇಶ್ವರಪ್ಪ, ತಿಮ್ಮಣ್ಣ, ಹೊನ್ನೂರಪ್ಪ ಇದ್ದರು.