ತಾಲೂಕಿನ ಸಾಗರೆ ಗ್ರಾಮದಲ್ಲಿ ಹುಲಿಯ ಉಪಟಳ ಜೋರಾಗಿದ್ದು, ಕೂದಲೆಳೆಯ ಅಂತರದಲ್ಲಿ ರೈತರೊಬ್ಬರು ಪಾರಾಗಿದ್ದರು.

ಕನ್ನಡಪ್ರಭ ವಾರ್ತೆ ಸರಗೂರುತಾಲೂಕಿನ ಸಾಗರೆ ಗ್ರಾಮದಲ್ಲಿ ಬುಧವಾರ ನೆಲ್ಲೂರು ಕೆರೆ ರಸ್ತೆಯಲ್ಲಿರುವ ಸಾಗರೆಯ ವೆಂಕಟರಮಣಶೆಟ್ಟಿ ಎಂಬವರ ತೋಟದ ಮನೆಯ ಮುಂಭಾಗ ಕಟ್ಟಿದ್ದ ಇಲಾತಿ ಹಸುವನ್ನು ಹುಲಿಯೊಂದು ಕೊಂಡೊಯ್ದು ಕಬ್ಬಿನ ತೋಟದ ಒಳಗಡೆ ತಿಂದು ಹಾಕಿದೆ.ವಿಷಯ ತಿಳಿದ ಅರಣ್ಯ ಇಲಾಖೆಯವರ ಗಮನಕ್ಕೆ ಸ್ಥಳಕ್ಕೆ ಸಿಬ್ಬಂದಿಯವರು ಬಂದು ಸ್ಥಳ ಪರಿಶೀಲನೆ ನಡೆಸಿದರು. ಮೃತ ಹಸುವಿನ ಮೌಲ್ಯ ಸುಮಾರು 70 ಸಾವಿರ ಆಗಿರುತ್ತದೆ ಎಂದು ನೊಂದ ರೈತ ತಿಳಿಸಿದ್ದಾರೆ.ಈ ಹಿಂದೆ ಹುಲಿ ಹೆಜ್ಜೆ ಗುರುತು ಇದೆ ಎಂದು ಸರಗೂರಿನ ಅರಣ್ಯ ಇಲಾಖೆಯವರಿಗೆ ಅರ್ಜಿ ಸಲ್ಲಿಸಿದ್ದರು.ತಾಲೂಕಿನ ಸಾಗರೆ ಗ್ರಾಮದಲ್ಲಿ ಹುಲಿಯ ಉಪಟಳ ಜೋರಾಗಿದ್ದು, ಕೂದಲೆಳೆಯ ಅಂತರದಲ್ಲಿ ರೈತರೊಬ್ಬರು ಪಾರಾಗಿದ್ದರು. ಹುಲಿ ನೋಡಿದ ಅಕ್ಕ, ಪಕ್ಕ ಜಮೀನಿನವರು ಜೋರಾಗಿ ಕೂಗಿ ಕೊಂಡಾಗ ಹುಲಿ ಪರಾರಿಯಾಗಿದೆ. ನಾಲ್ಕು ದಿನಗಳಿಂದ ಮೂರು ಎತ್ತುಗಳು ಮತ್ತು ಮೇಕೆಗಳ ದಾಳಿ ನಡೆಸಿ ತಿಂದಿದೆ ಎಂದು ಗ್ರಾಮಸ್ಥರು ತಿಳಿಸಿದರು.ಗ್ರಾಮದಲ್ಲಿ ಓಡಾಡುತ್ತಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಸಾಗರೆ ಗ್ರಾಮದ ಸಕಲೇಶ್ ಅವರು ಸರಗೂರು ವಲಯ ಅರಣ್ಯಾಧಿಕಾರಿ ಅಕ್ಷಯ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ರೈತ ವೆಂಕಟರಮಣಶೆಟ್ಟಿ, ಸಕಲೇಶ್, ನಿವೃತ್ತ ಟಿ.ಸಿ ಬಸವರಾಜು, ಗ್ರಾಮಸ್ಥರಾದ ಮಹೇಶ್, ಶಿವರಾಂ, ರಘು, ಜಯಶಂಕರ್, ರವಿ, ಸೋಮೇಶ್, ರಾಜೇಶ್ ಇದ್ದರು.