ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಸುಮಾರು ೨೫೦೦ಕ್ಕೂ ಹೆಚ್ಚು ರೈತರು ಕೃಷಿ ಬಿಕ್ಕಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ರಾಜ್ಯ ಸರ್ಕಾರಗಳು ಬಜೆಟ್ ಮಂಡನೆಯಲ್ಲಿ ಕೃಷಿ ಹಾಗೂ ರೈತರನ್ನು ಕಡೆಗಣಿಸಿ ಕಾರ್ಪೋರೇಟ್ ಕೃಷಿಗೆ ಒತ್ತು ಹಾಕುತ್ತಿರುವ ಹಿನ್ನೆಲೆಯಲ್ಲಿ ರೈತರು ಹಾಕಿರುವ ಬಂಡವಾಳ ವಾಪಸ್ಸಾಗದೆ ನಷ್ಟಕ್ಕೆ ಸಿಲುಕಿದ ಸ್ವಾಭಿಮಾನಿಗಳು ಪರ್ಯಾಯ ವ್ಯವಸ್ಥೆಗಳಿಲ್ಲದೆ ಆತ್ಮಹತ್ಯೆಗೆ ಶರಣಾಗುವಂತಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಪರ್ಯಾಯ ರಾಜಕಾರಣಕ್ಕಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ವಿವಿಧ ಬೇಡಿಕೆಗಳ ಹಕ್ಕೋತ್ತಾಯಕ್ಕಾಗಿ ಮನೆ ಮನೆ ಭೇಟಿ ಸಹಿ ಸಂಗ್ರಹದೊಂದಿಗೆ ಡಿ.೨೧ರ ಭಾನುವಾರ ಬೆಂಗಳೂರಿನ ಸ್ವಾತಂತ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿಪಿಎಂ ಜಿಲ್ಲಾಧ್ಯಕ್ಷ ಸೂರ್ಯನಾರಾಯಣ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮಟ್ಟದ ಅಂದೋಲನದಲ್ಲಿ ಸುಮಾರು ೧೦ ಲಕ್ಷ ಮಂದಿಗೆ ತಲುಪುವಂತೆ ಮನೆ ಮನೆಗೆ ಭೇಟಿ ನೀಡಿ ಕೇಂದ್ರ-ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ದ ಜಾಗೃತಿ ಮೂಡಿಸಲಾಗುವುದು, ಪ್ರತಿಭಟನಾ ರ್‍ಯಾಲಿಯಲ್ಲಿ ಸುಮಾರು ೨೫ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ರೈತರ ಆತ್ಮತ್ಯೆ:

ಜಿಲ್ಲೆಯಲ್ಲಿ ೩ ದಿನಗಳ ಕಾಲ ಬಹಿರಂಗ ಪ್ರಚಾರ ಹಮ್ಮಿಕೊಳ್ಳಲಾಗುವುದು, ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಸುಮಾರು ೨೫೦೦ಕ್ಕೂ ಹೆಚ್ಚು ರೈತರು ಕೃಷಿ ಬಿಕ್ಕಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ರಾಜ್ಯ ಸರ್ಕಾರಗಳು ಬಜೆಟ್ ಮಂಡನೆಯಲ್ಲಿ ಕೃಷಿ ಹಾಗೂ ರೈತರನ್ನು ಕಡೆಗಣಿಸಿ ಕಾರ್ಪೋರೇಟ್ ಕೃಷಿಗೆ ಒತ್ತು ಹಾಕುತ್ತಿರುವ ಹಿನ್ನೆಲೆಯಲ್ಲಿ ರೈತರು ಹಾಕಿರುವ ಬಂಡವಾಳ ವಾಪಸ್ಸಾಗದೆ ನಷ್ಟಕ್ಕೆ ಸಿಲುಕಿದ ಸ್ವಾಭಿಮಾನಿಗಳು ಪರ್ಯಾಯ ವ್ಯವಸ್ಥೆಗಳಿಲ್ಲದೆ ಆತ್ಮಹತ್ಯೆಗೆ ಶರಣಾಗುವಂತಾಗಿದೆ ಎಂದು ವಿಷಾದಿಸಿದರು.ಕಳೆದ ೨೦೨೨ರಲ್ಲಿ ಬರಗಾಲವಿತ್ತು. ೨೦೨೩-೨೪ರಲ್ಲಿ ಅತಿವೃಷ್ಟಿಯಿಂದಾಗಿ ಸತತ ನಷ್ಟಕ್ಕೆ ಒಳಗಾದ ರೈತರಿಗೆ ಸಾಲಗಾರರಿಂದ ಸಹಿಸಲಾಗದ ಅಪಮಾನಕ್ಕೆ ಗುರಿಯಾದ ಸ್ವಾಭಿಮಾನಿ ರೈತ ಆತ್ಮಹತ್ಯೆಯೊಂದೇ ಮಾರ್ಗವೆಂಬ ಭಾವನೆಯಲ್ಲಿ ಸಾವನ್ನಾಪ್ಪಿರುವುದು ದುರಂತದ ಸಂಗತಿಯಾಗಿದೆ. ಬಂಡವಾಳ ಶಾಹಿಗಳು ರೈತರಿಗೆ ಕೃಷಿ ಭೂಮಿ ಇಲ್ಲದಂತೆ ಕೈಗಾರಿಕೆಗಳ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಖರೀದಿಸಿದ್ದಾರೆ. ಈ ಪೈಕಿ ಶೇ.೪೦ರಷ್ಟು ಮಾತ್ರ ಕೈಗಾರಿಕೆಗೆ ಬಳಸಿಕೊಂಡಿದ್ದಾರಷ್ಟೇ ಎಂದರು. ಕೃಷ್ಣಾ ನೀರು ಪಡೆಯುವಲ್ಲಿ ವಿಫಲ

ರಾಜ್ಯದಲ್ಲಿ ತಮ್ಮ ಪಾಲಿನ ನೀರನ್ನು ಸದ್ಬಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಸರ್ಕಾರವು ನಮ್ಮ ಜಿಲ್ಲೆಗೆ ಕೊಳಚೆ ನೀರಿಗೆ ಕೋಟ್ಯತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಕೃಷ್ಣ ನದಿ ನೀರು ಪಡೆಯುವಲ್ಲಿ ವಿಫಲವಾಗಿದೆ. ಅವೈಜ್ಞಾನಿಕ ಯೋಜನೆಗಳಿಗೆ ಸಾವಿರಾರು ಕೋಟಿ ದುರ್ಬಳಿಸಿಕೊಂಡಿದೆ. ಕೇಂದ್ರ ಸರ್ಕಾರವು ರಾಜ್ಯದ ಬಗ್ಗೆ ಮಲತಾಯಿಧೋರಣೆ ಹೊಂದಿದ್ದು ತಾರತಮ್ಯ ಮಾಡುತ್ತಿರುವುದು ಅನ್ಯಾಯದ ಪರಮಾವಧಿಯಾಗಿದೆ ಎಂದು ದೂರಿದರು. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ವ್ಯಾಪಕವಾಗಿದೆ. ಮುಂದಿನ ಬಜೆಟ್‌ನಲ್ಲಾದರೂ ರಾಜ್ಯದಲ್ಲಿನ ೨,೫ ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಟಿ.ಎಂ.ವೆಂಕಟೇಶ್, ಪಾತಪಾಳ್ಯ ನವೀನ್ ಕುಮಾರ್, ಅಪ್ಪಯ್ಯಣ್ಣ ಇದ್ದರು.