ರಾಮನಗರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ 66ನೇ ಹುಟ್ಟು ಹಬ್ಬವನ್ನು ಜೆಡಿಎಸ್ ಕಾರ್ಯಕರ್ತರೊಂದಿಗೆ ಮಂಗಳವಾರ ಸರಳವಾಗಿ ಆಚರಿಸಿಕೊಂಡರು.

ರಾಮನಗರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ 66ನೇ ಹುಟ್ಟು ಹಬ್ಬವನ್ನು ಜೆಡಿಎಸ್ ಕಾರ್ಯಕರ್ತರೊಂದಿಗೆ ಮಂಗಳವಾರ ಸರಳವಾಗಿ ಆಚರಿಸಿಕೊಂಡರು.

ಬೆಂಗಳೂರಿನಿಂದ ಮಂಡ್ಯ ಕಡೆಗೆ ತೆರಳುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಬಸವನಪುರದ ಬಳಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಅವರ ನೇತೃತ್ವದಲ್ಲಿ ಮುಖಂಡರು ಭೇಟಿ ಮಾಡಿ ಸಿಹಿ ತಿನ್ನಿಸಿ ಹುಟ್ಟುಹಬ್ಬದ ಶುಭಾಷಯ ತಿಳಿಸಿದರು. ಈ ವೇಳೆ ಕುಮಾರಸ್ವಾಮಿರವರು ಜೆಡಿಎಸ್ ಯುವ ಮುಖಂಡ ಜಿ.ಟಿ.ಕೃಷ್ಣ ಅವರಿಗೆ ಸಿಹಿ ತಿನಿಸಿದರು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ನೇತೃತ್ವದ ಸರ್ಕಾರ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಅಂದು ವಿಜೃಂಭಣೆಯಿಂದ ಜನ್ಮ ದಿನವನ್ನು ಆಚರಿಸೋಣ ಇಂದು ಸರಳವಾಗಿ ನನ್ನ ಜನ್ಮ ದಿನ ಆಚರಿಸಿದರೆ ಸಾಕು ಎಂದು ಜೆಡಿಎಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಬೆಡ್‌ ಶೀಟ್ ವಿತರಣೆ :

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹುಟ್ಟು ಹಬ್ಬದ ಅಂಗವಾಗಿ ನಗರ ದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಹಳೇ ಬಸ್ ನಿಲ್ದಾಣದಲ್ಲಿ ಕೇಕ್ ಕತ್ತರಿಸಿ ಬಡ ಮಹಿಳೆಯರಿಗೆ ಬೆಡ್‌ಶೀಟ್‌ಗಳನ್ನು ವಿತರಣೆ ಮಾಡಿದರು.

ಈ ವೇಳೆ ರಾಜ್ಯ ವಕ್ತಾರ ಬಿ.ಉಮೇಶ್ ಮಾತನಾಡಿ, ರಾಮನಗರ ವಿಧಾನಸಭಾ ಕ್ಷೇತ್ರ ಕುಮಾರಸ್ವಾಮಿ ಅವರಿಗೆ ರಾಜಕೀಯ ಪುನರ್‌ ಜನ್ಮ ನೀಡಿದ ಕ್ಷೇತ್ರವಾಗಿದೆ. ಆದ್ದರಿಂದ ಕ್ಷೇತ್ರವನ್ನು ಅವರು ಮರೆತಿಲ್ಲ ಎಂದು ಹೇಳಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಶಿವಲಿಂಗಯ್ಯ (ಸಬ್ಬಕೆರೆ), ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ನಗರಸಭಾ ಸದಸ್ಯ ಮಂಜುನಾಥ್ ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿ ಅವರು ದೀರ್ಘಾ ಯುಷಿಗಳಾಗಿ ಬಾಳಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿಗಳಾಗಲಿ ಎಂದು ಹಾರೈಸಿದರು.

ನಗರಸಭಾ ಸದಸ್ಯರಾದ ಗ್ಯಾಬ್ರಿಯಲ್, ರಮೇಶ್, ಜೆಡಿಎಸ್ ಮುಖಂಡರಾದ ಕೆ.ಚಂದ್ರಯ್ಯ, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಕೃಷ್ಣಮೂರ್ತಿ, ವೆಂಕಟೇಶ್, ಜಿ.ಟಿ.ಕೃಷ್ಣೇಗೌಡ, ಉಮೇಶ್, ತಾಪಂ ಮಾಜಿ ಸದಸ್ಯ ಲಕ್ಷ್ಮಿಕಾಂತ್, ಬಾಲಗೇರಿ ರವಿ, ಟಿಎಪಿಎಂಎಸ್ ನಿರ್ದೇಶಕ ವಾಸು, ಜನತಾ ನಾಗೇಶ್, ನಂಜಪ್ಪ, ಗೂಳಿಗೌಡ, ವರುಣ, ವೆಂಕಟೇಶ್, ಸರಸ್ವತಿ, ಪೂರ್ಣಿಮಾ, ಆರ್.ಶೋಭಾ , ಮಮತಾ, ಕುಮಾರ್, ಶ್ರೀನಿವಾಸ್, ಜಿ.ಕೆ.ಗಂಗಾಧರ್, ವಿಎಸ್‌ಎಸ್‌ಎನ್ ನಿರ್ದೇಶಕ ಕೆಂಪರಾಜು, ಜಯಕುಮಾರ್, ಚೇತನ್, ನರೇಂದ್ರ, ಶಿವಕುಮಾರಸ್ವಾಮಿ, ಯೋಗೇಶ್ ವಿ.ನರಸಿಂಹಮೂರ್ತಿ, ಮೊಟ್ಟೆದೊಡ್ಡಿ ಮಹೇಶ್, ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.

-------------------------

16ಕೆಆರ್ ಎಂಎನ್ 7.ಜೆಪಿಜಿ

ಕೇಂದ್ರ ಸಚಿವ ಕುಮಾರಸ್ವಾಮಿರವರು ಜೆಡಿಎಸ್ ಯುವ ಮುಖಂಡ ಜಿ.ಟಿ.ಕೃಷ್ಣ ಅವರಿಗೆ ಸಿಹಿ ತಿನಿಸಿದರು.

--------------------------