ಗುಣಮಟ್ಟದ ಹಾಲು ಉತ್ಪಾದನೆಯಿಂದ ಹೈನುಗಾರಿಕೆ ಲಾಭದಾಯಕ: ಡಾ.ಮಹದೇವಯ್ಯ

| Published : Sep 29 2024, 01:32 AM IST

ಸಾರಾಂಶ

ಚಾಮರಾಜನಗರ ತಾಲೂಕಿನ ಹರವೆ ಹೋಬಳಿ ಬೆಟ್ಟದಪುರ ಗ್ರಾಮದಲ್ಲಿ ''''ಶುದ್ಧ ಹಾಲು ಉತ್ಪಾದನೆ ಮತ್ತು ಲಾಭದಾಯಕ ಹೈನುಗಾರಿಕೆ'''' ಕುರಿತು ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಯಿಂದ ಹೈನುಗಾರಿಕೆ ಲಾಭದಾಯಕ ಎಂದು ಡಾ.ಮಹದೇವಯ್ಯ ಅವರು ತಿಳಿಸಿದರು. ಕೃಷಿ ವಿಶ್ವವಿದ್ಯಾನಿಲಯ ಹಾಗೂ ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ವತಿಯಿಂದ ಅಂತಿಮ ವರ್ಷದ ಬಿಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವತಿಯಿಂದ ಹರವೆ ಹೋಬಳಿ ಬೆಟ್ಟದಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ''''''''ಶುದ್ಧ ಹಾಲು ಉತ್ಪಾದನೆ ಮತ್ತು ಲಾಭದಾಯಕ ಹೈನುಗಾರಿಕೆ'''''''' ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೈನುಗಾರಿಕೆ ಲಾಭದಾಯಕವಾಗಬೇಕೆಂದರೆ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಬಹಳ ಮುಖ್ಯ. ಹಸುವಿನ ಆಹಾರ ಮತ್ತು ಆರೋಗ್ಯ ಕಾಪಾಡುವುದುರಿಂದ ಹೈನುಗಾರಿಕೆಯಲ್ಲಿ ಲಾಭ ಪಡೆಯಬಹುದು. ಹಸುವಿನ ಆಹಾರದಲ್ಲಿ ಖನಿಜಾಂಶಗಳ ಬಳಕೆ ಮಾಡಬೇಕು ಎಂದು ತಿಳಿಸಿದರು.

ವೈವಿಧ್ಯಮಯ ಮತ್ತು ಉತ್ತಮ ಹುಲ್ಲಿನ ಜೊತೆ ಖನಿಜಾಂಶಗಳ ಬಳಕೆ ಮಾಡುವುದರಿಂದ ಹಾಲಿನ ಗುಣಮಟ್ಟ ಹೆಚ್ಚಾಗುತ್ತದೆ. ಹಸುವಿಗೆ ರೋಗ ಬರುವ ಮುನ್ನ ಲಸಿಕೆ ಹಾಕುವುದು ಉತ್ತಮ. ಹಾಲು ಕರೆಯುವ ರೀತಿಯಲ್ಲಿ ಬದಲಾವಣೆ, ಮತ್ತು ಸ್ವಚ್ಛತೆಯನ್ನು ಕಾಪಾಡುದಲ್ಲಿ ರೋಗಗಳ ಸಮಸ್ಯೆ ಇರುವುದಿಲ್ಲ. ದೇಶಿ ಹಸುಗಳನ್ನು ಸಾಕುವುದು ಉತ್ತಮ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶುದ್ಧ ಹಾಲು ಉತ್ಪಾದನೆ ಮತ್ತು ಲಾಭದಾಯಕ ಹೈನುಗಾರಿಕೆ ಪದ್ಧತಿಯನ್ನು ಆಡಿಯೋ ವಿಡಿಯೋ ದೃಶ್ಯಗಳ ಸಹಾಯದಿಂದ ಗ್ರಾಮಸ್ಥರಿಗೆ ವಿವರಿಸಿದರು. ವಿಜ್ಞಾನಿಗಳು ಹಾಗೂ ರೈತರ ಉತ್ತಮ ಚರ್ಚೆಯಿಂದ ಕಾರ್ಯಕ್ರಮ ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ಡಾ.ನಾಗೇಶ್ ,ಶಿವಕುಮಾರ್ ಗ್ರಾ.ಪಂ.ಅಧ್ಯಕ್ಷರು , ಸುಭದ್ರಮ್ಮ(ಕಡಪ್ಪ) ಮತ್ತು ಸುಬ್ಬಮ್ಮ ಗ್ರಾ.ಪಂ. ಸದಸ್ಯರು, ಗೌ. ಮಾದೇವಪ್ಪ ಮತ್ತು ಪುಟ್ಟಪ್ಪ,ಚನ್ನಬಸಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು,ಗ್ರಾಮದ ಎಲ್ಲಾ ಗಣ್ಯರು, ಗ್ರಾಮಸ್ಥರು ಮತ್ತು ಮಕ್ಕಳು ಉಪಸ್ಥಿತರಿದ್ದರು.