ಸಾರಾಂಶ
ಶಿರಾ: 2024-25ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಆಯೋಜಿಸಿದ್ದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಪ್ರೆಸಿಡೆನ್ಸಿ ಕಾಲೇಜಿನ ಕ್ರೀಡಾಪಟುಗಳು ಅತ್ಯುತ್ತಮ. ಸಾಧನೆತೋರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಸುಬ್ರಮಣ್ಯ ಡಿ.ಕೆ. ತಿಳಿಸಿದ್ದಾರೆ. ರಾಜ್ಯಮಟ್ಟದ ಕ್ರೀಡಾಸ್ಪರ್ಧೆಗಳಿಗೆ ಹ್ಯಾಂಡ್ಬಾಲ್ ಬಾಲಕರ ವಿಭಾಗದಲ್ಲಿ ಧನುಷ್, ಮೋಹಿತ್, ಜೀವನ್, ಕರಾಟೆ ದರ್ಶನ್, ಶಶಾಂಕ್, ರೋಹಿತ್, ಬಾಲಕಿಯರ ವಿಭಾಗದ ದಿವ್ಯಶ್ರೀ, ಲಯಶ್ರಿ, ಬ್ಯಾಸ್ಕೆಟ್ ಬಾಲ್ ಬಾಲಕರ ವಿಭಾಗದಲ್ಲಿ ಶರತ್, ಲಿಖಿತ್, ಚಂದನ್, ಪುನಿತ್ ಹಾಗೂ ಈಜು ಸ್ಪರ್ಧೆಯಲ್ಲಿ ಅಕ್ಷಯ್ ಶರ್ಮ, ಧೀರಜ್, ಶಿವಸಜನ್ ಹಾಗೂ ಬಾಕ್ಸಿಂಗ್ ನಲ್ಲಿ ಜ್ನಾನೇಶ್, ತ್ರಿಶೂಲ್ ಪಂದ್ಯಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಅಯ್ಕೆಯಾಗಿದ್ದು, ರಾಜ್ಯಮಟ್ಟದಲ್ಲಿ ತುಮಕೂರು ಜಿಲ್ಲೆಯನ್ನು ಈ ಕ್ರೀಡೆಗಳಲ್ಲಿ ಪ್ರತಿನಿಧಿಸಲಿದ್ದಾರೆ. ಈ ಸಾಧನೆಗೈದ ಕ್ರೀಡಾಪಟುಗಳಿಗೆ ವಿಧಾನಪರಿಷತ್ ಸದಸ್ಯರು ಹಾಗೂ ಪ್ರೆಸಿಡೆನ್ಸಿ ಸಂಸ್ಥೆಯ ಅಧ್ಯಕ್ಷರಾದ ಚಿದಾನಂದ್ ಎಂ ಗೌಡ ಅವರು ಅಭಿನಂದಿಸಿ, ರಾಜ್ಯಮಟ್ಟದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲಿ ಎಂದು ಶುಭಕೋರಿದ್ದಾರೆ.