ಸಾರಾಂಶ
ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಸಹನಾ ಆರೋಗ್ಯದಲ್ಲಿ ಏರುಪೇರಾಗಿದ್ದು, ಗರ್ಭದಲ್ಲಿರುವ ಭ್ರೂಣದ ಬೆಳವಣಿಗೆ ಕುಂಠಿತವಾಗಿದೆ.
ದಾವಣಗೆರೆ : ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಸಹನಾ ಆರೋಗ್ಯದಲ್ಲಿ ಏರುಪೇರಾಗಿದ್ದು, ಗರ್ಭದಲ್ಲಿರುವ ಭ್ರೂಣದ ಬೆಳವಣಿಗೆ ಕುಂಠಿತವಾಗಿದೆ.
ಜಿಲ್ಲೆಯ ಹರಿಹರದಲ್ಲಿರುವ ತವರು ಮನೆಯಲ್ಲಿ ಗರ್ಭಿಣಿ ಸಹನಾ ಅವರ ಆರೈಕೆ ಮಾಡಲಾಗುತ್ತಿದ್ದು, ಗುರುವಾರ ಬಿಡುಗಡೆಯಾದ ರೆಣುಕಾಸ್ವಾಮಿ ಕೊನೆಕ್ಷಣದ ಫೋಟೋಗಳನ್ನು ನೋಡಿ ಭಾವುಕರಾಗಿದ್ದಾರೆ. ಗಂಡನ ಕೊಲೆ ಪ್ರಕರಣದ ಬಳಿಕ ತೀವ್ರ ಘಾಸಿಗೊಳಗಾಗಿರುವ ಸಹನಾ ಹಾಸಿಗೆಯಿಂದ ಏಳುದಷ್ಟು ಆರೋಗ್ಯದಲ್ಲಿ ಏರುಪೇರಾಗಿದೆ.
ಆದ್ದರಿಂದಲೇ ವಾತಾವರಣ ಬದಲಾಗಲೆಂಬ ಕಾರಣಕ್ಕೆ ತವರು ಮನೆಗೆ ಕರೆತರಲಾಗಿದೆ. ಸಹನಾ ತಪಾಸಣೆ ಮಾಡಿದ್ದ ವೈದ್ಯರು ಗರ್ಭದಲ್ಲಿರುವ ಕೂಸಿನ ಬೆಳವಣಿಗೆ ಕುಂಠಿತವಾಗಿದೆ. ಕನಿಷ್ಠ 2 ವಾರ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಗುರುವಾರ ಫೋಟೋ ನೋಡಿ ಕಣ್ಣೀರಿಟ್ಟ ಸಹನಾ, ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಕ್ಷಮಿಸಬೇಕಾಗಿತ್ತು. ಆರೋಪಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂದು ಕಣ್ಣೀರು ಸುರಿಸಿದ್ದಾರೆ.