ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಗರುಡಪಾಳ್ಯದ ಸರ್ವೇ ನಂಬರ್.೪೭ರಲ್ಲಿ ೧ ಎಕರೆ ಹಾಗೂ ಸರ್ವೇ ನಂಬರ್ ೪೬ರಲ್ಲಿ ೧೬ ಎಕರೆ ೨೦ ಗುಂಟೆ ಜಮೀನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಫಾರಂ ಹೌಸ್ ನಿರ್ಮಿಸಿಕೊಂಡಿದ್ದಾರೆ. ಅಕ್ರಮದ ಆರೋಪವು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಂಡಿದ್ದಲ್ಲಿ ಅದನ್ನು ತಿದ್ದುಪಡಿ ಮಾಡುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ‘ಮಿಸ್ಟರ್ ಕ್ಲೀನ್’ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಮ್ಮ ತವರಿನಲ್ಲಿ ಅಕ್ರಮವಾಗಿ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಗುರುವಾರ ಬೆಳಗಿನ ಜಾವ ತಹಸೀಲ್ದಾರ್ ಕಚೇರಿ ಮುಂದೆ ಜಿಲ್ಲಾ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.ನಗರದ ಮೆಕ್ಕೆ ವೃತ್ತದಲ್ಲಿನ ತಹಸೀಲ್ದಾರ್ ಕಚೇರಿ ಬಳಿ ಗುರುವಾರ ಬೆಳಗಿನ ಜಾವವೇ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಕಾರ್ಯಕರ್ತರು ಕಂದಾಯ ಸಚಿವ ಕೃಷ್ಣ ಬೈರೇಗೌಡರ ರಾಜೀನಾಮೆ ನೀಡಲು ಒತ್ತಾಯಿಸಿ ತಹಸೀಲ್ದಾರ್ ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ನಡೆಸಿದರು. ಗರುಡಪಾಳ್ಯ ಗ್ರಾಮದಲ್ಲಿ ಒತ್ತುವರಿ

ತಾಲೂಕಿನ ನರಸಾಪುರ ಹೋಬಳಿಯ ಗರುಡಪಾಳ್ಯದ ಸರ್ವೇ ನಂಬರ್.೪೭ರಲ್ಲಿ ೧ ಎಕರೆ ಹಾಗೂ ಸರ್ವೇ ನಂಬರ್ ೪೬ರಲ್ಲಿ ೧೬ ಎಕರೆ ೨೦ ಗುಂಟೆ ಜಮೀನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಫಾರಂ ಹೌಸ್ ನಿರ್ಮಿಸಿಕೊಂಡಿದ್ದಾರೆ. ಅಕ್ರಮದ ಆರೋಪವು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಂಡಿದ್ದಲ್ಲಿ ಅದನ್ನು ತಿದ್ದುಪಡಿ ಮಾಡುವ ಸಾಧ್ಯತೆ ಇರುವುದರಿಂದ ಪ್ರತಿಭಟಿಸುತ್ತಿದ್ದೇವೆ ಎಂದರು. ಈಗಾಗಲೇ ಅಕ್ರಮವಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ದಾಖಲೆಗಳು ತಮ್ಮ ಬಳಿ ಇವೆ. ಈ ಸಂಬಂಧವಾಗಿ ಅಧಿಕಾರಿಗಳು ಸ್ಕ್ಯಾನ್ ಮಾಡಿ ದಾಖಲೆಗಳನ್ನು ಅಕ್ರಮ ಮಾಡಿದ್ದರೆ ಅದನ್ನು ತಿದ್ದುಪಡಿ ಮಾಡುವುದಿಲ್ಲ ಎಂಬ ಭರವಸೆಯೊಂದಿಗೆ ದಾಖಲೆಗಳನ್ನು ಧೃಡೀಕರಿಸಿ ನೀಡಬೇಕು, ಒಂದು ವೇಳೆ ಅಕ್ರಮವಾಗಿ ಒತ್ತುವರಿಯಾಗಿರುವ ಭೂಮಿ ದಾಖಲು ಮಾಡಿಲ್ಲ ಎಂಬುವುದು ತನಿಖೆಯಲ್ಲಿ ಸಾಭೀತು ಆದಲ್ಲಿ ಸಚಿವ ಸ್ಥಾನದಲ್ಲಿ ಮುಂದುವರೆಯಬಹುದಾಗಿದೆ ಎಂದು ಹೇಳಿದರು. ಸಚಿವರು ದಾಖಲೆ ಬಹಿರಂಗಪಡಿಸಲಿ

ಅಕ್ರಮವಾಗಿ ಒತ್ತುವರಿ ಮಾಡಿರುವುದನ್ನು ಅವರ ತಂದೆ, ತಾತನವರ ಕಾಲದಲ್ಲಿ ಸರ್ಕಾರದಿಂದ ಗ್ರಾಂಟ್ ಆಗಿದೆ ಎಂಬುವುದು ಶುದ್ದ ಸುಳ್ಳು, ಒಂದು ವೇಳೆ ಗ್ರಾಂಟ್ ಮಾಡಿದ್ದರೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜಮೀನನ್ನು ಸರ್ಕಾರ ಒಬ್ಬರಿಗೇ ಗ್ರಾಂಟ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಒಬ್ಬರಿಗೆ ಮಾಡಿದ್ದರೆ ಅದರ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಕಂದಾಯ ಸಚಿವರಾಗಿ ಉನ್ನತ ಸ್ಥಾನದಲ್ಲಿರುವುದರಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ದಾಖಲೆಗಳನ್ನು ತಮಗೆ ಅನುಕೂಲ ರೀತಿಯಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಸಾಧ್ಯತೆಗಳು ಇರುವುದರಿಂದ ನಾವು ಪ್ರತಿಭಟಿಸುತ್ತಿದ್ದು ದಾಖಲೆಗಳನ್ನು ಸಚಿವರ ಒತ್ತಡದ ಮೇರೆಗೆ ಅಧಿಕಾರಿಗಳು ತಿದ್ದುಪಡಿ ಮಾಡದೆ ಯಾಥಾಸ್ಥಿತಿ ಕಾಪಾಡುವ ಮೂಲಕ ದಾಖಲೆಗಳನ್ನು ಜನತೆಗೆ ಮುಂದೆ ತರಲು ನಾವು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ ಎಂದರು. ಪ್ರತಿಭಟನೆಯಲ್ಲಿ ಕೆಯುಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಯುವ ಮೋರ್ಚಾ ಬಾಲಾಜಿ, ಬಿಜೆಪಿ ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಬಿಜೆಪಿ ಕಾರ್ಯದರ್ಶಿ ರಾಜೇಶ್ ಸಿಂಗ್, ರಾಜ್ಯ ಮುಖಂಡ ಗಾಂಧಿನಗರ ವೆಂಕಟೇಶ್, ದಿಶಾ ಸಮಿತಿ ಮಾಜಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ನಗರ ಘಟಕದ ಅಧ್ಯಕ್ಷ ಸಾ.ಮಾ.ಅನಿಲ್, ನಾಮಾಲ್ ಮಂಜುನಾಥ್, ಮಹೇಶ್, ವೆಂಕಟೇಶ್, ಲಾಯರ್ ಮಂಜುನಾಥ್, ತಿಮ್ಮರಾಯಪ್ಪ, ಗೋವಿಂದಸ್ವಾಮಿ, ಮೋರ್ಚಾ ಹರೀಶ್, ಕಿರಣ್ ಇದ್ದರು.