ಕುಮಟಾ ತಾಲೂಕಿನ ನಾಡು ಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಸರ್ವೇ ನಂ.130ರಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಗೋಕರ್ಣದ ಬೇಲೆಖಾನದಿಂದ ಅಶೋಕೆ ಊರಿಗೆ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲಿಷಾ ಜಿ.ಯಲಕಪಾಟಿ ನೇತೃತ್ವದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಾಡುಮಾಸ್ಕೇರಿ ಕುಟುಂಬಸ್ಥರಿಗೆ ಮೂಲಭೂತ ಸೌಕರ್ಯ, ಬೇಲೆಖಾನ್ ಗ್ರಾಮಕ್ಕೆ ರಸ್ತೆವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಗತಿಪರ ದಲಿತ ರಕ್ಷಣಾ ವೇದಿಕೆಯಿಂದ ಜಿ.ಪಂಗೆ ಮನವಿ
ಕನ್ನಡಪ್ರಭ ವಾರ್ತೆ ಕಾರವಾರಕುಮಟಾ ತಾಲೂಕಿನ ನಾಡು ಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಸರ್ವೇ ನಂ.130ರಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಗೋಕರ್ಣದ ಬೇಲೆಖಾನದಿಂದ ಅಶೋಕೆ ಊರಿಗೆ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲಿಷಾ ಜಿ.ಯಲಕಪಾಟಿ ನೇತೃತ್ವದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ನಾಡು ಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಸರ್ವೇ ನಂ.130ರಲ್ಲಿ ಅನೇಕ ಕುಟುಂಬಗಳು ಸುಮಾರು ಮೂರು ದಶಕಗಳಿಂದ ವಾಸಿಸುತ್ತಿದ್ದರೂ ಈವರೆಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆದಿಲ್ಲ. ಸ್ಥಳೀಯ ಗ್ರಾಮ ಪಂಚಾಯತಿಯಿಂದಲೂ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿ ಮೂಲಭೂತ ಸೌಕರ್ಯಗಳು ಒದಗಿಸಲ್ಪಟ್ಟಿಲ್ಲ. ಸ್ವಾತಂತ್ರ್ಯ ಬಂದೂ 78 ವರ್ಷ ಕಳೆದರೂ ಜನರು ಇನ್ನೂ ಗುಡಿಸಿಲು ಹಾಗೂ ತಾಡಪತ್ರಿ ಮನೆಗಳಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ದೂರಿದ್ದಾರೆ.ಉತ್ತರ ಕನ್ನಡ ಜಿಲ್ಲೆಯನ್ನು ಸರ್ಕಾರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರೆದ ಜಿಲ್ಲೆಯೆಂದು ಗುರುತಿಸಿದರೂ, ಹಲವು ಗ್ರಾಪಂ ವ್ಯಾಪ್ತಿಗಳಲ್ಲಿ ಸರ್ಕಾರಿ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪುತ್ತಿಲ್ಲ. ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿದ್ದರೂ ಅನೇಕ ಬಡ ಕುಟುಂಬಗಳು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ತಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ವಲಸಿಗರಂತೆ ನಮ್ಮನ್ನು ಕಾಣಲಾಗುತ್ತಿದೆ ಎಂಬ ನೋವನ್ನು ನಿವಾಸಿಗಳು ವ್ಯಕ್ತಪಡಿಸಿದ್ದಾರೆ.ಇದೇ ವೇಳೆ ಗೋಕರ್ಣ ಗ್ರಾಮದ ಅಶೋಕೆ ಎಂಬ ಊರಿನಲ್ಲಿ ಪರಿಶಿಷ್ಟ ಜಾತಿಯ ಸುಮಾರು 120 ಕುಟುಂಬಗಳು ಅನಾದಿ ಕಾಲದಿಂದ ವಾಸಿಸುತ್ತಿದ್ದು, ಕೂಲಿ ಕೆಲಸಗಳನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ದಿನನಿತ್ಯ ಕೂಲಿಗಾಗಿ ಸುಮಾರು 1 ಕಿಮೀ ದೂರದ ತದಡಿ ಬಂದರಿಗೆ ಹೋಗಿ ದುಡಿಯುವ ಇವರಿಗೆ ಸೂಕ್ತ ರಸ್ತೆ ಸೌಲಭ್ಯವೇ ಇಲ್ಲ. ತದಡಿಯಿಂದ ಬೇಲೆಖಾನದವರೆಗೆ ರಸ್ತೆ ಇದ್ದರೂ, ಬೇಲೆಖಾನದಿಂದ ಅಶೋಕೆ ಕೇರಿಗೆ ಕೇವಲ ಸಣ್ಣ ಕಾಲುದಾರಿಯಷ್ಟೇ ಇದೆ. ಅದು ಕೂಡ ಖಾಸಗಿ ಜಾಗವಾಗಿದ್ದು, ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಕೂಡ ತಲುಪಲು ಸಾಧ್ಯವಾಗುತ್ತಿಲ್ಲ.ಅನಾರೋಗ್ಯ ಸಮಸ್ಯೆ ಎದುರಾದಾಗ ರೋಗಿಗಳನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಇದ್ದು, ಈ ಕಾರಣದಿಂದ ಹಿಂದೆ ಕೆಲವರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಹೀಗಾಗಿ ಕನಿಷ್ಠ ಆಂಬ್ಯುಲೆನ್ಸ್ ವಾಹನ ಸಂಚರಿಸಬಹುದಾದ ರಸ್ತೆ ನಿರ್ಮಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭ ವೇದಿಕೆಯ ಕಾರ್ಯಾಧ್ಯಕ್ಷ ಗಿರೀಶ ಎನ್.ಎಸ್., ಮಹಿಳಾ ರಾಜ್ಯಾಧ್ಯಕ್ಷೆ ಸುಮನ ಜಿ. ಹರಿಜನ, ಜಿಲ್ಲಾ ಕಾರ್ಯದರ್ಶಿ ನಾಗು ಎಚ್.ಕೆ., ಕಾರವಾರ ತಾಲೂಕಾಧ್ಯಕ್ಷ ಅಕ್ಷಯ ಕೊನ್ನೂರು, ವೀಣಾ ನಾಯ್ಕ, ಕಾರವಾರ ಗ್ರಾಮೀಣಾಧ್ಯಕ್ಷ ಅಕ್ಬರ ಇನಾಮದಾರ, ನಾಗರಾಜ ಗೌಡ, ಕಮಲಾ ಹರಿಜನ, ರೂಪೇಶ್ ಗುನಗಿ, ರಮಾಕಾಂತ ಗುನಗಿ ಸೇರಿದಂತೆ ಹಲವರಿದ್ದರು.
