ಸಾರಾಂಶ
ತಾಲೂಕಿನ ಖಾಸಗಿ ಬೆಳೆ ಸಮೀಕ್ಷೆಗಾರರು (ಪಿಆರ್) ವಿವಿಧ ಬೇಡಿಕೆ ಈಡೇರಿಸುವಂತೆ ತಹಸೀಲ್ದಾರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದರು.
ತಹಸೀಲ್ದಾರ ಕಾರ್ಯಾಲಯಕ್ಕೆ ಮನವಿ
ಕನ್ನಡಪ್ರಭ ವಾರ್ತೆ ಕುಷ್ಟಗಿತಾಲೂಕಿನ ಖಾಸಗಿ ಬೆಳೆ ಸಮೀಕ್ಷೆಗಾರರು (ಪಿಆರ್) ವಿವಿಧ ಬೇಡಿಕೆ ಈಡೇರಿಸುವಂತೆ ತಹಸೀಲ್ದಾರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮುಖ್ಯಸ್ಥ ಸಗರಪ್ಪ ಕುಂಬಾರ ಮಾತನಾಡಿ, ನಾವು ಕರ್ನಾಟಕ ಸರ್ಕಾರದ ಅದೇಶದಂತೆ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆಗಳ ಸಮೀಕ್ಷೆ ಮಾಡುತ್ತಿದ್ದು, ನಾವು ಮಾಡುವ ಜಮೀನಿನ ಸಮೀಕ್ಷೆಯಿಂದ ರೈತರು ಬೆಳೆ ವಿಮಾ, ಬೆಳೆ ಹಾನಿ ಪರಿಹಾರ, ಪಿಎಂ ಕಿಸಾನ್ ಸೇರಿದಂತೆ ಅನೇಕ ಲಾಭ ಪಡೆಯುತ್ತಾರೆ. ಆದರೆ, ನಮಗೆ ರಕ್ಷಣೆ ನೀಡುವ ಸಲುವಾಗಿ ಕೆಲವು ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.ಬೇಡಿಕೆಗಳು:ಸುಗಮ ರೀತಿಯಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಸುಗಮ ರೀತಿಯಲ್ಲಿ ಜಿಪಿಎಸ್ (ಜಿಪಿಎಸ್) ನಕ್ಷೆ ವ್ಯವಸ್ಥೆ ಮಾಡಿಕೊಡಬೇಕು. ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳುವಾಗ ಪಿಆರ್ ಗಳಿಗೆ ಜೀವ ಹಾನಿ ಸಂಭವಿಸಿದಲ್ಲಿ ₹10 ಲಕ್ಷದಂತೆ ಜೀವ ವಿಮೆ ಒದಗಿಸಿಕೊಡಬೇಕು, ಬೆಳೆ ಸಮೀಕ್ಷೆ ಕೈಗೊಳ್ಳಲು ಹೋದಾಗ ಹೋಲದಲ್ಲಿ ವಿವಿಧ ವಿಷ ಜಂತುಗಳಿಂದ ಸುರಕ್ಷಿತ ಕವಚಗಳನ್ನು (ಸೇಪ್ಟಿ ಶೂ ಹಾಗೂ ಇತ್ಯಾದಿಗಳು) ಕೊಡಬೇಕು, ಪ್ರತಿ ಪ್ಲಾಟಿಗೆ ₹50-100 ನಿಗದಿ ಮಾಡಬೇಕು. ಇಲ್ಲವೆ, ಪ್ರತಿ ತಿಂಗಳಿಗೆ ಸುಮಾರು ₹20 ಸಾವಿರ ನಿಗದಿ ಮಾಡಬೇಕು, ಮೊಬೈಲ್ ಹಾಗೂ ಪವರ್ ಬ್ಯಾಂಕ್ ನೀಡಬೇಕು, ಪಿಆರ್ ಗಳ ಅನುಮತಿ ಇಲ್ಲದೆ ಅಧಿಕಾರಿಗಳು ಲಾಗಿನ್ ರಿಮೋವ್ ಮಾಡಬಾರದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಯ ಸಲುವಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಹುಚ್ಚೇಶ ಬಡಿಗೇರ, ಅರುಣಾ ಹೂಲಗೇರಿ, ಕಳಕಪ್ಪ ಚಳಗೇರಿ, ಮಹೇಶ ಯರಿಗೋನಾಳ, ಯಂಕಪ್ಪ ಹಳೆಮನಿ, ಚಂದ್ರಶೇಖರ, ವೀರೇಶ, ಪಾಂಡಪ್ಪ, ಶಿವು ಎಲಿಗಾರ, ಮುತ್ತಪ್ಪ ಮಲಕಾಪುರ, ನಾಗರಾಜ ಮಲಕಾಪುರ ಸೇರಿದಂತೆ ಅನೇಕರು ಇದ್ದರು.