7- 8 ವರ್ಷಗಳ ಹಿಂದೆ ನಿರಾಶ್ರಿತರಿಗಾಗಿ ಜಮೀನು ಖರೀದಿಸಿದರೂ ಅವುಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗುತ್ತಿಲ್ಲ.
ಮುಂಡರಗಿ: ಪಟ್ಟಣದ ನಿರಾಶ್ರಿತರಿಗೆ ಕೂಡಲೇ ನಿವೇಶನ ಹಂಚಿಕೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಒತ್ತಾಯಿಸಿ ಬುಧವಾರ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ತಾಲೂಕಾಧ್ಯಕ್ಷ ಮುತ್ತಣ್ಣ ಬಳ್ಳಾರಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಹತ್ತಿರ 2017ರಲ್ಲಿ ಪಟ್ಟಣದ ಬಡ ಹಾಗೂ ನಿರ್ಗತಿಕರಿಗೆ ಮತ್ತು ನಿವೇಶನರಹಿತರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಳ್ಳುವುದಕ್ಕಾಗಿ ನಿವೇಶನ ನಿವೇಶನ ನೀಡಬೇಕೆನ್ನುವ ಉದ್ದೇಶದಿಂದ ಜಮೀನು ಖರೀದಿಸಿದ್ದು, ಇದುವರೆಗೂ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿಲ್ಲ.ನಮ್ಮ ಮುಂಡರಗಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣ. ಹೀಗಾಗಿ ಇಲ್ಲಿ ಜನಸಂಖ್ಯೆಯೂ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಜನತೆ ಮನೆ ಇಲ್ಲದೇ ಪರದಾಡುವಂತಾಗಿದೆ.
7- 8 ವರ್ಷಗಳ ಹಿಂದೆ ನಿರಾಶ್ರಿತರಿಗಾಗಿ ಜಮೀನು ಖರೀದಿಸಿದರೂ ಅವುಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗುತ್ತಿಲ್ಲ. ಶೀಘ್ರದಲ್ಲೇ ಆಶ್ರಯ ಮನೆಗಳ ನಿವೇಶನಗಳನ್ನು ವಿತರಣೆ ಮಾಡದಿದ್ದರೆ ಪುರಸಭೆ ಮುಂದೆ ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದರು.ರಾಮನಗೌಡ ಹಳೆಮನೆ, ಪ್ರವೀಣ್ ಚಿಕ್ಕಣ್ಣವರ, ದೇವರಾಜ ಹಂದ್ರಾಳ, ಕಿರಣ ದಂಡಿನ, ಪ್ರಶಾಂತ ದೊಣ್ಣಿ, ಸಂದೀಪ ಹಟ್ಟಿ, ಮಲ್ಲಪ್ಪ ಹಂದ್ರಾ ಳ, ಸೋಮಶೇಖರ ಬಳ್ಳಾರಿ, ಜಮೀರ್ ಜಿಗೇರಿ, ಮಾರುತಿ ಬಳ್ಳಾರಿ, ಅಂದಪ್ಪ ಬಿನ್ನಾಳ, ಬಾಬುಸಾಬ್ ನದಾಫ್, ಮಂಜು ಹಾಲಿನವರ, ಮುತ್ತು ಚಿಂಚಲಿ, ಚಂದ್ರು ಕುಂಬಾರ, ಶ್ರೀಕಾಂತ ಕೊಂಡಾ, ಬಸವರಾಜ ಹಿರೇಮಠ, ಉಮೇಶಪ್ಪ ಜೋಳದ, ಅಭಿ ಹಡಪದ, ಹೊನ್ನಕೇರಪ್ಪ ಮಾಡನ್ನವರ್, ಗುಡದಪ್ಪ ಚಿಕ್ಕನ್ನವರ, ಯಲ್ಲಪ್ಪ ಬೂದಿಹಾಳ, ಮಲ್ಲಪ್ಪ ಖಂಡ್ರಿ, ಶಿವು ರಾಮೇನಹಳ್ಳಿ, ಶಂಭು ಉಳ್ಳಾಗಡ್ಡಿ, ಮಂಜುಳಾ ಗಂಗಾಪುರ, ಕಾಶಿಮ್ಬಿ ಉದ್ದನವರ್, ಸುಜಾತ ಕಳಕಲ್, ಮಂಜುಳಾ ಬಂಡಿ ವಡ್ಡರ್, ಶಕುಂತಲಾ ಜಲನ್ನವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಟ್ಟಣದ ಕೋಟೆ ಭಾಗದ ಆಂಜನೇಯ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಜಾಗೃತ ವೃತ್ತ, ಅಂಬೇಡ್ಕರ್ ನಗರ, ಕೊಪ್ಪಳ ವೃತ್ತದ ಮಾರ್ಗವಾಗಿ ತಹಸೀಲ್ದಾರ್ ಕಚೇರಿ ತಲುಪಿತು.