ಸಾರಾಂಶ
ಬೈಲಹೊಂಗಲ: ಬೇವಿನಕೊಪ್ಪ-ಸಂಗೊಳ್ಳಿ ಗ್ರಾಮದ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಗೆ ಸಂಗೊಳ್ಳಿ ರಾಯಣ್ಣನ ಸೇತುವೆ ಅಂತ ಹೆಸರಿಡುವಂತೆ ಹಾಗೂ ಬೇವಿನಕೊಪ್ಪ ಗ್ರಾಮದ ಕಡೆ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸುವಂತೆ ಆಗ್ರಹಿಸಿ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಅವರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಭೇಟಿಯಾಗಿ ಮನವಿ ಮಾಡಿದರು.

ಪಟ್ಟಣದ ಶಾಸಕರ ನಿವಾಸಕ್ಕೆ ಭೇಟಿ ನೀಡಿದ ಶ್ರೀಗಳು ಶಾಸಕರ ಆರೋಗ್ಯ ವಿಚಾರಿಸಿ, ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರಿಗೆ ಭೇಟಿಯಾಗಿ ಮನವಿ ಮಾಡಿರುವ ಪ್ರಸ್ತಾವನೆಯನ್ನು ನನ್ನ ಗಮನಕ್ಕೂ ತಂದಿದ್ದಾರೆ. ಶ್ರೀಗಳ ಬೇಡಿಕೆಯನ್ನು ಪ್ರಾಮಾಣಿಕವಾಗಿ ಈಡೇರಿಸಲು ಶ್ರಮಿಸುತ್ತೇನೆ. ಬೇವಿನಕೊಪ್ಪ-ಸಂಗೊಳ್ಳಿ ಗ್ರಾಮದ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಗೆ ಸಂಗೊಳ್ಳಿ ರಾಯಣ್ಣನ ಸೇತುವೆ ಅಂತ ಹೆಸರಿಡುವಂತೆ ಹಾಗೂ ಬೇವಿನಕೊಪ್ಪ ಗ್ರಾಮದ ಕಡೆ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸಲು ಎಲ್ಲ ರೀತಿಯ ಸಹಾಯ-ಸಹಕಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.