ಮೂಲ ಸೌಲಭ್ಯಗಳಿಂದ ವಂಚಿತ: ಮತದಾನ ಬಹಿಷ್ಕರಿಸುವುದಾಗಿ ನಿವಾಸಿಗಳ ಎಚ್ಚರಿಕೆ

| Published : Apr 25 2024, 01:02 AM IST

ಮೂಲ ಸೌಲಭ್ಯಗಳಿಂದ ವಂಚಿತ: ಮತದಾನ ಬಹಿಷ್ಕರಿಸುವುದಾಗಿ ನಿವಾಸಿಗಳ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ನಾಗರೀಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನಿವಾಸಿಗಳು 1992ರಿಂದಲೂ ಸದರಿ ರಸ್ತೆ ಮತ್ತು ಚರಂಡಿಯ ಅಭಿವೃದ್ಧಿಗಾಗಿ ಮನವಿ ಮಾಡುತ್ತಿದ್ದರೂ ಪುರಸಭೆ ರಸ್ತೆ ಅಭಿವೃದ್ಧಿ ಮಾಡುತ್ತಿಲ್ಲ. ಪಟ್ಟಣ ವ್ಯಾಪ್ತಿ ಇತರೆ ರಸ್ತೆಗಳ ಅಭಿವೃದ್ಧಿಯಾಗುತ್ತಿದ್ದರೂ ಪುರಸಭೆ ಉದ್ದೇಶ ಪೂರ್ವಕವಾಗಿ ಸದರಿ ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿಲ್ಲ. ಎಷ್ಟೇ ಮನವಿ ಮಾಡಿದರೂ ಪುರಸಭೆ ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಬಸವೇಶ್ವರ ನಗರದ 3ನೇ ಕ್ರಾಸ್ ರಸ್ತೆ ಮತ್ತು ಚರಂಡಿಯನ್ನು ಅಭಿವೃದ್ಧಿ ಪಡಿಸದ ಪುರಸಭೆ ನಿಲುವು ಖಂಡಿಸಿ ಏ.26 ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಪಟ್ಟಣದ ನಾಗರೀಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನಿವಾಸಿಗಳು 1992ರಿಂದಲೂ ಸದರಿ ರಸ್ತೆ ಮತ್ತು ಚರಂಡಿಯ ಅಭಿವೃದ್ಧಿಗಾಗಿ ಮನವಿ ಮಾಡುತ್ತಿದ್ದರೂ ಪುರಸಭೆ ರಸ್ತೆ ಅಭಿವೃದ್ಧಿ ಮಾಡುತ್ತಿಲ್ಲ ಎಂದು ದೂರಿದರು.

ಪಟ್ಟಣ ವ್ಯಾಪ್ತಿ ಇತರೆ ರಸ್ತೆಗಳ ಅಭಿವೃದ್ಧಿಯಾಗುತ್ತಿದ್ದರೂ ಪುರಸಭೆ ಉದ್ದೇಶ ಪೂರ್ವಕವಾಗಿ ಸದರಿ ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿಲ್ಲ. ಎಷ್ಟೇ ಮನವಿ ಮಾಡಿದರೂ ಪುರಸಭೆ ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸುರೇಶ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸುದ್ದಿ ತಿಳಿದು ಪುರಸಭೆ ಮುಖ್ಯಾಧಿಕಾರಿ ಸತೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್ ಮತ್ತು ವಾರ್ಡ್ ಪ್ರತಿನಿಧಿ ಸದಸ್ಯೆ ಪಂಕಜ ಪ್ರಕಾಶ್ ಸ್ಥಳಕ್ಕಾಗಿಮಿಸಿ ಮನವಿ ಸ್ವೀಕರಿಸಿ ಪ್ರಸ್ತುತ ಪಟ್ಟಣದ ಅಭಿವೃದ್ಧಿಗೆ 3.60 ಕೋಟಿ ಅನುದಾನ ಬಂದಿದೆ. ಸದರಿ ರಸ್ತೆ ಅಭಿವೃದ್ಧಿಗೆ 20 ಲಕ್ಷ ರು. ಮೀಸಲಿಡಲಾಗಿದೆ ಎಂದರು.

ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಟೆಂಡರ್ ಕರೆದು ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸವ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಚುನಾವಣೆ ನಂತರ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸದಿದ್ದರೆ ಧರಣಿ ಮಾಡುವ ಎಚ್ಚರಿಕೆ ನೀಡಿದ ಮತದಾನ ಬಹಿಷ್ಕಾರದ ನಿರ್ಧಾರವನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ಕೃಷ್ಣರಾಜಪೇಟೆ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬೊಪ್ಪನಹಳ್ಳಿ ಬಸವೇಗೌಡ, ನಿವಾಸಿಗಳಾದ ಲೇಪಾಕ್ಷಿಗೌಡ, ಚಾ.ಶಿ.ಜಯಕುಮಾರ್, ಸಬ್ಬೀರ್, ಬಿ.ಸೋಮಶೇಖರ್, ರಾಮಕೃಷ್ಣೇಗೌಡ,ರಾಮೇಗವಡ, ಆನಂದ್, ಮಿಲಿಟರಿ ಶಿವಕುಮಾರ್, ತನ್ವೀರ್, ಪ್ರಭಾಕರ್ ಸೇರಿದಂತೆ ಹಲವರು ಇದ್ದರು.