ಭೂ ಮಾಲಿನ್ಯ ತಡೆಗಟ್ಟಲು ಪ್ಲಾಸ್ಟಿಕ್‌ ನಿಲ್ಲಿಸಿ

| Published : Apr 25 2024, 01:02 AM IST

ಭೂ ಮಾಲಿನ್ಯ ತಡೆಗಟ್ಟಲು ಪ್ಲಾಸ್ಟಿಕ್‌ ನಿಲ್ಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ವರ್ಷದ ವಿಶ್ವ ಭೂ ದಿನಾಚರಣೆಯ ಧ್ಯೇಯ ವಾಕ್ಯ ಪ್ಲಾಸ್ಟಿಕ್ ಮುಕ್ತ ಭೂಮಂಡಲಕ್ಕಾಗಿ ಪೈಪೋಟಿ ಎಂಬುದಾಗಿದ್ದು, ಅಂತರ್ಜಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಮಾಡಬಾರದು, ಅಂಗಡಿಗೆ ಹೋಗುವಾಗ ಕಡ್ಡಾಯವಾಗಿ ಬಟ್ಟೆಯ ಕೈಚೀಲ ಬಳಸಿ

ಕನ್ನಡಪ್ರಭ ವಾರ್ತೆ ಕೋಲಾರ

ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ತಡೆಯುವ ಮೂಲಕ ಭೂ ಮಾಲಿನ್ಯ ತಡೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು, ಸಮುದಾಯಕ್ಕೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಕಾರ್ಮಿಕರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್ ಹೊಸಮನಿ ಮನವಿ ಮಾಡಿದರು.ವಿಶ್ವ ಭೂ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಕೀಲರ ಸಂಘದಿಂದ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಹೋಂಡಾ ಕಂಪನಿಯಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ಲಾಸ್ಟಿಕ್‌ ಬಳಸಬೇಡಿ

ಈ ವರ್ಷದ ವಿಶ್ವ ಭೂ ದಿನಾಚರಣೆಯ ಧ್ಯೇಯ ವಾಕ್ಯ ಪ್ಲಾಸ್ಟಿಕ್ ಮುಕ್ತ ಭೂಮಂಡಲಕ್ಕಾಗಿ ಪೈಪೋಟಿ ಎಂಬುದಾಗಿದ್ದು, ಅಂತರ್ಜಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಮಾಡಬಾರದು, ಅಂಗಡಿಗೆ ಹೋಗುವಾಗ ಕಡ್ಡಾಯವಾಗಿ ಬಟ್ಟೆಯ ಕೈಚೀಲ ತೆಗೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕತೆ ಮೂಲಕ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುದನ್ನು ತಪ್ಪಿಸುವಲ್ಲಿ ಸಮುದಾಯ, ಕಾರ್ಮಿಕರು ಮತ್ತು ಸಮುದಾಯ ಸಹಕಾರ ನೀಡಬೇಕು, ಓದುವ ವಯಸ್ಸಿನಲ್ಲಿ ಮಕ್ಕಳನ್ನು ಉದ್ಯೋಗ, ಗ್ಯಾರೇಜ್, ಇಟ್ಟಿಗೆ ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುವ ಕಾರ್ಯ ಗಮನಕ್ಕೆ ಬಂದರೆ ಮಕ್ಕಳು ಕೂಡಲೇ ಕೂಡಲೇ ೧೦೯೮ ಸಹಾಯವಾಣಿಗೆ ದೂರು ನೀಡಿ ಎಂದರು.

ಪರಿಸರ ರಕ್ಷಣೆ ಆದ್ಯ ಕರ್ತವ್ಯ

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಪರಿಸರ ಸಂರಕ್ಷಣೆ ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ನಾವು ಗಿಡಮರಗಳನ್ನು ನಾಶ ಮಾಡಿ ಕಾಂಕ್ರಿಟ್ ಪ್ರಪಂಚದತ್ತ ಸಾಗುತ್ತಿದ್ದೇವೆ ಇದರಿಂದ ಆಗುವ ಅಪಾಯ ಎಂತದ್ದು ಎಂಬುದಕ್ಕೆ ಈ ಸಾಲಿನ ಬೇಸಿಗೆಯ ತಾಪಮಾನ ಏರಿಕೆಯೇ ನಮಗೆ ಉತ್ತರವಾಗಿದೆ ಎಂದರು.ಜಿಲ್ಲಾ ಪರಿಸರಿ ಮಾಲಿನ್ಯ ನಿಯಂತ್ರನಾಧಿಕಾರಿ ಡಾ.ಕೆ.ರಾಜು ಮಾತನಾಡಿ, ಯಾವುದೇ ಕೈಗಾರಿಕೆ ಪರಿಸರಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳುವಂತಿಲ್ಲ ಎಂದು ತಿಳಿಸಿ, ನೀರಿನ ಸಂರಕ್ಷಣೆ, ಮಳೆ ಕೊಯ್ಲು ಪದ್ದತಿಗೆ ಒತ್ತು ನೀಡಿ ಎಂದು ಕಿವಿಮಾತು ಹೇಳಿದರು.

ಪ್ರತಿಜ್ಞಾವಿಧಿ ಬೋಧನೆ

ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರಿಗೂ ಕಡ್ಡಾಯ ಮತದಾನದ ಪ್ರತಿಜ್ಞೆ ಬೋಧಿಸಲಾಯಿತು ಮತ್ತು ಕಾನೂನು ನೆರವು ಸಹಾಯವಾಣಿ ೧೫೧೦೦ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಹೋಂಡಾ ಕಂಪನಿಯ ಪರಿಸರ ಅಧಿಕಾರಿ ಆರ್.ಕೆ.ಚೈತನ್ಯ, ಹೋಂಡಾ ಕಂಪನಿ ಘಟಕ ಮುಖ್ಯಸ್ಥರಾದ ಸತೀಶ್ ಇದ್ದರು.