ವಯನಾಡು ಸಂತ್ರಸ್ತರಿಗೆ ಸಂಸದೆ ಡಾ.ಪ್ರಭಾ ನೇತೃತ್ವದಲ್ಲಿ ಅಗತ್ಯ ವಸ್ತುಗಳ ರವಾನೆ

| Published : Aug 12 2024, 01:09 AM IST

ವಯನಾಡು ಸಂತ್ರಸ್ತರಿಗೆ ಸಂಸದೆ ಡಾ.ಪ್ರಭಾ ನೇತೃತ್ವದಲ್ಲಿ ಅಗತ್ಯ ವಸ್ತುಗಳ ರವಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳದ ವಯನಾಡು ಭೂಕುಸಿತ ಸಂತ್ರಸ್ತರಿಗೆ ದಾವಣಗೆರೆ ಸಂಸದೆ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಸೂಚನೆಯಂತೆ ಎಸ್‌.ಎಸ್‌. ಕೇರ್‌ ಟ್ರಸ್ಟ್‌ ಯೂತ್ ವಿಂಗ್‌ನಿಂದ ಬಾಪೂಜಿ ವಿದ್ಯಾಸಂಸ್ಥೆ ನೌಕರರ ಸಹಕಾರದೊಂದಿಗೆ ನೆರವಿನ ಹಸ್ತ ಚಾಚಲಾಗಿದೆ.

- ಎಸ್‌ಎಸ್‌ ಕೇರ್ ಟ್ರಸ್ಟ್‌ ಯೂತ್ ವಿಂಗ್‌ ಸ್ಪಂದನೆ - - - ದಾವಣಗೆರೆ: ಕೇರಳದ ವಯನಾಡು ಭೂಕುಸಿತ ಸಂತ್ರಸ್ತರಿಗೆ ದಾವಣಗೆರೆ ಸಂಸದೆ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಸೂಚನೆಯಂತೆ ಎಸ್‌.ಎಸ್‌. ಕೇರ್‌ ಟ್ರಸ್ಟ್‌ ಯೂತ್ ವಿಂಗ್‌ನಿಂದ ಬಾಪೂಜಿ ವಿದ್ಯಾಸಂಸ್ಥೆ ನೌಕರರ ಸಹಕಾರದೊಂದಿಗೆ ನೆರವಿನ ಹಸ್ತ ಚಾಚಲಾಗಿದೆ.

ನಗರದಿಂದ ಕೇರಳದ ವಯನಾಡು ಸಂತ್ರಸ್ತ ಮಕ್ಕಳು, ಮಹಿಳೆಯರು, ಹಿರಿಯರಿಗೆ ಅನುಕೂಲ ಆಗುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಸೂಚನೆಯಂತೆ ಸಂಪನ್ನ ಮುತಾಲಿಕ್‌ ನೇತೃತ್ವದಲ್ಲಿ ಲಾರಿಗಳಲ್ಲಿ ಅಗತ್ಯ ವಸ್ತುಗಳನ್ನು ಕಳಿಸಲಾಯಿತು. ಜೊತೆಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸಹ ವಯನಾಡಿಗೆ ತೆರಳಿದ್ದಾರೆ.

ಸುಮಾರು 230 ಅಕ್ಕಿ ಪ್ಯಾಕೆಟ್‌, ಬೇಳೆ, ಎಣ್ಣೆ ಪ್ಯಾಕೆಟ್‌ಗಳು, 500 ನೀರಿನ ಬಾಟಲುಗಳು, ಟೂತ್ ಪೇಸ್ಟ್‌, ಬ್ರೆಶ್‌, ಟಿಶ್ಯೂ, ಫೇಸ್ ವೈಪ್ಸ್‌, ಡೆಟಾಲ್ ಸೇರಿದಂತೆ 100 ಹೈಜಿನ್ ಕಿಟ್, 150 ಪ್ಯಾಕ್‌ಗಳಷ್ಟು ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ಸ್‌, ಡೈಪರ್ಸ್‌, 359 ಬಾಕ್ಸ್‌ ಪ್ರಥಮ ಚಿಕಿತ್ಸೆ ಬಾಕ್ಸ್‌ಗಳು, ಔಷಧಿ, ಮಾತ್ರೆಗಳು, 170 ಬ್ಯಾಗ್‌ ಬಟ್ಟೆ, ಬ್ಲಾಕೆಂಟ್ಟ್‌ಗಳು, ಬೆಡ್ ಶೀಟ್‌ಗಳು, 20 ಸ್ಯಾನಿಟರಿ ಐಟಂಗಳು, ಬುಕ್ಸ್‌, ಪೆನ್‌, ಸ್ಕೆಚ್ ಪೆನ್ಸ್‌, 200 ಸೆಟ್‌ ಗೃಹೋಪಯೋಗಿ ವಸ್ತುಗಳಾ ಬಕೆಟ್‌, ಮ್ಯಾಟ್ಸ್‌, ಮಗ್ಸ್‌, ಕ್ಯಾರಿ ಬ್ಯಾಗ್‌ಗಳು, 50 ಕಿಟ್‌ ಸರ್ವೈವಲ್ ಕಿಟ್ಸ್‌ಗಳಲ್ಲಿ ಬ್ಯಾಟರಿ, ಫ್ಲ್ಯಾಶ್ ಲೈಟ್ಸ್‌, ಸೊಳ್ಳೆ ಪರದೆಗಳು ಇತರೆ ತುರ್ತು ಅಗತ್ಯದ ವಸ್ತುಗಳನ್ನು ದಾವಣಗೆರೆಯಿಂದ ರವಾನೆ ಮಾಡಲಾಯಿತು. ಭೂಕುಸಿತವಾದ ವಯನಾಡು ಭಾಗದ ವಿವಿಧ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಸಂಸದೆ ಸೂಚನೆಯಂತೆ ವ್ಯವಸ್ಥೆ ಮಾಡಲಾಗಿದೆ.

- - - -10ಕೆಡಿವಿಜಿ5, 6:

ಕೇರಳದ ವಯನಾಡು ಭೂಕುಸಿತ ಸಂತ್ರಸ್ಥರ ನೆರವಿಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಸೂಚನೆಯಂತೆ ಅಗತ್ಯ ವಸ್ತುಗಳನ್ನು ರವಾನೆ ಮಾಡಲಾಯಿತು.