ದೀಪ ಬೆಳಗುವ ಮೂಲಕ ಕತ್ತಲೆ ಕಳೆಯಿರಿ

| Published : Nov 11 2025, 02:45 AM IST

ಸಾರಾಂಶ

ಭಾರತ ಭಾವೈಕ್ಯತೆಯಲ್ಲಿ ಏಕತೆ ಸಾರುವ ದೇಶವಾಗಿರುವುದರ ಜತೆಗೆ ಧಾರ್ಮಿಕತೆ, ಸಂಪ್ರದಾಯ, ಸಂಸ್ಕೃತಿ, ಆಚರಣೆಗಳಿಗೂ ತನ್ನದೇ ಆದ ಮಹತ್ವ ಹೊಂದಿದೆ. ಪ್ರತಿಯೊಂದು ಧರ್ಮದವರು ಶ್ರದ್ಧೆ, ಸಂಪ್ರದಾಯಗಳಿಂದ ತಮ್ಮ ಹಬ್ಬಗಳ ಆಚರಣೆ ನಡೆಸುತ್ತಾರೆ.

ಹುಬ್ಬಳ್ಳಿ:

ದೀಪ ಬೆಳಗುವ ಮೂಲಕ ಕತ್ತಲೆ ಕಳೆಯಬೇಕು ಎನ್ನುವ ಚಿಂತನೆಯಲ್ಲಿ ಮೂಡಿ ಬಂದದ್ದೇ ಕಾರ್ತಿಕ ದೀಪೋತ್ಸವ ಎಂದು ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ ಹೇಳಿದರು.

ಇಲ್ಲಿನ ಸೇವಾಭಾರತಿ ಟ್ರಸ್ಟ್ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಮಾಸ ಎರಡು ರೀತಿಯಲ್ಲಿ ಗಮನ ಸೆಳೆಯುತ್ತದೆ. ಕಾರ್ತಿಕ ಮಾಸ ಶಿವ ಹಾಗೂ ವಿಷ್ಣು ದೇವರಿಗೆ ಪ್ರಿಯವಾದದು. ಹಾಗಾಗಿ ಶಿವ ಮತ್ತು ವಿಷ್ಣು ಭಕ್ತರು ಒಂದುಗೂಡಿ ದೇಗುಲ, ಮನೆಗಳ ಮುಂಬದಿಯಲ್ಲಿ ದೀಪ ಬೆಳಗುತ್ತಾರೆ. ಆ ದೀಪದ ಬೆಳಕಿನಲ್ಲೇ ತನ್ಮಯತೆಯನ್ನು ಕಂಡುಕೊಳ್ಳುತ್ತಾರೆ. ಪವಿತ್ರವಾದ ಕಾರ್ತಿಕ ಮಾಸವನ್ನು ಅತ್ಯಂತ ಮಂಗಳಕರ ಮಾಸವೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸ ಹಿಂದೂ ಧರ್ಮದಲ್ಲಿ ಒಂದು ವಿಶೇಷ ಮಾಸ. ಇದು ದೀಪೋತ್ಸವ, ಶಿವ ಮತ್ತು ವಿಷ್ಣು ಪೂಜೆ ಮತ್ತು ಪವಿತ್ರ ಸ್ನಾನಗಳಿಗೆ ಹೆಸರುವಾಸಿಯಾಗಿದೆ ಎಂದರು.

ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಭಾರತ ಭಾವೈಕ್ಯತೆಯಲ್ಲಿ ಏಕತೆ ಸಾರುವ ದೇಶವಾಗಿರುವುದರ ಜತೆಗೆ ಧಾರ್ಮಿಕತೆ, ಸಂಪ್ರದಾಯ, ಸಂಸ್ಕೃತಿ, ಆಚರಣೆಗಳಿಗೂ ತನ್ನದೇ ಆದ ಮಹತ್ವ ಹೊಂದಿದೆ. ಪ್ರತಿಯೊಂದು ಧರ್ಮದವರು ಶ್ರದ್ಧೆ, ಸಂಪ್ರದಾಯಗಳಿಂದ ತಮ್ಮ ಹಬ್ಬಗಳ ಆಚರಣೆ ನಡೆಸುತ್ತಾರೆ ಎಂದರು.

ವಿದ್ಯಾವಿಕಾಸ ಪ್ರಕಲ್ಪ ಸಮಿತಿಯ ಪ್ರಾಂತ ಅಧ್ಯಕ್ಷೆ ಭಾರತಿ ನಂದಕುಮಾರ, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ, ಮಾತಾಜಿ ರತ್ನಾ ಪವಾಡಶೆಟ್ಟರ್ ಸೇರಿದಂತೆ ಕಾಲನಿಯ ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.