ಪ್ರತಿಯೊಂದು ಕಾರ್ಯವನ್ನು ಭಗವಂತನ ಪ್ರೀತಿಗಾಗಿ ಮಾಡಿ

| Published : Nov 11 2025, 02:15 AM IST

ಪ್ರತಿಯೊಂದು ಕಾರ್ಯವನ್ನು ಭಗವಂತನ ಪ್ರೀತಿಗಾಗಿ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ನಿತ್ಯದ ಪ್ರತಿಯೊಂದು ಕಾರ್ಯವನ್ನು ಭಗವಂತನ ಪ್ರೀತಿಗಾಗಿ ಮಾಡಿ. ಅದರ ಫಲವನ್ನೂ ಆತನಿಗೇ ಸಮರ್ಪಿಸಿ ಎಂದು ಬೆಳಗಾವಿಯ ವಿದ್ವಾಂಸ ಧೀರೇಂದ್ರ ಆಚಾರ್ಯ ಕಟ್ಟಿ ತಿಳಿಸಿದರು.

ಸವಣೂರು: ನಿತ್ಯದ ಪ್ರತಿಯೊಂದು ಕಾರ್ಯವನ್ನು ಭಗವಂತನ ಪ್ರೀತಿಗಾಗಿ ಮಾಡಿ. ಅದರ ಫಲವನ್ನೂ ಆತನಿಗೇ ಸಮರ್ಪಿಸಿ ಎಂದು ಬೆಳಗಾವಿಯ ವಿದ್ವಾಂಸ ಧೀರೇಂದ್ರ ಆಚಾರ್ಯ ಕಟ್ಟಿ ತಿಳಿಸಿದರು.ಪಟ್ಟಣದ ಶ್ರೀ ಸತ್ಯಬೋಧ ಸ್ವಾಮೀಜಿ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಭಾಗವತ ದಶಮಸ್ಕಂದದ ಮೂರುದಿನಗಳ ಪ್ರವಚನ ಸಂಪನ್ನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು. ಸೃಷ್ಟಿ, ಸ್ಥಿತಿ, ಲಯಗಳು ಜಗನ್ನಿಯಾಮಕನಾದ ಭಗವಂತನ ಆಧೀನದಲ್ಲಿದೆ. ನಾವು ನಿರಂತರವಾಗಿ ಸತ್ಕರ್ಮಗಳನ್ನು ಕೈಗೊಳ್ಳುವ ಮೂಲಕ ದೇವ ಋಣ, ಪಿತೃ ಋಣ, ಋಷಿ ಋಣಗಳಿಂದ ಮುಕ್ತರಾಗಬೇಕು ಎಂದರು.ಮೂರು ದಿನಗಳ ಕಾಲ ಶ್ರೀ ಕೃಷ್ಣ ಪರಮಾತ್ಮನ ಅವತಾರ, ಬಾಲ ಲೀಲೆಗಳು, ದುಷ್ಟರ ಸಂಹಾರ, ಶಿಷ್ಟರ ಪರಿಪಾಲನ, ರುಕ್ಮಿಣಿ ಸಹಿತ ಷಣ್ಮಹಿಷಿಯರ ವಿವಾಹ, ಚತುರ ರಾಜಕಾರಣ, ಧರ್ಮ ಸಂರಕ್ಷಣ, ರಾಜ ಸೂಯ ಯಾಗ, ಮೊದಲಾದ ಅನೇಕ ಕಥಾ ಪ್ರಸಂಗಗಳನ್ನು ವಿವರಿಸಿದರು. ಧರ್ಮ ಸಂರಕ್ಷಣೆಗಾಗಿಯೇ ಅವತರಿಸಿದ ಶ್ರೀ ಕೃಷ್ಣನು, ಜ್ಞಾನದ ಪ್ರಸಾರಕ್ಕಾಗಿ ನೀಡಿದ ಮಹತ್ವವನ್ನು ತಿಳಿಸಿದರು.ಶ್ರೀ ಮಠದ ಪರ್ಯಾಯಸ್ಥರಾದ ಅಭಿಷೇಕ ಆಚಾರ್ಯ ರಾಯಚೂರ ನೇತೃತ್ವ ವಹಿಸಿದ್ದರು.ಅರ್ಚಕರಾದ ರಂಗಾಚಾರ್ಯ ರಾಯಚೂರ, ಪೂರ್ಣಭೋದ ಕಟ್ಟಿ, ಮಾಧವ ಆಚಾರ್ಯ ಸಿಂಗನಮಲ್ಲಿ, ಸುರೇಶ ದೇಶಪಾಂಡೆ, ಪ್ರವೀಣ ಆಚಾರ್ಯ ಆಯಿ, ಪ್ರವೀಣ ಕುಲಕರ್ಣಿ, ಭೀಮಣ್ಣ ಹತ್ತಿಮತ್ತೂರ, ಈಶಣ್ಣ ಸಾಹುಕಾರ, ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.