ಸಾರಾಂಶ
- ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಲತಾ ಪ್ರಕಾಶ ಸಲಹೆ - - - ನ್ಯಾಮತಿ: ವ್ಯಕ್ತಿಯ ಮರಣಾನಂತರ ದೇಹವು ಮಣ್ಣಲ್ಲಿ ಮಣ್ಣಾಗುವ ಅಥವಾ ಸುಟ್ಟು ಬೂದಿಯಾಗುವುದು. ಹೀಗೆ ದೇಹ ಮಣ್ಣುಪಾಲು ಆಗುವ ಬದಲು ವೈದ್ಯಕೀಯ ಕಾಲೇಜುಗಳಿಗೆ ದಾನ ಮಾಡುಬಹುದಾಗಿದೆ. ಇದರಿಂದ ವೈದ್ಯಕೀಯ ಕ್ಷೇತ್ರಕ್ಕೆ ಉಪಯೋಗ ಆಗುವುದು ಎಂದು ಅಂಗನವಾಡಿ ಕಾರ್ಯಕರ್ತೆ ಲತಾ ಪ್ರಕಾಶ ಹೇಳಿದರು.
ನ್ಯಾಮತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ ಮೂರನೇ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಡುವಯಸ್ಸಿನಲ್ಲಿ ದೇಹದಾನ ಮಾಡಲು ಆಸ್ಪತ್ರೆಗೆ ತೆರಳಿದಾಗ ಆದ ಅನುಭವ ಹಾಗೂ ಪ್ರೋತ್ಸಾಹ ನೀಡಿದವರ ಬಗ್ಗೆ ವಿವರಿಸಿದರು. ದೇಹದಾನ ಮಾಡುವುದಕ್ಕೂ ಧ್ಯೆರ್ಯ ಬೇಕು ಎಂದರು.ಪಶುವೈದ್ಯ ಇಲಾಖೆಯ ಜಾನುವಾರು ಅಧಿಕಾರಿ ಎ.ನಾಗರಾಜಪ್ಪ ಮಾತನಾಡಿ, ಎಲ್ಲರೂ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಬಡವರು, ಕನ್ನಡ ಸೇವೆ, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮೀಸಲಿಡಬೇಕು. ಇದರಿಂದ ಆತ್ಮತೃಪ್ತಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಕಸಾಪ ಕಚೇರಿಗೆ ಕಬ್ಬಿಣದ ಅಲ್ಮೇರಾ ಮತ್ತು ಕನ್ನಡ ಭವನ ಕಟ್ಟಡ ನಿರ್ಮಾಣಕ್ಕಾಗಿ ₹5 ಸಾವಿರ ದೇಣಿಗೆ ನೀಡಿರುವುದಾಗಿ ತಿಳಿಸಿದರು.
ಸಾಹಿತ್ಯ ಸೌರಭ ಕಾರ್ಯಕ್ರಮ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಮಾಜಿ ಪತ್ರಕರ್ತ ಹುರುಕಡಲೆ ಶಿವಾನಂದಪ್ಪ ವಹಿಸಿದ್ದರು.ಮರಣ ನಂತರ ದೇಹದಾನ ಮಾಡಿರುವ ಲತಾ ಪ್ರಕಾಶ, ಮಾಜಿ ಪತ್ರಕರ್ತ ಎಚ್.ಶಿವಾನಂದಪ್ಪ 87 ವಸಂತಗಳನ್ನು ಪೂರೈಸಿದ ಹಿನ್ನೆಲೆ ಹಾಗೂ ಸಾಮಾಜಿಕ ಕಾರ್ಯಕರ್ತ, ಜಾನುವಾರು ಅಧಿಕಾರಿ ಎ.ನಾಗರಾಜಪ್ಪ ಅವರನ್ನು ಕಸಾಪ ವತಿಯಿಂದ ಗೌರವಿಸಲಾಯಿತು.
ಯುವ ಕವಿಗಳಾದ ಮಲ್ಲಿಗೇನಹಳ್ಳಿ ಯುವರಾಜ, ಯುವ ಗಾಯಕ ವಿವೇಕಾನಂದಾಚಾರ್, ಎಂ.ಆರ್. ಗಜಾನನ, ಅದ್ವಿಕಾ, ಕಾವ್ಯಾ, ಉಮಾ, ಆಚೆಮನೆ ತಿಪ್ಪೇಸ್ವಾಮಿ, ವೆಂಕಟೇಶ ನಾಯ್ಕ, ಸೊಂಡೂರು ಮಹೇಶ್ವರಪ್ಪ, ಬೆಳಗುತ್ತಿ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಕವಿರಾಜ, ಡಿ.ಪಿ.ಪುಷ್ಪಾ, ಎ.ಟಿ.ತೇಜಸ್ವಿನಿ ಇತರರು ಉಪಸ್ಥಿತರಿದ್ದರು.ನಿಕಟ ಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ, ಗೌರವ ಕಾರ್ಯದರ್ಶಿಗಳಾದ ಎಸ್.ಜಿ.ಬಸವರಾಜಪ್ಪ, ಬಿ.ಜಿ.ಚೈತ್ರಾ, ಮಹಿಳಾ ಸಂಘಟನಾ ಕಾರ್ಯದರ್ಶಿ ಈ. ಸುಮಲತಾ ಕಾರ್ಯಕ್ರಮ ನಡೆಸಿಕೊಟ್ಟರು.
- - - -11ಎಚ್.ಎಲ್.ಐ1.:ನ್ಯಾಮತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ನಡೆದ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳು ಹಾಗೂ ಸಮಾಜ ಸೇವಕರು ಪಾಲ್ಗೊಂಡರು.